ಜಿನೀವಾ: ಕೋವಿಡ್-19 ವಿಶ್ವಾದ್ಯಂತ ವ್ಯಾಪಿಸಿರುವುದರಿಂದ ಇದು ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ವಸಂಸ್ಥೆಯ ಯುನಿಸೆಫ್ ಪುನರುಚ್ಚರಿಸಿದೆ.
ಕೋವಿಡ್-19 ಸೋಂಕಿತರ ಸಂಖ್ಯೆ ಹಾಗೂ ಇದರಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಮಕ್ಕಳ ಮೇಲೆ ಬೀರುವ ಪರಿಣಾಮದ ಕುರಿತು ನಾವು ವಿಚಲಿತರಾಗಿದ್ದೇವೆ ಎಂದು ಯುನಿಸೆಫ್ ತನ್ನ ಪ್ರಕರಣೆಯಲ್ಲಿ ಉಲ್ಲೇಖಿಸಿದೆ.
ಸಾಂಕ್ರಾಮಿಕ ರೋಗಗಳ ಪರಿಣಾಮಗಳು ಆರೋಗ್ಯಕ್ಕೆ ಮತ್ರ ಸೀಮಿತವಾಗಿಲ್ಲ. ಅದು ಮಕ್ಕಳ ಜೀವನದ ಮೇಲೆಯೂ ಪರಿಣಾಮ ಬೀರಿದೆ ಎಂದು ನಿರ್ದೇಶಕ ಚಾಂಡಿ ಹೇಳಿದರು.
ಪ್ರಪಂಚದಾದ್ಯಂತದ ಬಡ ಕುಟುಂಬಗಳಿಗೆ ಆದಾಯ ಕಡಿಮೆಯಾಗಿದೆ. ಇದರಿಂದಾಗಿ, ಆರೋಗ್ಯ ಮತ್ತು ಆಹಾರದ ಮೇಲಿನ ಅಗತ್ಯ ಖರ್ಚುಗಳಿಗೆ ಆರ್ಥಿಕ ನೆರವಿಲ್ಲದಂತಾಗಿದೆ. ಹೀಗಾಗಿ ಬದುಕಲು ಹೆಣಗಾಡುತ್ತಿರುವ ಮನೆಗಳಲ್ಲಿನ ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದರು.
ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಮಕ್ಕಳ ಸೇವೆಗಳನ್ನು ಮರು ಸ್ಥಾಪಿಸುವಂತೆ ನಾವು ಸರ್ಕಾರಗಳನ್ನು ಕೋರುತ್ತೇವೆ. ಮಕ್ಕಳಿಗೆ ಚಿಕಿತ್ಸೆ ಮತ್ತು ಲಸಿಕೆಗಳು ಲಭ್ಯವಾಗುವಂತೆ ನೊಡಿಕೊಳ್ಳಬೇಕು ಎಂದು ಎಂದು ಚಾಂಡಿ ಹೇಳಿದರು.