ಲಂಡನ್: ದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯಾದಾಗಿನಿಂದ ಅದರ ಪರ ವಿರೋಧ ಚರ್ಚೆ, ಪ್ರತಿಭಟನೆ, ಸಮಾವೇಶಗಳು ನಡೆಯುತ್ತಲೇ ಇವೆ. ಇದರ ಬೆನ್ನಲ್ಲೇ ಕಾಯ್ದೆಯ ಗಂಭೀರತೆ ಬಗ್ಗೆ ಯುರೋಪಿಯನ್ ಸಂಸತ್ತಿನಲ್ಲೂ ಚರ್ಚೆ ನಡೆಯುತ್ತಿದೆ.
ವಿವಾದಾತ್ಮಕ ಪೌರತ್ವ ಕಾಯ್ದೆ (ಸಿಎಎ) ವಿಚಾರವಾಗಿ ನಿನ್ನೆ ಯುರೋಪಿಯನ್ ಪಾರ್ಲಿಮೆಂಟ್ ಎರಡು ದಿನಗಳ ಸಮಗ್ರ ಅಧಿವೇಶನ ಕೈಗೊಂಡಿತ್ತು. ಅದರಲ್ಲಿ ಕಾಯ್ದೆಯ ಕುರಿತು ಸಾಕಷ್ಟು ವಿಚಾರಗಳನ್ನು ಚರ್ಚಿಸಲಾಗಿದೆ. ಈ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು? ಯೂರೋಪಿಯನ್ ಒಕ್ಕೂಟ ಈ ವಿಚಾರದಲ್ಲಿ ಭಾಗಿಯಾಗುವ ಅವಶ್ಯಕತೆ ಇದೆಯೇ? ಎಂಬೆಲ್ಲಾ ವಿಚಾರಗಳನ್ನು ಪರಿಗಣಿಸಲಾಗಿದೆ. ಇಂದು ಕಾಯ್ದೆಯ ಪರ, ವಿರೋಧ ಮತದಾನ ಪ್ರಕ್ರಿಯೆ ನಡೆಯಲಿದೆ.
ಕೇಂದ್ರ ಕಾಯ್ದೆ ಪ್ರಶ್ನಿಸಿ ಈಗಾಗಲೇ ಸುಪ್ರೀಂಕೋರ್ಟ್‌ಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕೋರ್ಟ್ ತೀರ್ಪು ನೀಡಲಿದೆ. ಹಾಗಾಗಿ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದ್ದಾಗ ಯುರೋಪಿಯನ್ ಸಂಸತ್ತಿನಲ್ಲಿ ನಿರ್ಣಯದ ಆಧಾರದ ಮೇಲೆ ಮತ ಚಲಾಯಿಸುವುದು ಉತ್ತಮವೆಂಬ ಅಭಿಪ್ರಾಯಕ್ಕೆ ಬರಲಾಗಿದೆ.