ಯೆರೆವಾನ್ (ಅರ್ಮೇನಿಯಾ): ಅರ್ಮೇನಿಯನ್ ಅಧ್ಯಕ್ಷ ಅರ್ಮೆನ್ ಸರ್ಕಿಸಿಯನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಂತರಿಕ ಹಾಗೂ ವಿದೇಶಿ ನೀತಿಗಳ ಪಾಲನೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಸಾಂವಿಧಾನಕ ಅಧಿಕಾರ ಇಲ್ಲದೇ ಇರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ತಮ್ಮ ಅಧ್ಯಕ್ಷೀಯ ವೆಬ್‌ಸೈಟ್‌ನಲ್ಲಿ ಭಾನುವಾರ ಪೋಸ್ಟ್ವೊಂದನ್ನು ಹಾಕಿ ಘೋಷಿಸಿದ್ದಾರೆ. ಯಾವುದೇ ನೈಜ ಅಧಿಕಾರ ಇಲ್ಲದೇ ರಾಜತ್ವದ ಭರವಸೆ ನೀಡುವ ವಿರೋಧಾಭಾಸದ ಪರಿಸ್ಥಿತಿ ತಮ್ಮದಾಗಿದೆ ಎಂದು ಹೇಳಿಕೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆಂತರಿಕ ಸಂಘರ್ಷ, ಸಂಭವಿಸಬಹುದಾದ ಘರ್ಷಣೆ ತಡೆಯಲು ತಮ್ಮಲ್ಲಿ ಅಧಿಕಾರ ಇಲ್ಲ. ಇವೆಲ್ಲ ನಕಾರಾತ್ಮಕ ಪರಿಣಾಮಗಳಿಗೂ ಕಾರಣವಾಗಬಹುದು. ಆದಾಗ್ಯೂ ನಾನು ನನ್ನ ಹಲವು ವರ್ಷಗಳ ಸೇವೆಯಿಂದ ಪಡೆದ ಖ್ಯಾತಿ ಮತ್ತು ಸಂಪರ್ಕಗಳು, ಬಲವಾದ, ಸ್ಥಿರ ರಾಜ್ಯವನ್ನು ನಿರ್ಮಿಸಲು ಸಹಕಾರಿಯಾಗಿವೆ ಎಂದು ಸರ್ಕಿಸ್ಸಿಯಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಿಸಿಯನ್ ಅವರು ಏಪ್ರಿಲ್ 9, 2018 ರಂದು ಏಳು ವರ್ಷಗಳ ಅವಧಿಗೆ ಅರ್ಮೇನಿಯಾದ ನಾಲ್ಕನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2015 ರಲ್ಲಿ ಅರ್ಮೇನಿಯಾ ಅಧ್ಯಕ್ಷೀಯ ಆಡಳಿತದಿಂದ ಸಂಸದೀಯ ವ್ಯವಸ್ಥೆಗೆ ಸಂವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಅಧ್ಯಕ್ಷರ ನೇರ ಆಯ್ಕೆಯ ಬದಲಾಗಿ ಇಲ್ಲಿನ ಸಂಸತ್ತು ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ಬಂದಿತ್ತು.
ಹೀಗಾಗಿ ಅಧ್ಯಕ್ಷ ಅಧಿಕಾರ ಮೊಟಕುಗೊಂಡು ಪ್ರಧಾನಿ ಕೈಯಲ್ಲಿ ಹೆಚ್ಚಿನ ಅಧಿಕಾರ ಕೇಂದ್ರೀಕೃತವಾಗಿದೆ. ಇದುವೇ ಈಗ ಅಧ್ಯಕ್ಷರ ರಾಜೀನಾಮೆಗೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ:ಭದ್ರತಾ ವಿಭಾಗ, ಸಿಐಎಸ್ಒ ಮುಖ್ಯಸ್ಥರನ್ನು ಕೆಲಸದಿಂದ ತೆಗೆದು ಹಾಕಿದ ಟ್ವಿಟರ್ ಸಿಇಒ