ETV Bharat / international

ದಕ್ಷಿಣ ಕೆರೊಲಿನಾ ಬಳಿಯ ಚರ್ಚ್​ನಲ್ಲಿ ಚಾಡ್ವಿಕ್ ಬೋಸ್ಮನ್ ಅಂತ್ಯಕ್ರಿಯೆ

author img

By

Published : Sep 15, 2020, 11:32 AM IST

ಕ್ಯಾನ್ಸರ್​ಗೆ ಬಲಿಯಾದ ಬ್ಲ್ಯಾಕ್​​​ ಪ್ಯಾಂಥರ್ ತಾರೆ ಚಾಡ್ವಿಕ್ ಬೋಸ್ಮನ್ ಅವರನ್ನು ದಕ್ಷಿಣ ಕೆರೊಲಿನಾ ಬಳಿಯ ವೆಲ್ಫೇರ್ ಬ್ಯಾಪ್ಟಿಸ್ಟ್ ಚರ್ಚ್​ನಲ್ಲಿ ಸಮಾಧಿ ಮಾಡಲಾಗಿದೆ.

Chadwick Boseman buried near South Carolina hometown
ದಕ್ಷಿಣ ಕೆರೊಲಿನಾ ಬಳಿಯ ಚರ್ಚ್​ನಲ್ಲಿ ಚಾಡ್ವಿಕ್ ಬೋಸ್ಮನ್ ಅಂತ್ಯಕ್ರಿಯೆ

ನ್ಯೂಯಾರ್ಕ್: ಕ್ಯಾನ್ಸರ್​ಗೆ ಬಲಿಯಾದ ಮಾರ್ವೆಲ್ ಸಿನಿಮ್ಯಾಟಿಕ್ ಬ್ರಹ್ಮಾಂಡದಲ್ಲಿ ರೀಗಲ್ ಬ್ಲ್ಯಾಕ್ ಪ್ಯಾಂಥರ್ ಆಗಿ ಖ್ಯಾತಿ ಪಡೆದಿದ್ದ ನಟ ಚಾಡ್ವಿಕ್ ಬೋಸ್ಮನ್​ ಅವರನ್ನು ತವರೂರಾರದ ಆಂಡರ್ಸನ್‌ನಿಂದ 11 ಮೈಲಿ ದೂರದಲ್ಲಿರುವ ದಕ್ಷಿಣ ಕೆರೊಲಿನಾದ ಬೆಲ್ಟನ್‌ ವೆಲ್ಫೇರ್ ಬ್ಯಾಪ್ಟಿಸ್ಟ್ ಚರ್ಚ್​ನಲ್ಲಿ ಸಮಾಧಿ ಮಾಡಲಾಗಿದೆ.

ಬೋಸ್ಮನ್, ಆಗಸ್ಟ್ 28ರಂದು ಲಾಸ್ ಏಂಜಲೀಸ್​ನ ಗ್ರಿಫಿತ್ ಪಾರ್ಕ್ ಬಳಿಯ ಮನೆಯಲ್ಲಿ ಮೃತಪಟ್ಟಿದ್ದರು. ನಾಲ್ಕು ವರ್ಷಗಳ ಹಿಂದೆ ಚಾಡ್ವಿಕ್​ ಅವರಿಗೆ ಕರುಳಿನ ಕ್ಯಾನ್ಸರ್​ ದೃಢಪಟ್ಟಿತ್ತು. ಹೀಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. 2016ರಲ್ಲಿ ಶಸ್ತ್ರ ಚಿಕತ್ಸೆಗೆ ಒಳಗಾಗಿದ್ದ ಚಾಡ್ವಿಕ್, ಈ ವರ್ಷ ಮಾರ್ಚ್​ನಲ್ಲಿ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ನಾಲ್ಕು ಮಾರ್ವೆಲ್ ಚಲನಚಿತ್ರಗಳಲ್ಲಿ ಬ್ಲ್ಯಾಕ್ ಪ್ಯಾಂಥರ್ ಪಾತ್ರದಲ್ಲಿ ನಟಿಸಿದ ಚಾಡ್ವಿಕ್​, ಜಾಕಿ ರಾಬಿನ್ಸನ್ ಬಯೋಪಿಕ್ 42ರಲ್ಲಿ ಕೂಡ ನಟಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.