ETV Bharat / international

ಉಕ್ರೇನ್​​ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ

ಖಾರ್ಕಿವ್​​ನ ಶಾಲೆ ಮೇಲೆ ರಷ್ಯಾ ಮಿಲಿಟರಿ ಪಡೆ ದಾಳಿ ನಡೆಸಿದ ಪರಿಣಾಮ 21 ಜನರು ಸಾವನ್ನಪ್ಪಿದ್ದಾರೆಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Ukraine Russia crissis
Ukraine Russia crissis
author img

By

Published : Mar 17, 2022, 9:36 PM IST

ಖಾರ್ಕಿವ್​​(ಉಕ್ರೇನ್​): ಉಕ್ರೇನ್​ ಮೇಲೆ ರಷ್ಯಾ ದಾಳಿ 22ನೇ ದಿನವೂ ಮುಂದುವರೆದಿದ್ದು, ಪೂರ್ವ ಉಕ್ರೇನ್​​ನ ಖಾರ್ಕಿವ್​​ನಲ್ಲಿರುವ ಶಾಲೆಯ ಮೇಲೆ ರಷ್ಯಾ ಮಿಲಿಟರಿ ಪಡೆಗಳು ನಡೆಸಿರುವ ಶೆಲ್​ ದಾಳಿಯಲ್ಲಿ 21 ಜನರು ಸಾವನ್ನಪ್ಪಿ, 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖಾರ್ಕಿವ್​​ನ ಹೊರಪ್ರದೇಶದಲ್ಲಿರುವ ಮೆರೆಫಾ ಪಟ್ಟಣದಲ್ಲಿರುವ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡಿರುವವರ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಕಳೆದ 22 ದಿನಗಳಿಂದಲೂ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಮುಂದುವರೆದಿದ್ದು, ಇಲ್ಲಿಯವರೆಗೆ ರಷ್ಯಾದ 7 ಸಾವಿರಕ್ಕೂ ಅಧಿಕ ಯೋಧರ ಹತ್ಯೆ ಮಾಡಿರುವುದಾಗಿ ಉಕ್ರೇನ್​ ಹೇಳಿಕೊಂಡಿದ್ದು, 14 ಸಾವಿರ ಯೋಧರು ಗಾಯಗೊಂಡಿದ್ದಾಗಿ ತಿಳಿಸಿದೆ.

ಇದನ್ನೂ ಓದಿ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ಕಾಮುಕನ ಕಂಬಿ ಹಿಂದೆ ಕಳಿಸಿದ್ಲು ಎರಡನೇ ಪತ್ನಿ

ಉಕ್ರೇನ್​ ದೇಶವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಮುಂದಾಗಿರುವ ರಷ್ಯಾ, ಖಾರ್ಕಿವ್​, ಕೀವ್​, ಸುಮಿ ಸೇರಿದಂತೆ ಪ್ರಮುಖ ನಗರಗಳ ಮೇಲೆ ಶೆಲ್, ಬಾಂಬ್ ದಾಳಿ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.