ETV Bharat / international

ಕೊರೊನಾ ರೂಪಾಂತರ: ಜಗತ್ತಿನಲ್ಲಿ ತಲ್ಲಣ, ಬ್ರಿಟಿಷರೊಂದಿಗೆ ಸಂಪರ್ಕ ಕಡಿದುಕೊಂಡ ರಾಷ್ಟ್ರಗಳು..! - ಹಲವು ರಾಷ್ಟ್ರಗಳೊಂದಿಗೆ ಸಂಪರ್ಕ ಕಡಿತ

ರೂಪಾಂತರಗೊಂಡ ವೈರಸ್​ನಿಂದಾಗಿ ಜಗತ್ತಿನಲ್ಲೆಡೆ ಭೀತಿ ಆವರಿಸಿದೆ. ಇಂಗ್ಲೆಂಡ್​ನೊಂದಿಗೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ವಿಮಾನ ಸೇವೆಯನ್ನು ಸ್ಥಗಿತಗೊಳಿಸಿವೆ.

new corona from uk
ಕೊರೊನಾ ರೂಪಾಂತರದ ಪರಿಣಾಮ
author img

By

Published : Dec 21, 2020, 7:14 PM IST

Updated : Dec 21, 2020, 7:33 PM IST

ಪ್ಯಾರಿಸ್ (ಫ್ರಾನ್ಸ್): ರೂಪಾಂತರಗೊಂಡ ಕೊರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಯೂರೋಪಿನ ಹಲವು ರಾಷ್ಟ್ರಗಳು ತಮ್ಮದೇ ಆದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರಿಂದಾಗಿ ಇಂಗ್ಲೆಂಡಿನೊಂದಿಗೆ ಕೆಲವು ವ್ಯಾಪಾರ ಸಂಬಂಧಗಳನ್ನು ಕೂಡಾ ಹಲವು ರಾಷ್ಟ್ರಗಳು ಕಡಿದು ಕೊಂಡಿವೆ.

ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಫ್ರಾನ್ಸ್ ಎಲ್ಲ ರೀತಿಯ ಸಾರಿಗೆ ಮಾರ್ಗಗಳನ್ನು ಇಂಗ್ಲೆಂಡ್​ನೊಂದಿಗೆ ಸ್ಥಗಿತಗೊಳಿಸಿದೆ. ಇದರಲ್ಲಿ ಡೋವರ್ ಇಂಗ್ಲೆಂಡ್ ದಕ್ಷಿಣ ಕರಾವಳಿಯಿಂದ ಇಂಗ್ಲಿಷ್ ಕಾಲುವೆಯ ಸುರಂಗದ ಮೂಲಕ ಫ್ರಾನ್ಸ್​ಗೆ ಸಾಗಾಟವಗುತ್ತಿದ್ದ ಟ್ರಕ್​ಗಳೂ ಕೂಡಾ ಸೇರಿವೆ. ಸುಮಾರು 48 ಗಂಟೆಗಳ ಕಾಲ ಇವುಗಳಿಗೆ ನಿಷೇಧ ಹೇರಲಾಗುತ್ತದೆ.

ಸಾರಿಗೆಯನ್ನು ನಿರ್ಬಂಧಿಸಿರುವ ಈ ವೇಳೆ ರೂಪಾಂತರಗೊಂಡ ಕೊರೊನಾ ವೈರಸ್​ ಅನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇದು ಸಾಮಾನ್ಯ ನಿಯಮ ಎಂದು ಫ್ರೆಂಚ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈಗಾಗಲೇ ಸಾಗಾಟವಾಗುತ್ತಿರುವ ಸರಕುಗಳನ್ನು ಹೊಂದಿರುವ ಟ್ರಕ್​ಗಳ ಚಾಲಕರಿಗೆ ಈ ನಿರ್ಧಾರದಿಂದ ಗೊಂದಲವಾಗಿದೆ.

ಇದನ್ನೂ ಓದಿ: ರೂಪಾಂತರವಾದ ಕೊರೊನಾ ವೈರಸ್​​​: ಡಿ. 31ರವರೆಗೆ ಭಾರತ-ಬ್ರಿಟನ್​​​ ವಿಮಾನ ಸೇವೆ ರದ್ದು

ಈ ಬಗ್ಗೆ ಪೋರ್ಟ್ ಆಫ್ ಡೋವರ್ ಟ್ವೀಟ್ ಮಾಡಿದ್ದು, ಫ್ರಾನ್ಸ್​ನಲ್ಲಿ ಗಡಿ ನಿರ್ಬಂಧದಿಂದಾಗಿ ಮುಂದಿನ ಸೂಚನೆ ಬರುವವರೆಗೆ ಎಲ್ಲ ರೀತಿಯ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಹಾಂಕಾಂಗ್ ಕೂಡಾ ಬ್ರಿಟನ್​​ನಿಂದ ಬರುವ ವಿಮಾನಗಳಿಗೆ ತಡೆಯೊಡ್ಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಆರೋಗ್ಯ ಮಂತ್ರಿ ಸೋಫಿಯಾ ಚಾನ್ ಹೊಸ ರೂಪಾಂತರಗೊಂಡ ವೈರಸ್ ಅನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್​ನಿಂದ ಬಂದ ವಿಮಾನಗಳಲ್ಲಿನ ಪ್ರಯಾಣಿಕರಿಗೆ 21 ದಿನಗಳ ಕಾಲ ಕ್ವಾರಂಟೈನ್ ವಿಧಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಂಕಾಂಗ್ ಮಾತ್ರವಲ್ಲದೇ ಜರ್ಮನಿ, ಬೆಲ್ಜಿಯಂ, ಇಟಲಿ, ಐರ್ಲೆಂಡ್, ಕೆನಡಾ, ನೆದರ್​ಲ್ಯಾಂಡ್ ಕೂಡಾ ಇಂಗ್ಲೆಂಡ್​​ನೊಂದಿಗೆ ಸಂಪರ್ಕ ಕಡಿದುಕೊಂಡಿವೆ.

Last Updated : Dec 21, 2020, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.