ಬ್ರೆಸಿಲಿಯಾ: ಬ್ರೆಜಿಲ್ನಲ್ಲಿ ಕೋವಿಡ್ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 85,149 ಹೊಸ ಪ್ರಕರಣಗಳು ಹಾಗೂ 2,216 ಸಾವು ವರದಿಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೀಗ ರಾಷ್ಟ್ರದ ಒಟ್ಟು ಸೋಂಕಿತರ ಸಂಖ್ಯೆ 1,72,96,118 ಹಾಗೂ ಸಾವಿನ ಸಂಖ್ಯೆ 4,84,235ಕ್ಕೆ ಏರಿಕೆಯಾಗಿದೆ.
ಬ್ರೆಜಿಲ್ನ ಆಸ್ಪತ್ರೆಗಳ 80ರಷ್ಟು ತೀವ್ರ ನಿಗಾ ಘಟಕಗಳು (ಐಸಿಯು) ಕೊರೊನಾ ರೋಗಿಗಳಿಂದ ತುಂಬಿ ಹೋಗಿದೆ. ಅದರಲ್ಲಿಯೂ ಮ್ಯಾಟೊ ಗ್ರೊಸೊ- ಡೊ- ಸುಲ್ ಮತ್ತು ಪರಾನಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶೇ.95ರಷ್ಟು ಐಸಿಯು ಭರ್ತಿಯಾಗಿದ್ದು, ವೈದ್ಯಕೀಯ ವಲಯ ಸಂಕಷ್ಟದಲ್ಲಿ ಸಿಲುಕಿದೆ.
ಇದನ್ನೂ ಓದಿ: ದೇಶದಲ್ಲಿ ನಿನ್ನೆ ಪತ್ತೆಯಾಗಿದ್ದು 84 ಸಾವಿರ ಕೋವಿಡ್ ಕೇಸ್... ಆದ್ರೆ ಬಲಿಯಾದದ್ದು 4 ಸಾವಿರ ಜನ!
ದೇಶದ ಜನಸಂಖ್ಯೆಯ ಶೇ.11.11 ರಷ್ಟು ಅಂದರೆ, ಸುಮಾರು 23.5 ಮಿಲಿಯನ್ ಜನರು ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿದ್ದು, ಜನಸಂಖ್ಯೆಯ ಶೇ.24.9 ರಷ್ಟು ಅಂದರೆ ಸುಮಾರು 52.7 ಮಿಲಿಯನ್ ಜನರಿಗೆ ಮೊದಲ ಡೋಸ್ ನೀಡಲಾಗಿದೆ.
ಕೋವಿಡ್ ಮೃತರ ಸಂಖ್ಯೆಯಲ್ಲಿ ಅಮೆರಿಕ ಬಳಿಕ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿ ಹಾಗೂ ಕೇಸ್ಗಳ ಸಂಖ್ಯೆಯಲ್ಲಿ ಅಮೆರಿಕ, ಭಾರತದ ನಂತರ ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಇದೆ.