ETV Bharat / international

ಉಕ್ರೇನ್​ ಅಧ್ಯಕ್ಷರ ಹತ್ಯೆಗೆ ರಷ್ಯಾದಿಂದ ನುರಿತ ಪಡೆಗಳ ರವಾನೆ! - ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ರಷ್ಯಾ ಭಾರಿ ಸ್ಕೆಚ್​

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೊಲ್ಲಲು ಉಕ್ರೇನ್‌ಗೆ ಕಳುಹಿಸಲಾದ ಚೆಚೆನ್ ಹೋರಾಟ ಘಟಕವನ್ನು ಉಕ್ರೇನ್​​​​ ವ್ಯವಸ್ಥಿತವಾಗಿ ತಟಸ್ಥಗೊಳಿಸಿದೆ ಎಂದು ವರದಿಗಳು ದೃಢಪಡಿಸಿವೆ. ಒಲೆಕ್ಸಿ ಡ್ಯಾನಿಲೋವ್ ದೂರದರ್ಶನದಲ್ಲಿ ಮಾಡಿದ ಭಾಷಣದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದು, ರಷ್ಯಾದ ನುರಿತ ಪಡೆಯನ್ನು ನಾವು ಸಮರ್ಥವಾಗಿ ತಡೆದು ಹಿಮ್ಮೆಟ್ಟಿಸಿದ್ದು, ಅದರ ಯೋಜನೆಗಳನ್ನು ವಿಫಲಗೊಳಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Elite fighting unit sent to assassinate Ukraine President Zelensky killed
ಉಕ್ರೇನ್​ ಅಧ್ಯಕ್ಷರ ಹತ್ಯೆಗೆ ರಷ್ಯಾದಿಂದ ನುರಿತ ಪಡೆಗಳ ರವಾನೆ!
author img

By

Published : Mar 2, 2022, 6:54 AM IST

ಕೀವ್​(ಉಕ್ರೇನ್): ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ರಷ್ಯಾ ಭಾರಿ ಸ್ಕೆಚ್​ ಹಾಕಿದೆ. ಇದಕ್ಕಾಗಿ ನುರಿತ ಶಶ್ತ್ರಸಜ್ಜಿತ ಪಡೆಯನ್ನು ಕೀವ್​ಗೆ ರವಾನಿಸಿದೆ. ಕೀವ್​ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಈ ಬಗ್ಗೆ ಮಾಹಿತಿ ನೀಡಿದ್ದು, ರಷ್ಯಾದ ಈ ಕಾರ್ಯಾಚರಣೆಯನ್ನು ಉಕ್ರೇನ್​ ತೀವ್ರವಾಗಿ ತೆಗೆದುಕೊಂಡಿದ್ದು, ಎಲ್ಲ ಆಯಾಮಗಳಿಂದಲೂ ಕಣ್ಣಿಟ್ಟಿದ್ಧೇವೆ ಎಂದು ಹೇಳಿದ್ದಾರೆ.

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೊಲ್ಲಲು ಉಕ್ರೇನ್‌ಗೆ ಕಳುಹಿಸಲಾದ ಚೆಚೆನ್ ಹೋರಾಟ ಘಟಕವನ್ನು ಉಕ್ರೇನ್​​​​ ವ್ಯವಸ್ಥಿತವಾಗಿ ತಟಸ್ಥಗೊಳಿಸಿದೆ ಎಂದು ವರದಿಗಳು ದೃಢಪಡಿಸಿವೆ. ಒಲೆಕ್ಸಿ ಡ್ಯಾನಿಲೋವ್ ದೂರದರ್ಶನದಲ್ಲಿ ಮಾಡಿದ ಭಾಷಣದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದು, ರಷ್ಯಾದ ನುರಿತ ಪಡೆಯನ್ನು ನಾವು ಸಮರ್ಥವಾಗಿ ತಡೆದು ಹಿಮ್ಮೆಟ್ಟಿಸಿದ್ದು, ಅದರ ಯೋಜನೆಗಳನ್ನು ವಿಫಲಗೊಳಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಉಕ್ರೇನ್ ಟಿವಿ ಚಾನೆಲ್‌ವೊಂದರಲ್ಲಿ ಮಾತನಾಡಿದ ಉಕ್ರೇನ್​ ರಕ್ಷಣಾ ಕಾರ್ಯದರ್ಶಿ ಡ್ಯಾನಿಲೋವ್, ಕದಿರೋವ್ ಪಡೆಗಳು ನಡೆಸಲಿರುವ ವಿಶೇಷ ಕಾರ್ಯಾಚರಣೆಯ ಬಗ್ಗೆ ನಮಗೆ ಅರಿವಿದ್ದು, ಅದನ್ನು ಹಿಮ್ಮೆಟ್ಟಿಸಲು ಬೇಕಾಗಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ನಾವು ನಮ್ಮ ಅಧ್ಯಕ್ಷರ ಜೀವ ಬಲಿಕೊಡಲು ಇಷ್ಟ ಪಡಲ್ಲ, ಉಕ್ರೇನ್​​ನ ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ, ನೀವು ಇಲ್ಲಿಂದ ಹೊರಡಿ ಎಂದು ರಷ್ಯಾಕ್ಕೆ ಡ್ಯಾನಿಲೋವ್​ ನೇರ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್​ ಅಧ್ಯಕ್ಷರೇ ರಷ್ಯಾದ ನಂಬರ್​ ಒನ್​ ಗುರಿಯಾಗಿದ್ದು, ಅಧ್ಯಕ್ಷರ ಕುಟುಂಬಕ್ಕೆ ಜೀವ ಭಯವಿದೆ. ಅಷ್ಟೇ ಅಲ್ಲ ರಷ್ಯಾ ಕೀವ್​ ವಶಪಡಿಸಿಕೊಂಡು ಉಕ್ರೇನ್​ ಮೇಲೆ ಹಿಡಿತ ಸಾಧಿಸುವ ಗುರಿ ಹೊಂದಿದೆ.

ಇದನ್ನು ಓದಿ:ರಷ್ಯಾ-ಉಕ್ರೇನ್ ಸಂಘರ್ಷ: ನಾಳೆ ಮತ್ತೊಂದು ಸುತ್ತಿನ ಮಹತ್ವದ ಕದನ ವಿರಾಮ ಮಾತುಕತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.