ETV Bharat / international

ಒಮಿಕ್ರಾನ್​ ತೀವ್ರತೆ ವಿರುದ್ಧ ಬೂಸ್ಟರ್ ಡೋಸ್​ ಶೇ.80 ರಷ್ಟು ಪರಿಣಾಮಕಾರಿ..

ಒಮಿಕ್ರಾನ್ ಎಷ್ಟು ಸೌಮ್ಯ ಅಥವಾ ತೀವ್ರವಾಗಿರುತ್ತದೆ ಎಂಬುದನ್ನು ಕಂಡು ಹಿಡಿಯಲು ತಜ್ಞರು ಇನ್ನೂ ಪ್ರಯತ್ನಿಸುತ್ತಿದ್ದಾರೆ. ವೈರಸ್ ವಿರುದ್ಧ ಹೋರಾಡಲು ಪ್ರತಿಕಾಯ ಮಟ್ಟವನ್ನು ಹೆಚ್ಚಿಸಲು ಬೂಸ್ಟರ್ ಡೋಸ್ ಅನ್ನು ಪಡೆಯಲು ಯುನೈಟೆಡ್​ ಕಿಂಗ್​ಡಮ್ ತನ್ನ ಜನರಿಗೆ ಸಲಹೆ ನೀಡುತ್ತಿದೆ..

Booster
ಬೂಸ್ಟರ್ ಡೋಸ್
author img

By

Published : Dec 19, 2021, 5:44 PM IST

ಲಂಡನ್ : ಕೊರೊನಾ ವೈರಸ್​ನ ಹೊಸ ರೂಪಾಂತರಿ ಒಮಿಕ್ರಾನ್​​ನಿಂದುಂಟಾಗುವ ಅನಾರೋಗ್ಯದ ವಿರುದ್ಧ ಬೂಸ್ಟರ್ ಡೋಸ್ ಶೇ.80ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡುತ್ತದೆ ಎಂದು ಯುನೈಟೆಡ್​ ಕಿಂಗ್​ಡಮ್​ನ ಸಂಶೋಧಕರ ತಂಡವೊಂದು ತಿಳಿಸಿದೆ.

ಈ ಹಿಂದಿನ ಕೋವಿಡ್​ ರೂಪಾಂತರಿಗಳಿಗೆ ಈ ಮೊದಲು ನೀಡಿರುವ ಕೋವಿಡ್​ ಲಸಿಕೆಗಳು ಸರಿಹೋಗಬಹುದು. ಆದರೆ, ಹೊಸ ರೂಪಾಂತರಿ ಒಮಿಕ್ರಾನ್​​ಗೆ ತುತ್ತಾಗುವ ಜನರು ಆಸ್ಪತ್ರೆಗೆ ದಾಖಲಾಗದಂತೆ ನೋಡಿಕೊಳ್ಳಲು ಬೂಸ್ಟರ್​ ಡೋಸ್​ ಅವಶ್ಯಕ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು ಹೇಳುತ್ತಾರೆ.

ಒಮಿಕ್ರಾನ್​ ಅತಿ ವೇಗವಾಗಿ ಪಸರಿಸುತ್ತದೆ ಎಂಬುದನ್ನು ತಜ್ಞರು, ವಿಜ್ಞಾನಿಗಳು ಹೇಳಿದ್ದು, ಬ್ರಿಟನ್​​ನಲ್ಲಿ ಈಗಾಗಲೇ 25 ಸಾವಿರಕ್ಕೂ ಅಧಿಕ ಒಮಿಕ್ರಾನ್​ ಕೇಸ್​ ವರದಿಯಾಗಿವೆ. ಈ ಪೈಕಿ ಕಳೆದ 24 ಗಂಟೆಗಳಲ್ಲೇ 10 ಸಾವಿರ ಹೊಸ ರೂಪಾಂತರಿ ಪ್ರಕರಣ ಪತ್ತೆಯಾಗಿವೆ.

ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ಮೂರನೇ ಡೋಸ್​ ನೀಡಲು ಫೈಜರ್​ ಅಧ್ಯಯನ

ಒಮಿಕ್ರಾನ್ ಎಷ್ಟು ಸೌಮ್ಯ ಅಥವಾ ತೀವ್ರವಾಗಿರುತ್ತದೆ ಎಂಬುದನ್ನು ಕಂಡು ಹಿಡಿಯಲು ತಜ್ಞರು ಇನ್ನೂ ಪ್ರಯತ್ನಿಸುತ್ತಿದ್ದಾರೆ. ವೈರಸ್ ವಿರುದ್ಧ ಹೋರಾಡಲು ಪ್ರತಿಕಾಯ ಮಟ್ಟವನ್ನು ಹೆಚ್ಚಿಸಲು ಬೂಸ್ಟರ್ ಡೋಸ್ ಅನ್ನು ಪಡೆಯಲು ಯುನೈಟೆಡ್​ ಕಿಂಗ್​ಡಮ್ ತನ್ನ ಜನರಿಗೆ ಸಲಹೆ ನೀಡುತ್ತಿದೆ. ಈಗಾಗಲೇ ಬ್ರಿಟನ್ ವಯಸ್ಕ​ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಬೂಸ್ಟರ್​ ಡೋಸ್​ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.