ಮಾಸ್ಕೋ: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಕೆಲ ದಿನಗಳ ಕಾಲ ಕಣಿವೆ ರಾಜ್ಯದಲ್ಲೇ ಬೀಡುಬಿಟ್ಟಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾಗೆ ಪ್ರಯಾಣ ಬೆಳೆಸಿದ್ದು, ಸದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ರಷ್ಯಾ ಭದ್ರತಾ ಸಲಹೆಗಾರ ನಿಕೋಲಾಯ್ ಪಟ್ರುಶೆವ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಶ್ಮೀರ ಸಮಸ್ಯೆ ಉಲ್ಬಣಿಸಿರುವ ವೇಳೆಯಲ್ಲೇ ದೋವಲ್ ರಷ್ಯಾ ಪ್ರವಾಸ ಕುತೂಹಲಕ್ಕೆ ಕಾರಣವಾಗಿದೆ.
-
NSA Doval meets Russian counterpart in Moscow
— ANI Digital (@ani_digital) August 21, 2019 " class="align-text-top noRightClick twitterSection" data="
Read @ANI Story | https://t.co/7YXNnQuEPw pic.twitter.com/MGRVUVqPwN
">NSA Doval meets Russian counterpart in Moscow
— ANI Digital (@ani_digital) August 21, 2019
Read @ANI Story | https://t.co/7YXNnQuEPw pic.twitter.com/MGRVUVqPwNNSA Doval meets Russian counterpart in Moscow
— ANI Digital (@ani_digital) August 21, 2019
Read @ANI Story | https://t.co/7YXNnQuEPw pic.twitter.com/MGRVUVqPwN
ಭಾರತ ಮಿತ್ರರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ರಷ್ಯಾ ಕಾಶ್ಮೀರ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತಿದೆ. ದೋವಲ್ ಹಾಗೂ ಪಟ್ರುಶೇವ್ ಭಯೋತ್ಪಾದನೆ ನಿಗ್ರಹದ ಕುರಿತಂತೆ ಮಾತುಕತೆ ನಡೆಸಿದ್ದಾರೆ.
ಮುಂದಿನ ತಿಂಗಳು ಈಸ್ಟರ್ನ್ ಎಕಾನಾಮಿಕ್ ಫೋರಂ ರಷ್ಯಾದಲ್ಲಿ ಆಯೋಜನೆಯಾಗಿದ್ದು ಈ ಕಾರ್ಯಾಗಾರದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.