ಮಾಸ್ಕೋ (ರಷ್ಯಾ): ರಷ್ಯಾದ ಸೊವೆಟ್ಸ್ಕಯಾ ಗವಾನ್‌ನ ಆಗ್ನೇಯ ಭಾಗದ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಗವಾನ್‌ನ ಆಗ್ನೇಯ ಭಾಗದಿಂದ 88 ಕಿಲೋ ಮೀಟರ್ ದೂರದಲ್ಲಿ ಭೂಕಂಪನ ಕೇಂದ್ರಬಿಂದು ಇದೆ ಎಂದು ವರದಿಯಾಗಿದೆ.
ಇದಲ್ಲದೆ ಅರ್ಜಿಂಟೀನಾದಲ್ಲೂ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಇಲ್ಲಿನ ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್ ಬಳಿ ಭೂಕಂಪನ ಕೇಂದ್ರವಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ ತಿಳಿಸಿದೆ.
ಎರಡು ಕಡೆಯೂ ಭೂಕಂಪನದಲ್ಲೂ ಹಾನಿಯಾಗಿರುವುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.