ನ್ಯೂಯಾರ್ಕ್( ಅಮೆರಿಕ): ಉಕ್ರೇನ್ ವಿರುದ್ಧ ರಷ್ಯಾ ತನ್ನ ಯುದ್ಧವನ್ನು ತೀವ್ರಗೊಳಿಸುತ್ತಿರುವುದರಿಂದ ನಾಗರಿಕರನ್ನು ಕೊಂದು ಸಾಮೂಹಿಕ ನಿರಾಶ್ರಿತರ ಬಿಕ್ಕಟ್ಟನ್ನು ಪ್ರಚೋದಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುಟಿನ್ ಸರ್ಕಾರದಿಂದ ತೈಲು ಆಮದು ನಿಷೇಧವನ್ನು ಘೋಷಿಸಿದ್ದಾರೆ.
ಆದರೆ, ಇದನ್ನು ಅನುಸರಿಸುತ್ತಿರುವ ಬ್ರಿಟನ್ ಹಂತ ಹಂತವಾಗಿ ರಷ್ಯಾದಿಂದ ತೈಲ ಆಮದು ಸ್ಥಗಿತಗೊಳಿಸುವುದಾಗಿ ಹೇಳಿದ್ದರೂ ಎಲ್ಲಾ ಯುರೋಪ್ ದೇಶಗಳು ಈ ನಿರ್ಬಂಧಕ್ಕೆ ಬೆಂಬಲ ಸೂಚಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಅಮೆರಿಕಕ್ಕಿಂತ ಯುರೋಪ್ ತುಂಬಾ ಭಿನ್ನವಾಗಿದೆ. ಯಾಕೆಂದರೆ ಸೌದಿ ಅರೇಬಿಯಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ರಷ್ಯಾದ ಮೇಲೆ ಈ ದೇಶಗಳು ಹೆಚ್ಚು ಅವಲಂಬಿತವಾಗಿವೆ.
ರಷ್ಯಾ ತೈಲ ರಫ್ತಿನ ಮೇಲಿನ ನಿರ್ಬಂಧಗಳು ಈಗಾಗಲೇ ತೈಲ, ಗ್ಯಾಸೋಲಿನ್ ಬೆಲೆಗಳು ಎರಡೂ ಖಂಡಗಳಲ್ಲಿ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ಇದರಿಂದಾಗಿ ಗ್ರಾಹಕರು, ವ್ಯವಹಾರಗಳು, ಹಣಕಾಸು ಮಾರುಕಟ್ಟೆಗಳು ಹಾಗೂ ಜಾಗತಿಕ ಆರ್ಥಿಕತೆ ಮತ್ತಷ್ಟು ಪಾತಾಳಕ್ಕೆ ಕುಸಿಯಲು ಕಾರಣವಾಗಿದೆ.
ರಷ್ಯಾದ ತೈಲ ಆಮದಿಗೆ ಅಮೆರಿಕ ನಿಷೇಧದಿಂದ ಏನಾಗುತ್ತದೆ?: ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆಗಳು ಹಿಂದೆಂಗಿಂತಲೂ ಹೆಚ್ಚಾಗುತ್ತವೆ. ಹೀಗಾಗಿ ಅಮೆರಿಕ ಯುರೋಪ್ ದೇಶಕ್ಕೆ ಹೇರಿರುವ ನಿಷೇಧ ಅಸ್ಪಷ್ಟವಾಗಿ ಕಂಡುಬರುತ್ತಿದೆ. ಮತ್ತೊಂದೆಡೆ ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ್, ತಾವು ರಷ್ಯಾಗೆ ಅತಿ ದೊಡ್ಡ ಗ್ರಾಹಕ ದೇಶವಾಗಿದ್ದು, ಯಾವುದೇ ನಿಷೇಧ ವಿಧಿಸುವ ಯೋಜನೆ ಹೊಂದಿಲ್ಲ ಎಂದು ಸ್ಪಷ್ಟಪಡಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ಡೆಪ್ಯುಟಿ ಸೆಕ್ರೆಟರಿ ಆಫ್ ಸ್ಟೇಟ್ ವೆಂಡಿ ಶೆರ್ಮನ್, ಯುಎಸ್ ಏಕಾಂಗಿಯಾಗಿ ಅಥವಾ ಮಿತ್ರರಾಷ್ಟ್ರಗಳ ಸಣ್ಣ ಗುಂಪಿನೊಂದಿಗೆ ಕಾರ್ಯನಿರ್ವಹಿಸಬಹುದು ಎನ್ನುವಂತಹ ಸುಳಿವು ನೀಡಿದ್ದಾರೆ.
ರಷ್ಯಾ ತೈಲದ ಮೇಲಿನ ಅಮೆರಿಕ ನಿಷೇಧ ಪುಟಿನ್ ಸರ್ಕಾರಕ್ಕೆ ಹಾನಿ ಮಾಡುತ್ತಾ?: ರಷ್ಯಾದ ಮೇಲೆ ಪರಿಣಾಮ ಕಡಿಮೆ ಇರುತ್ತದೆ. ಅಮೆರಿಕ ರಷ್ಯಾದಿಂದ ಒಂದು ಸಣ್ಣ ತೈಲದ ಪಾಲನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ, ಯಾವುದೇ ನೈಸರ್ಗಿಕ ಅನಿಲವನ್ನು ಖರೀದಿಸುವುದಿಲ್ಲ. ಕಳೆದ ವರ್ಷ ಅಮೆರಿಕದ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಆಮದುಗಳಲ್ಲಿ ರಷ್ಯಾದ ಪಾಲು ಕೇವಲ ಶೇ.8ರಷ್ಟಿದೆ.
ಒಟ್ಟಾರೆ ಆಮದು 2021ರಲ್ಲಿ 245 ಮಿಲಿಯನ್ ಬ್ಯಾರೆಲ್‌ಗಳಿಗೆ ಸಮಾನವಾಗಿದೆ. ಇದು ದಿನಕ್ಕೆ ಸರಿಸುಮಾರು 6,72,000 ಬ್ಯಾರೆಲ್‌ಗಳ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಾಗಿವೆ. ಆದರೆ, ಖರೀದಿದಾರರು ಇಂಧನವನ್ನು ದೂರವಿಟ್ಟಿದ್ದರಿಂದ ರಷ್ಯಾದ ತೈಲದ ಆಮದು ವೇಗವಾಗಿ ಕುಸಿಯುತ್ತಿದೆ.
ರಷ್ಯಾವನ್ನು ಅಂತಿಮವಾಗಿ ಜಾಗತಿಕ ಮಾರುಕಟ್ಟೆಯಿಂದ ದೂರ ಇಟ್ಟರೆ ಇರಾನ್ ಮತ್ತು ವೆನೆಜುವೆಲಾ ದೇಶಗಳು ತೈಲದ ಮೂಲಗಳಾಗಿ ಈ ರಾಷ್ಟ್ರಗಳನ್ನು ಸ್ವಾಗತಿಸಬಹುದು ಎಂದು ರಿಸ್ಟಾಡ್ ಎನರ್ಜಿಯ ವಿಶ್ಲೇಷಕ ಕ್ಲೌಡಿಯೊ ಗಲಿಂಬರ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 'ಪುಟಿನ್ ಅವರನ್ನ ನಿಲ್ಲಿಸದಿದ್ದರೆ ನಮಗೆ ಯಾವುದೇ ಸ್ಥಳ ಸುರಕ್ಷಿತವಲ್ಲ'.. ಭಾವನಾತ್ಮಕ ಪತ್ರ ಬರೆದ ಉಕ್ರೇನ್ ಅಧ್ಯಕ್ಷರ ಪತ್ನಿ!