ETV Bharat / international

ರಷ್ಯಾ ಚುನಾವಣೆ: 179 ಕ್ಷೇತ್ರಗಳಲ್ಲಿ ಪುಟಿನ್ ಪಕ್ಷಕ್ಕೆ ಮುನ್ನಡೆ.. ಬೆಂಬಲಿಗರಲ್ಲಿ ಮನೆ ಮಾಡಿದ ಸಂಭ್ರಮ - russia

ರಷ್ಯಾ ಸಂಸತ್​ ಚುನಾವಣೆಯಲ್ಲಿ 179 ಸ್ಥಾನಗಳಲ್ಲಿ ಪುಟಿನ್ ಪಕ್ಷ ಮುನ್ನಡೆ ಸಾಧಿಸಿದೆ ಎಂದು ಆರಂಭಿಕ ಮಾಹಿತಿ ಮೂಲಕ ತಿಳಿದುಬಂದಿದೆ.

ಪುಟಿನ್ ಪಕ್ಷಕ್ಕೆ ಮುನ್ನಡೆ.. ಬೆಂಬಲಿಗರಲ್ಲಿ ಮನೆ ಮಾಡಿದ ಸಂಭ್ರಮ

author img

By

Published : Sep 20, 2021, 7:18 AM IST

ಮಾಸ್ಕೋ: ರಷ್ಯಾ ಸಂಸತ್​ ಚುನಾವಣೆಯಲ್ಲಿ ಆರಂಭಿಕ ಫಲಿತಾಂಶಗಳ ಪ್ರಕಾರ ಕ್ರೆಮ್ಲಿನ್​ ಪಕ್ಷ ಮುನ್ನಡೆ ಸಾಧಿಸಿದೆ. ಆದರೆ, ಪಕ್ಷವು ಸಂವಿಧಾನವನ್ನು ಬದಲಿಸಲು ಬೇಕಾದ ಮೂರನೇ ಎರಡರಷ್ಟು ಸ್ಥಾನಗಳನ್ನು ಪಡೆಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

2024 ರ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹಿಡಿತವನ್ನು ಗಟ್ಟಿಗೊಳಿಸುವ ಪ್ರಯತ್ನಗಳ ಪ್ರಮುಖ ಭಾಗವಾಗಿ ಈ ಚುನಾವಣೆಯನ್ನು ಪರಿಗಣಿಸಲಾಗಿದೆ. ಇದರಲ್ಲಿ ಸಂಸತ್ತಿನ (ಡುಮಾ) ನಿಯಂತ್ರಣವು ಪ್ರಮುಖವಾಗಿರುತ್ತದೆ.

ಪುಟಿನ್​​ ಪಕ್ಷಕ್ಕೆ 179 ಕ್ಷೇತ್ರಗಳಲ್ಲಿ ಮುನ್ನಡೆ

ಚುನಾವಣಾ ಆಯೋಗದ ಪ್ರಕಾರ ಯುನೈಟೆಡ್ ರಷ್ಯಾ ಪಕ್ಷ(ಪುಟಿನ್​​​)ಕ್ಕೆ ಶೇಕಡಾ 45 ರಷ್ಟು ಮತಗಳು ಬಂದಿವೆ. ಯುನೈಟೆಡ್​​ ರಷ್ಯಾ ಅಭ್ಯರ್ಥಿಗಳು 179 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪುಟಿನ್ ನೇತೃತ್ವದ ಯುನೈಟೆಡ್​​​ ನ್ಯಾಷನಲ್​​ ಪಾರ್ಟಿ ಮುನ್ನಡೆ ಸಾಧಿಸಿದೆ ಎಂದು ತಿಳಿಯುತ್ತಿದ್ದಂತೆ ಮಾಸ್ಕೋದಲ್ಲಿ ಬೆಂಬಲಿಗರು ಪಕ್ಷದ ಬಾವುಟ ಹಿಡಿದು ಸಂಭ್ರಮಾಚರಣೆ ಮಾಡಿದರು.

‘ಆಡಳಿತ ಪಕ್ಷದಿಂದ ಚುನಾವಣಾ ನಿಯಮಗಳ ಉಲ್ಲಂಘನೆ’

ಕ್ರೆಮ್ಲಿನ್​ನ ಪ್ರಮುಖ ಶತ್ರುವಾದ ಅಲೆಕ್ಸಿ ನವಲ್ನಿಗೆ ಸಂಬಂಧಿಸಿರುವ ಸಂಘಟನೆಗಳನ್ನು ರಷ್ಯಾ ಸರ್ಕಾರ ಉಗ್ರಗಾಮಿ ಎಂದು ಘೋಷಿಸಿದೆ. ಅಲ್ಲದೇ, ಪುಟಿನ್ ಸರ್ಕಾರ, ಮತದಾನದ ವೇಳೆ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅವೆಲ್ನಿ ಟೀಂ ಆರೋಪಿಸಿತ್ತು.

ಆರಂಭಿಕ ಫಲಿತಾಂಶಗಳಲ್ಲಿ ಪುಟಿನ್ ರಾಜ್ಯ ಡುಮಾಗೆ ಇತರ ಮೂರು ಪಕ್ಷಗಳು ಬೆಂಬಲಿಸಿದವರು. ಹಾಗೆಯೇ ಕಳೆದ ವರ್ಷ ಸ್ಥಾಪಿತವಾದ ನ್ಯೂ ಪೀಪಲ್ ಪಾರ್ಟಿಯನ್ನು ಕ್ರೆಮ್ಲಿನ್ ಹುಟ್ಟುಹಾಕಿದ ಪಕ್ಷ ಎನ್ನಲಾಗ್ತಿದೆ.

ಕಮ್ಯುನಿಸ್ಟ್​​ ಪಕ್ಷಕ್ಕೆ ಶೇ.22 ರಷ್ಟು ವೋಟಿಂಗ್

ಕಳೆದ ಚುನಾವಣೆಯಲ್ಲಿ ಶೇಕಡಾ 13 ರಷ್ಟು ಮತಗಳನ್ನು ಪಡೆದಿದ್ದ ಕಮ್ಯುನಿಸ್ಟ್ ಪಕ್ಷ ಈ ಬಾರಿ ಶೇಕಡಾ 22 ರಷ್ಟು ಮತಗಳನ್ನು ಪಡೆಯುವ ಮೂಲಕ ಸುಧಾರಣೆ ಕಂಡಿದೆ. ಕಳೆದ ಬಾರಿ ಯುನೈಟೆಡ್ ರಷ್ಯಾ ಶೇಕಡಾ 54 ರಷ್ಟು ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ ಶೇಕಡಾ 9 ರಷ್ಟು ಮತಗಳ ಕುಸಿತ ಕಂಡಿದೆ.

‘ಕಮ್ಯುನಿಸ್ಟ್​ ಪಕ್ಷಕ್ಕೆ ಬೆಂಬಲಿಸಲ್ಲ’

ಯುನೈಟೆಡ್ ರಷ್ಯಾಗೆ ಕಮ್ಯುನಿಸ್ಟ್ ಪಕ್ಷ ಪ್ರಬಲವಾದ ಪೈಪೋಟಿ ನೀಡಿದೆ. ನಾವು ಕಮ್ಯುನಿಸ್ಟ್ ಪಕ್ಷಕ್ಕೆ ಬೆಂಬಲ ನೀಡಲ್ಲ. ಆದರೆ, ದೇಶದಲ್ಲಿ ಕಮ್ಯುನಿಸ್ಟ್​​ ಭರ್ಜರಿ ಪ್ರಚಾರ ಮಾಡುವುದರ ಮೂಲಕ ದೇಶದಲ್ಲಿ ರಾಜಕೀಯ ಸ್ಪರ್ಧೆಯನ್ನು ಹುಟ್ಟುಹಾಕಿದೆ ಎಂದು ನವಲ್ನಿ ಸಹಾಯಕ ಲಿಯೊನಿಡ್ ಅಭಿಪ್ರಾಯಪಟ್ಟಿದ್ದಾರೆ.

ಪುಟಿನ್​ ಜನಪ್ರಿಯತೆಯೇ ಹೆಚ್ಚು

ಅಧ್ಯಕ್ಷ ಪುಟಿನ್, ಚುನಾವಣೆಗೆ ಮುಂಚಿತವಾಗಿ ಸಂಸತ್​​ನಲ್ಲಿ ಯುನೈಟೆಡ್ ರಷ್ಯಾ ಪಾರ್ಟಿಯು ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಭರವಸೆ ನೀಡಿದ್ದರು. ಈ ಹಿಂದಿನ ಚುನಾವಣೆಯಲ್ಲಿ ಪುಟಿನ್ ಪಕ್ಷವು 450 ಸ್ಥಾನಗಳಲ್ಲಿ 334 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ, ಪುಟಿನ್​​ ಯುನೈಟೆಡ್ ರಷ್ಯಾ ಭಾಗವಾಗಿದ್ದರೂ, ಪಕ್ಷಕ್ಕಿಂತ ಇಲ್ಲಿ ಪುಟಿನ್ ಜನಪ್ರಿಯತೆಯೇ ಹೆಚ್ಚಾಗಿದೆ.

ಭಿನ್ನಾಭಿಪ್ರಾಯ ಹತ್ತಿಕ್ಕುವಲ್ಲಿ ಯಶಸ್ವಿ

ಸೆಪ್ಟೆಂಬರ್ 17 ರಿಂದ 19 ರವರೆಗೆ ನಡೆದ ಚುನಾವಣಾ ಸಮಯದಲ್ಲಿ ರಷ್ಯಾದ ಅಧಿಕಾರಿಗಳು ಪ್ರತಿಭಟನೆಗಳು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ಒತ್ತಡ ಹೇರಿ ವೋಟಿಂಗ್

ಮಾಸ್ಕೋ ಮತ್ತು ಇತರ ನಗರಗಳ ಮತಕೇಂದ್ರಗಳ ಬಳಿ ಇದ್ದಕ್ಕಿದ್ದಂತೆ ಹೆಚ್ಚಿನ ಜನ ಸೇರಿದ್ದು, ಹಕ್ಕು ಚಲಾಯಿಸಲು ಬಂದರು. ಯಾಕೆಂದು ಪರಿಶೀಲಿಸಿದಾಗ, ಉದ್ಯೋಗ ನೀಡುವ ಮಾಲೀಕರು ಪುಟಿನ್ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ ಅಂತಾ ವಿಪಕ್ಷ ಆರೋಪಿಸಿದೆ.

ಇದನ್ನೂ ಓದಿ: Russian election.. ಪುಟಿನ್​ ಪಕ್ಷದಿಂದ ಮತದಾನದ ನಿಯಮ ಉಲ್ಲಂಘನೆ ಆರೋಪ

ಅಕ್ರಮ ಮತ ಚಲಾವಣೆ ನಡೆದಿರುವ ಅನೇಕ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮತಗಟ್ಟೆ ಕೇಂದ್ರಗಳಲ್ಲಿ ಓರ್ವ ವ್ಯಕ್ತಿ ಹತ್ತಾರು ಮತಗಳನ್ನು ಹಾಕುವ ದೃಶ್ಯಗಳೂ ಕಂಡುಬಂದಿವೆ. ಕೆಲವೆಡೆ ಚುನಾವಣಾ ವೀಕ್ಷಕರು ಹಾಗೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಕೂಡಾ ನಡೆದಿದೆ.

7,465 ಮತಪತ್ರಗಳು ಅಮಾನ್ಯ

ರಷ್ಯಾದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥೆ ಎಲಾ ಪಮ್ಫಿಲೋವಾ, ರಷ್ಯಾದ ವಿವಿಧೆಡೆ ಕನಿಷ್ಠ 8 ಭಾಗಗಳಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ದೃಢಪಡಿಸಿದ್ದಾರೆ. ಒಟ್ಟಾರೆಯಾಗಿ ಆಯೋಗವು ಈವರೆಗೆ 14 ಪ್ರದೇಶಗಳಲ್ಲಿ 7,465 ಮತಪತ್ರಗಳನ್ನು ಅಮಾನ್ಯಗೊಳಿಸಿದೆ.

ಅಲೆಕ್ಸಿಗೆ ‘ಜಾಲತಾಣ’ ನಿರ್ಬಂಧ

ಚುನಾವಣಾ ಭಾಗವಾಗಿ ಅಲೆಕ್ಸಿ ನವಾಲ್ನಿ ಅವರು ಸ್ಮಾರ್ಟ್ ವೋಟಿಂಗ್​ ತಂತ್ರಾಂಶವನ್ನು ಬಿಡುಗಡೆಗೊಳಿಸಿದ್ದರು. ಆದರೆ, ಈ ತಂತ್ರಾಂಶವನ್ನು ಡಿಲೀಟ್​ ಮಾಡುವಂತೆ ಗೂಗಲ್​ ಮತ್ತು ಆಪಲ್​ ಕಂಪನಿಗಳಿಗೆ ರಷ್ಯಾ ವಿದೇಶಾಂಗ ಸಚಿವಾಲಯ ಸೂಚಿಸಿದೆ. ಟೆಲಿಗ್ರಾಮ್ ಮೆಸೇಜಿಂಗ್ ಆಪ್‌ನ ಸಂಸ್ಥಾಪಕ ಪಾವೆಲ್ ಡುರೊವ್ ಶನಿವಾರ ಸ್ಮಾರ್ಟ್ ಮತದಾನಕ್ಕೆ ಮೀಸಲಾಗಿರುವ ಚಾಟ್ ಬಾಟ್ ಅನ್ನು ನಿರ್ಬಂಧಿಸಿದ್ದಾರೆ. ಸ್ಮಾರ್ಟ್ ಮತದಾನದಿಂದ ಅನುಮೋದಿಸಲಾದ ಅಭ್ಯರ್ಥಿಗಳನ್ನು ಪಟ್ಟಿ ಮಾಡುವ ಹಲವಾರು ವಿಡಿಯೊಗಳಿಗೆ ಯೂಟ್ಯೂಬ್ ಪ್ರವೇಶವನ್ನು ನಿರ್ಬಂಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.