ETV Bharat / international

ದುರ್ಬಲ ವ್ಯಕ್ತಿಗಳು ಮೊದಲು ಲಸಿಕೆ ಪಡೆಯಲಿ; ಬ್ರಿಟನ್ ​ಪ್ರಧಾನಿ - ವರ್ಚುವಲ್ ಡೌನಿಂಗ್ ಸ್ಟ್ರೀಟ್ ಪತ್ರಿಕಾಗೋಷ್ಠಿ

ವರ್ಚುವಲ್ ಡೌನಿಂಗ್ ಸ್ಟ್ರೀಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಬ್ರಿಟನ್‌ನ ಅತ್ಯಂತ ದುರ್ಬಲ ಗುಂಪಿನ ಸುಮಾರು 2 ಮಿಲಿಯನ್ ಜನರು ಮುಂದೆ ಬಂದು ಕೋವಿಡ್ ಲಸಿಕೆಗಳನ್ನು ಪಡೆಯಿರಿ ಎಂದು ಕರೆ ನೀಡಿದರು.

coronavirus vaccines
ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್
author img

By

Published : Feb 11, 2021, 7:41 PM IST

ಲಂಡನ್: ಬ್ರಿಟನ್​ನಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವಂಥ ಸುಮಾರು 2 ಮಿಲಿಯನ್​​ ಜನರಿದ್ದು, ಅವರು ಪ್ರಥಮವಾಗಿ ಕೋವಿಡ್​ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕು ಎಂದು ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್ ಕರೆ ನೀಡಿದ್ದಾರೆ.

ವರ್ಚುವಲ್ ಡೌನಿಂಗ್ ಸ್ಟ್ರೀಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾನ್ಸನ್, ಕೋವಿಡ್ ಲಸಿಕೆಗಳು "ಸುರಕ್ಷಿತ ಮತ್ತು ಪರಿಣಾಮಕಾರಿ" ಎಂಬುದನ್ನು ಒತ್ತಿಹೇಳಿದ್ದಾರೆ.

ಬ್ರಿಟನ್‌ನ ಲಸಿಕೆ ಕೋವಿಡ್​ ತಡೆಯುವಲ್ಲಿ "ಉತ್ತಮ ಪ್ರಗತಿ" ಸಾಧಿಸಿದೆ ಎಂದು ಜಾನ್ಸನ್ ಹೇಳಿದರು. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ನಲ್ಲಿ 13 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್​ ನೀಡಲಾಗಿದೆ.

ಓದಿ: ನಾಯಕತ್ವದ ವಿರುದ್ಧ ಅವಿಶ್ವಾಸ ಮತ ಚಲಾವಣೆಗೆ ಮುಂದಾದ ಯುಎಸ್ ಕ್ಯಾಪಿಟಲ್ ಪೊಲೀಸರು

ಶೇ 90ರಷ್ಟು 75 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ಶೇ 90ರಷ್ಟು ಅರ್ಹ ನಾಗರಿಕರು ಮೊದಲ ಡೋಸ್​​ ಪಡೆದಿದ್ದಾರೆ ಎಂದು ಅವರು ಹೇಳಿದರು.

ಜಾನ್ಸನ್ ಅವರ ಪ್ರಕಾರ, ಬ್ರಿಟನ್‌ನಲ್ಲಿ ಸುಮಾರು 2 ಮಿಲಿಯನ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮತ್ತು ವಯಸ್ಕ ವ್ಯಕ್ತಿಗಳಿಗೆ ಲಸಿಕೆ ತಲುಪಬೇಕಾಗಿದೆ. ಫೆಬ್ರವರಿ 15ರೊಳಗೆ 15 ಮಿಲಿಯನ್​ ಜನರಿಗೆ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.