ETV Bharat / international

ಕೋವಿಡ್​ 19 ಹೋರಾಟಕ್ಕೆ ₹328 ಕೋಟಿ ದೇಣಿಗೆ ಸಂಗ್ರಹಿಸಿದ್ದ ಕ್ಯಾಪ್ಟನ್​ ಟಾಮ್ ನಿಧನ - 100ನೇ ವರ್ಷದಲ್ಲಿ ನಿಧನರಾದ ಕ್ಯಾಪ್ಟನ್ ಮೂರ್​

ಕುಟುಂಬಸ್ಥರು ಟಾಮ್​ರ ಅಧಿಕೃತ ಟ್ವಿಟರ್​​ನಲ್ಲಿ 100ನೇ ವಯಸ್ಸಿಗೆ ಟಾಮ್​ ಮೂರ್​ ನಿಧನರಾಗಿರುವ ಸುದ್ದಿಯನ್ನು ಪ್ರಕಟಿಸಿದ್ದಾರೆ. 'ಕ್ಯಾಪ್ಟನ್​ ಸರ್​ ಟಾಮ್​ ಮೋರ್​ 1920-21' ಎಂದು ಬರೆದು ಅವರು ಫೋಟೋವನ್ನು ಶೇರ್​ ಮಾಡಲಾಗಿದೆ.

ಸರ್​ ಕ್ಯಾಪ್ಟನ್​ ಟಾಮ್ ಮೂರ್ ನಿಧನ
ಸರ್​ ಕ್ಯಾಪ್ಟನ್​ ಟಾಮ್ ಮೂರ್ ನಿಧನ
author img

By

Published : Feb 3, 2021, 3:18 AM IST

ಲಂಡನ್​: ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೆರವಾಗಲು ದೇಣಿಗೆ ಸಂಗ್ರಹಿಸಿ ಬ್ರಿಟನ್​ ಪ್ರಜೆಗಳ ಮನಗೆದ್ದಿದ್ದ ಕ್ಯಾಪ್ಟನ್​ ಟಾಮ್​ ಮೋರ್​ ಮಂಗಳವಾರ ಕೋವಿಡ್​ 19 ಸೋಂಕಿಗೆ ಬಲಿಯಾಗಿದ್ದಾರೆ.

ಕುಟುಂಬಸ್ಥರು ಟಾಮ್​ರ ಅಧಿಕೃತ ಟ್ವಿಟರ್​​ನಲ್ಲಿ 100ನೇ ವಯಸ್ಸಿಗೆ ಟಾಮ್​ ಮೂರ್​ ನಿಧನರಾಗಿರುವ ಸುದ್ದಿಯನ್ನು ಪ್ರಕಟಿಸಿದ್ದಾರೆ. 'ಕ್ಯಾಪ್ಟನ್​ ಸರ್​ ಟಾಮ್​ ಮೋರ್​ 1920-21' ಎಂದು ಬರೆದು ಅವರು ಫೋಟೋವನ್ನು ಶೇರ್​ ಮಾಡಲಾಗಿದೆ.

ಇನ್ನು ಟಾಮ್​ ಮೂರ್​ ನಿಧನಕ್ಕೆ ಬ್ರಿಟನ್ ರಾಣಿ ಸಂತಾಪ ಸೂಚಿಸಿದ್ದಾರೆ.​ ರಾಯಲ್​ ಫ್ಯಾಮಿಲಿ ಟ್ವಿಟರ್​ ಮೂಲಕ ರಾಣಿ ಸಂತಾಪ ಸೂಚಿಸಿದ್ದಾರೆ. " ಕ್ಯಾಪ್ಟನ್​ ಸರ್​ ಟಾಮ್​ ಮತ್ತು ಅವರ ಕುಟುಂಬವನ್ನು ಕಳೆದ ವರ್ಷ ವಿಂಡ್ಸರ್​ನಲ್ಲಿ ಭೇಟಿ​ ಮಾಡಿದ್ದಕ್ಕೆ ಅವರು(ರಾಣಿ) ತುಂಬಾ ಆನಂದಿಸಿದ್ದರು. ಈ ದುಃಖದ ಸಂದರ್ಭದಲ್ಲಿ ಅವರ ಆಲೋಚನೆ ಮತ್ತು ರಾಯಲ್​ ಕುಟುಂಬ ಟಾಮ್​ ಅವರೊಂದಿಗಿರುತ್ತದೆ" ಎಂದು ಟ್ವಿಟರ್​ನಲ್ಲಿ ರಾಣಿ ಎಲಿಜಬತ್​ ಹೇಳಿಕೆಯನ್ನು ಶೇರ್​ ಮಾಡಲಾಗಿದೆ.

  • The Queen is sending a private message of condolence to the family of Captain Sir Tom Moore.

    Her Majesty very much enjoyed meeting Captain Sir Tom and his family at Windsor last year. Her thoughts and those of the Royal Family are with them. pic.twitter.com/nl1krvoUlW

    — The Royal Family (@RoyalFamily) February 2, 2021 " class="align-text-top noRightClick twitterSection" data=" ">

ಕ್ಯಾಪ್ಟನ್​ ಟಾಮ್​ ರಾಷ್ಟ್ರೀಯ ಆರೋಗ್ಯ ಸೇವೆಗಾಗಿ 1000 ಪೌಂಡ್ಸ್​ ದೇಣಿಗೆ ಸಂಗ್ರಹಿಸಲು ಆರಂಭಿಸಿದ್ದರು. ಆದರೆ ಇದು ಅವರ ನಿರೀಕ್ಷೆಗೂ ಸಾವಿರಪಟ್ಟು ಮೀರಿ ಬೆಳೆದು, ಬರೋಬ್ಬರಿ 33 ಮಿಲಿಯನ್​ ಪೌಂಡ್ಸ್​(ಸುಮಾರು 328 ಕೋಟಿರೂ ) ನಲ್ಲಿ ಕೊನೆಗೊಂಡು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ ಬರೆದಿತ್ತು. ಕ್ಯಾಪ್ಟನ್ ಟಾಮ್​ ಕಾರ್ಯಕ್ಕೆ ಸ್ವತಃ ಬ್ರಿಟನ್ ರಾಣಿ ಎಲಿಜಬತ್​ ಪ್ರಶಂಸಿಸಿದ್ದರು.

ಮಾರ್ಸ್ಟನ್ ಮೊರೆಟೈನ್​ ಗ್ರಾಮದಲ್ಲಿರುವ ನಿವಾಸದಲ್ಲಿ ಕ್ಯಾಪ್ಟನ್​ ಟಾಮ್​ ಮೂರ್​ ವಾಯು ವಿವಾರ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಕೋವಿಡ್​ ಟೆಸ್ಟ್​ ಮಾಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇದನ್ನು ಓದಿ:ಯುಕೆಯ ಲಾಕ್​ಡೌನ್​ ಹೀರೋ ‘ಕ್ಯಾಪ್ಟನ್​ ಟಾಮ್​’ಗೆ ವಕ್ಕರಿಸಿದ ಕೊರೊನಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.