ETV Bharat / international

ಉಕ್ರೇನ್‌ಗೆ ಮಾರಕ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾದ ಆಸ್ಟ್ರೇಲಿಯಾ

ಯುದ್ಧದ ಮೂಲಕ ಜಗತ್ತಿಗೆ ಕೋವಿಡ್‌ ಬಳಿಕ ತಲ್ಲಣ ಮೂಡಿಸಿರುವ ರಷ್ಯಾ ವಿರುದ್ಧ ನಿರ್ಬಂಧಗಳನ್ನು ವಿಧಿಸುತ್ತಿರುವ ದೇಶಗಳ ಸಂಖ್ಯೆ ವಿಸ್ತರಣೆಯಾಗುತ್ತಿದ್ದು, ಇದೀಗ ಆ ಪಟ್ಟಿಗೆ ಆಸ್ಟ್ರೇಲಿಯಾ ಕೂಡ ಸೇರ್ಪಡೆಯಾಗಿದೆ.

Australia to send lethal weapons to Ukraine
ಉಕ್ರೇನ್‌ಗೆ ಆಸ್ಟ್ರೇಲಿಯಾ ನೆರವಿನ ಹಸ್ತ: ಯುದ್ಧ ಪೀಡಿತ ಪುಟ್ಟ ರಾಷ್ಟ್ರಕ್ಕೆ ಮಾರಕ ಶಸ್ತ್ರಾಸ್ತ್ರದ ಘೋಷಣೆ
author img

By

Published : Feb 28, 2022, 10:21 AM IST

ಕ್ಯಾನ್‌ಬೆರಾ: ಬಲಿಷ್ಠ ರಾಷ್ಟ್ರ ರಷ್ಯಾದ ಯುದ್ಧ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿರುವ ಉಕ್ರೇನ್ ನೆರವಿಗೆ ಆಸ್ಟ್ರೇಲಿಯಾ ಧಾವಿಸಿದ್ದು, ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.

ಸೋಮವಾರ ಈ ಬಗ್ಗೆ ಆಸ್ಟ್ರೇಲಿಯಾ ಸರ್ಕಾರ ಘೋಷಣೆ ಮಾಡಿದೆ. ಆದರೆ ಯಾವ್ಯಾವ ಶಸ್ತ್ರಾಸ್ತ್ರಗಳನ್ನು ನೀಡಲಿದೆ ಎಂಬುದರ ಮಾಹಿತಿಯನ್ನು ನೀಡಿಲ್ಲ. ಕಳೆದ ಶುಕ್ರವಾರ ಯುದ್ಧಪೀಡಿತ ಉಕ್ರೇನ್‌ ಬೆಂಬಲಕ್ಕಾಗಿ ನ್ಯಾಟೋ ಟ್ರಸ್ಟ್ ಫಂಡ್‌ಗೆ 3 ಮಿಲಿಯನ್ ಡಾಲರ್‌ ಆರ್ಥಿಕ ನೆರವು, ಮಿಲಿಟರಿ ಉಪಕರಣಗಳು, ವೈದ್ಯಕೀಯ ಸರಬರಾಜು ಪೂರೈಕೆಯ ಮುಂದುವರಿದ ಭಾಗವಾಗಿ ಈ ನೆರವು ಸಿಗುತ್ತಿದೆ.

ಉಕ್ರೇನ್‌ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಕ್ಷಣಾ ಸಚಿವ ವಿಕ್ಟರ್ ಖ್ರೆನಿನ್ ಸೇರಿದಂತೆ 350ಕ್ಕೂ ಹೆಚ್ಚು ರಷ್ಯಾದ ಪ್ರಮುಖ ವ್ಯಕ್ತಿಗಳ ಮೇಲೆ ಆಸ್ಟ್ರೇಲಿಯಾ ನಿರ್ಬಂಧಗಳನ್ನು ವಿಧಿಸಿದೆ. ಬೆಲಾರಸ್‌ನ 13 ಪ್ರತಿನಿಧಿಗಳು ಮತ್ತು ಘಟಕಗಳ ಮೇಲೂ ನಿರ್ಬಂಧಗಳನ್ನು ಹೇರಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬೆಲಾರಸ್ ರಷ್ಯಾವನ್ನು ಬೆಂಬಲಿಸುತ್ತಿದೆ.

ಇದನ್ನೂ ಓದಿ: ರೊಮೇನಿಯಾ, ಪೊಲೆಂಡ್ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹಲ್ಲೆ, ಕಿರುಕುಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.