ETV Bharat / international

‘ದೆಹಲಿ ಚಲೋ’ ಆಂದೋಲನಕ್ಕೆ ಬ್ರಿಟಿಷ್​ ಸಿಖ್ ನಾಯಕರ ಬೆಂಬಲ - ‘ದೆಹಲಿ ಚಲೋ’ ಆಂದೋಲನಕ್ಕೆ ಬ್ರಿಟಿಷ್​ ಸಿಖ್ ನಾಯಕರ ಬೆಂಬಲ:

ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ದೆಹಲಿ ಚಲೋ ಆಂದೋಲನವು 8ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೆ ದೇಶ-ವಿದೇಶದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಲಂಡನ್​​​​​​ನ ಬ್ರಿಟಿಷ್​​ ಸಿಖ್ ನಾಯಕರು ರೈತರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಇದು ನಮ್ಮ ಆಂತರಿಕ ವಿಚಾರವೆಂದು ಭಾರತ ಹೇಳಿದೆ.

british-sikh-politicians-voice-support-for-agitating-farmers-in-india
‘ದೆಹಲಿ ಚಲೋ’ ಆಂದೋಲನಕ್ಕೆ ಸಾಗರೋತ್ತರ ಬ್ರಿಟಿಷ್​ ಸಿಖ್ ನಾಯಕರ ಬೆಂಬಲ
author img

By

Published : Dec 3, 2020, 8:10 AM IST

ಲಂಡನ್​: ನೂತನ ಕೃಷಿ ಮಸೂದೆಗಳ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಾಗರೋತ್ತರ ರಾಷ್ಟ್ರಗಳಲ್ಲೂ ಸಹ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ಲಂಡನ್​​ ಪ್ರತಿ ಪಕ್ಷದ ಬ್ರಿಟಿಷ್ ಸಿಖ್ ನಾಯಕರು ರೈತರಿಗೆ ಬೆಂಬಲ ಸೂಚಿಸಿ ಶೀಘ್ರ ಶಾಂತಿಯುತ ಪರಿಹಾರಕ್ಕೆ ಕರೆ ನೀಡಿದ್ದಾರೆ.

ಆದರೆ ಈ ಹೇಳಿಕೆಗಳಿಗೆ ಪ್ರತಿಯಾಗಿ ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಷಯವಾಗಿ ರೈತರ ಪ್ರತಿಭಟನೆ ಕುರಿತು ವಿದೇಶಿ ನಾಯಕರ ಹೇಳಿಕೆಯು ಅನಗತ್ಯ ಹಾಗೂ ಅನೌಪಚಾರಿಕ ಎಂದಿದೆ.

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, ವಿಶೇಷವಾಗಿ ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರದ ರೈತರ ಪ್ರತಿಭಟನೆ ವಿಚಾರವಾಗಿ ಕೆಲವು ಕಾಮೆಂಟ್​​​ಗಳನ್ನು ನಾವು ಗಮನಿಸಿದ್ದೇವೆ. ಇಂತಹ ಹೇಳಿಕೆಗಳು ಅನಗತ್ಯ ಎಂದಿದ್ದಾರೆ. ಇಷ್ಟೇ ಅಲ್ಲದೆ ರಾಜತಾಂತ್ರಿಕ ಮಾತುಕತೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ತಪ್ಪಾಗಿ ನಿರೂಪಿಸಲಾಗಿದೆ ಎಂದಿದ್ದಾರೆ.

ರೈತರ ಪ್ರತಿಭಟನೆ ಸಂಬಂಧ ಬ್ರಿಟನ್​ ಪ್ರತಿಪಕ್ಷದ ಸಂಸದ ವೀರೇಂದ್ರ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಡಿದ್ದು, ಆದಷ್ಟು ಬೇಗ ಶಾಂತಿಯುತ ಪರಿಹಾರದ ನಿರೀಕ್ಷೆ ಇದೆ ಎಂದಿದ್ದಾರೆ. ಜೊತೆಗೆ ಲಕ್ಷಾಂತರ ಜನರಿಗೆ ಆಹಾರ ನೀಡುವ ಒಂದೇ ಉದ್ದೇಶದಿಂದ ರೈತರು ದಣಿವರಿಯದೆ ಕೆಲಸ ಮಾಡುತ್ತಾರೆ. ನ್ಯಾಯಯುತ ಜೀವನದ ಹಕ್ಕಿಗಾಗಿ ಪಂಜಾಬ್​ನ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. ಅಲ್ಲದೆ ಗೃಹ ಸಚಿವ ಅಮಿತ್ ಶಾ ಅವರು ಈ ಕುರಿತು ಮಾತುಕತೆಗೆ ಇಟ್ಟಿರುವ ಹೆಜ್ಜೆಯು ಪ್ರಶಂಸನೀಯ ಎಂದು ಬಣ್ಣಿಸಿದ್ದಾರೆ.

ಈ ಕುರಿತು ಲಂಡನ್​​​ನಲ್ಲಿ ಧ್ವನಿ ಎತ್ತಿರುವ ಲೇಬರ್ ಪಾರ್ಟಿಯ ಪ್ರೀತ್ ಕೌರ್ ಗಿಲ್​​, ರೈತರು ತಮ್ಮ ಜೀವನದ ಮೇಲೆ ಪ್ರಭಾವ ಬೀರುವ ವಿವಾದಾತ್ಮಕ ಮಸೂದೆಗಳ ವಿರುದ್ಧ ಪ್ರತಿಭಟನೆ ಮಾಡಿದರೆ, ಆ ಧ್ವನಿಗಳನ್ನು ಅಡಗಿಸಲು ಜಲಫಿರಂಗಿ, ಅಶ್ರುವಾಯುಗಳನ್ನು ಪ್ರಯೋಗಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಇಂದು ಕೇಂದ್ರದೊಂದಿಗೆ ಮತ್ತೊಂದು ಸಭೆ: ರೈತರ ಸಮಸ್ಯೆಗೆ ಸಿಗುತ್ತಾ ಪರಿಹಾರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.