ETV Bharat / international

ಚೀನಾ ಹಬ್ಬಿಸಿದ ಆ ಸುಳ್ಳು ಸುದ್ದಿಗಳಿಂದ ಯೂರೋಪ್​​ನಲ್ಲಿ ಹೆಚ್ಚಾಯಿತಾ ಕೊರೊನಾ ಸೋಂಕು? - ಯುರೋಪಿಯನ್ ಯೂನಿಯನ್ ಆರೋಪ

ಇತ್ತೀಚಿನ ಕೆಲ ಘಟನೆಗಳನ್ನು ಉಲ್ಲೇಖಿಸಿರುವ ದಿ ಗಾರ್ಡಿಯನ್, ಕೊರೊನಾ ವೈರಸ್​ ಕುರಿತಂತೆ ಯುರೋಪಿಯನ್ ಯೂನಿಯನ್ ವಿರುದ್ಧ ಚೀನಾ ವ್ಯವಸ್ಥಿತವಾಗಿ ಸುಳ್ಳು ಮಾಹಿತಿ ಹಬ್ಬಿಸುತ್ತಿದೆ ಎಂದು ಆರೋಪಿಸಿದೆ.

EU blames China for huge wave of COVID-19 disinformation
ಕೊರೊನಾ ವೈರಸ್​ ಕುರಿತು ಚೀನಾ ಸುಳ್ಳು ಸುದ್ದಿ ಹಬ್ಬುತ್ತಿದೆ
author img

By

Published : Jun 11, 2020, 4:38 PM IST

ಬ್ರಸೆಲ್ಸ್ : ಕೊರೊನಾ ವೈರಸ್​ ಕುರಿತು ಮೊದಲ ಬಾರಿಗೆ ಚೀನಾ ಜಾಗತಿಕವಾಗಿ ಐರೋಪ್ಯ ಒಕ್ಕೂಟದ​ ವಿರುದ್ಧ ದೊಡ್ಡ ಮಟ್ಟದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಈ ಬಗ್ಗೆ ಕೆಲ ಘಟನೆಗಳನ್ನು ಉಲ್ಲೇಖಿಸಿರುವ ಪತ್ರಿಕೆಯು, ಕಳೆದ ಏಪ್ರಿಲ್ ಮಧ್ಯದಲ್ಲಿ ಚೀನಾ ರಾಯಭಾರ ಕಚೇರಿಯ ವೆಬ್​ಸೈಟ್​ ಯುರೋಪ್​​ನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ವೈರಸ್​ ಹಬ್ಬುತ್ತಿದೆ ಎಂದು ಪ್ರಕಟಿಸಿತ್ತು. ಈ ಬಗ್ಗೆ ಫ್ರಾನ್ಸ್​​ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸುಳ್ಳು ಸುದ್ದಿಯನ್ನು ನಂಬಿದ ಆರೋಗ್ಯ ಕಾರ್ಯಕರ್ತರು ಕೆಲಸ ಮಾಡಲು ಹಿಂದೇಟು ಹಾಕಿದ್ದರು, ಪರಿಣಾಮ ಹಲವು ಜನ ಚಿಕಿತ್ಸೆ ಸಿಗದೆ ಸಾಯುವಂತಾಯಿತು ಎಂದು ಹೇಳಿದೆ.

ಅಲ್ಲದೆ, ಸುಮಾರು 80 ಫ್ರೆಂಚ್​ ಶಾಸಕರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಿರುದ್ಧ ವರ್ಣಭೇದ ನೀತಿ ಆರೋಪ ಮಾಡಿದ್ದಾರೆ ಎಂದು ಚೀನಾ ಸುಳ್ಳು ಸುದ್ದಿ ಹಬ್ಬಿರುವುದಾಗಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುರೋಪಿಯನ್ ಕಮಿಷನ್ ಉಪಾಧ್ಯಕ್ಷೆ ವೆರಾ ಜೌರೋವಾ, ನಮ್ಮ ಬಳಿ ಎಲ್ಲಾ ವಿಷಯಗಳ ಬಗ್ಗೆ ಸೂಕ್ತವಾದ ಪುರಾವೆಗಳಿಗೆ ಹಾಗಾಗಿ ಆರೋಪಗಳ ಬಗ್ಗೆ ನಾಚಿಕೆ ಪಡುವ ಪ್ರಮೇಯವೇ ಇಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.