ETV Bharat / international

ಉಕ್ರೇನ್​ನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್‌ ರೆನೌಡ್‌ ಹತ್ಯೆ

ವಿಡಿಯೋ ವರದಿಗಾರರಾಗಿದ್ದ ಬ್ರೆಂಟ್‌ ರೆನೌಡ್‌ ಮಾನವೀಯ ಕಥೆಗಳ ನಿರ್ಮಾಣದ ಮೂಲಕ ಹೆಸರು ಮಾಡಿದ್ದರು. ಪೀಬಾಡಿ ಮತ್ತು ಡುಪಾಂಟ್' ಪ್ರಶಸ್ತಿ ವಿಜೇತರಾಗಿದ್ದರು.

brent renaud
brent renaud
author img

By

Published : Mar 13, 2022, 8:37 PM IST

ಕೀವ್ (ಉಕ್ರೇನ್​): ಯುದ್ಧ ಪೀಡಿತ ಉಕ್ರೇನ್​ನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್‌ ರೆನೌಡ್‌ ಕೊಲೆಯಾಗಿದ್ದಾರೆ. ಉಕ್ರೇನ್​ನ ರಾಜಧಾನಿ ಕೀವ್​ ಹೊರವಲಯದ ಇರ್ಪಿನ್​ ಎಂಬಲ್ಲಿ ಅವರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಕೀವ್ ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ವರದಿಗಾರರಾಗಿದ್ದ ಬ್ರೆಂಟ್‌ ರೆನೌಡ್‌ ಮಾನವೀಯ ಕಥೆಗಳ ನಿರ್ಮಾಣದ ಮೂಲಕ ಹೆಸರು ಮಾಡಿದ್ದರು. ಅವರು ಹತ್ಯೆಗೀಡಾದ ಸ್ಥಳದಲ್ಲಿ 'ದಿ ನ್ಯೂಯಾರ್ಕ್‌ ಟೈಮ್ಸ್‌'ನ ಗುರುತಿನ ಚೀಟಿ ಮತ್ತು ಅಮೆರಿಕದ ಪಾಸ್​ಪೋರ್ಟ್​​ ದೊರೆತಿದೆ. ಆದರೆ, ಪ್ರಸ್ತುತ ಅವರು ದಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

  • .@nytimes is deeply saddened to learn of the death of an American journalist in Ukraine, Brent Renaud.
    Brent was a talented photographer and filmmaker, but he was not on assignment for @nytimes in Ukraine.
    Full statement is here. pic.twitter.com/bRcrnNDacQ

    — Cliff Levy (@cliffordlevy) March 13, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಉಕ್ರೇನ್​ನಿಂದ ತಾತ್ಕಾಲಿಕವಾಗಿ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ

ಕೊಲೆಯಾದ ಬ್ರೆಂಟ್‌ ರೆನೌಡ್‌ 'ಪೀಬಾಡಿ ಮತ್ತು ಡುಪಾಂಟ್' ಪ್ರಶಸ್ತಿ ವಿಜೇತರಾಗಿದ್ದರು. ಇವರು ಕೊಲೆಯಾದ ಸ್ಥಳದಲ್ಲಿ ಇತರೆ ಪತ್ರಕರ್ತರು ಸಹ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಹೋಗುವಾಗ ಈ ಗುಂಡಿನ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ರಷ್ಯಾ ದಾಳಿಗೆ 35 ಜನರು ಬಲಿ: ಅಮೆರಿಕದ ಪತ್ರಕರ್ತನಿಗೆ ಗುಂಡಿಟ್ಟು ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.