ಲಂಡನ್: ಇಂಗ್ಲೆಂಡ್‌ನ ಈಶಾನ್ಯ ಭಾಗದ 87 ವರ್ಷದ ಭಾರತೀಯ ಮೂಲದ ವ್ಯಕ್ತಿ ಕೊರೊನಾ ಲಸಿಕಾ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇಂದು ನ್ಯೂಕ್ಯಾಸಲ್‌ನ ಆಸ್ಪತ್ರೆಯಲ್ಲಿ ಕೋವಿಡ್-19 ವ್ಯಾಕ್ಸಿನ್ ಫೈಝರ್ಅನ್ನು ಸ್ವಯಂಪ್ರೇರಿತವಾಗಿ ಅವರು ಪಡೆದುಕೊಳ್ಳಲಿದ್ದಾರೆ.
ಟೈನ್ ಆ್ಯಂಡ್ ವೇರ್ ಸಂಸ್ಥೆಯ ಹರಿಶುಕ್ಲಾ ಎಂಬವರು ಈ ಪ್ರಯೋಗದಲ್ಲಿ ಭಾಗಿಯಾಗುತ್ತಿದ್ದಾರೆ. 'ನಾವು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡುವ ಸಮೀಪಕ್ಕೆ ಬಂದಿದ್ದೇವೆ. ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ನನ್ನ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ನನಗೆ ಖುಷಿ ಇದೆ' ಎಂದು ಶುಕ್ಲಾ ಹೇಳಿದ್ದಾರೆ.
ಓದಿ: ಫೈಝರ್ಗೆ ಜೈ ಎಂದ ಬ್ರಿಟನ್: ಮುಂದಿನ ವಾರದಿಂದಲೇ ಕೋವಿಡ್ ಲಸಿಕೆ..ಭಾರತದಲ್ಲಿ ಯಾವಾಗ?
'ಇದೊಂದು ದೊಡ್ಡ ಹೆಜ್ಜೆ' ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಬಣ್ಣಿಸಿದ್ದಾರೆ.
ಮಾರಣಾಂತಿಕ ವೈರಸ್ ಕೊರೊನಾದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಕೋಟ್ಯಂತರ ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆ ತಯಾರು ಮಾಡಲು ಮುಂದಾಗಿವೆ. ಇದೀಗ ಇಂಗ್ಲೆಂಡ್ನಲ್ಲಿ ಫೈಝರ್ ಎಂಬ ಕೋವಿಡ್-19 ಲಸಿಕೆ ತಯಾರಾಗಿದ್ದು, ಜನರಿಗೆ ಪೂರೈಸಲು ಸಿದ್ಧವಾಗಿದೆ.