ಮ್ಯಾಡ್ರಿಡ್: ಪವಾಡಗಳು ಸಂಭವಿಸುತ್ತವೆ ಎಂದು ನಾವೆಲ್ಲರೂ ಕೇಳಿರುತ್ತೇವೆ. ಆದರೆ, ದುಃಖಕರ ಸಂಗತಿ ಎಂದರೇ ನಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ವೀಕ್ಷಿಸಲು ನಮಗೆಲ್ಲರಿಗೂ ಅವಕಾಶವಿಲ್ಲ. ಏಕೆಂದರೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಇಡೀ ಜಗತ್ತು ಸ್ಥಗಿತಗೊಂಡಿದೆ. ಇದರ ನಡುವೆ ಅಚ್ಚರಿಯ ಪವಾಡವೊಂದು ದೂರದ ಮ್ಯಾಡ್ರಿಡ್ನಲ್ಲಿ ನಡೆದಿದೆ.
ಕೊರೊನಾ ರೀತಿಯ ಮಾರಕ ಕಾಯಿಲೆ ಸ್ಪ್ಯಾನಿಷ್ ಫ್ಲೂ ನೂರು ವರ್ಷಗಳ ಹಿಂದೆ ಅಂದರೆ, 1918ರ ಜನವರಿ ತಿಂಗಳಿನಿಂದ 1920ರ ಡಿಸೆಂಬರ್‌ವರೆಗೆ ಇಡೀ ಜಗತ್ತಿನಲ್ಲಿ ಮನುಕುಲವನ್ನು ಕಾಡಿತ್ತು. ಅಂದು ಪ್ರಪಂಚದಲ್ಲಿ ಈ ಸೋಂಕಿಗೆ ಸಿಲುಕಿದವರ ಸಂಖ್ಯೆ 500 ಮಿಲಿಯನ್, ಒಟ್ಟು ಜನ ಸಂಖ್ಯೆಯಲ್ಲಿ ಶೇ 25ರಷ್ಟು ಜನಕ್ಕೆ ತಗುಲಿತ್ತು. ಇಂತಹ ಮಹಾಮಾರಿ ನಡುವೆ ಬುದುಕಿ ಉಳಿದಿದ್ದ ವೃದ್ಧಿ ಬರೋಬರಿ ನೂರು ವರ್ಷಗಳ ಬಳಿಕ ಅಂತಹದ್ದೆ ರೋಗಕ್ಕೆ ತುತ್ತಾಗಿ ಮತ್ತೆ ಬದುಕಿ ಮರುಹುಟ್ಟು ಪಡೆದಿದ್ದಾರೆ.
ಸ್ಪೇನ್ ಮೂಲದ ಇಂಗ್ಲಿಷ್ ಪತ್ರಿಕೆ 'ದಿ ಆಲಿವ್ ಪ್ರೆಸ್' 1918ರಲ್ಲಿ ವರದಿ ಮಾಡಿತ್ತು. ಆಗ ಅನಾ ಡೆಲ್ ವ್ಯಾಲೆ ಎಂಬ ಮಗು ಸ್ಪ್ಯಾನಿಷ್ ಜ್ವರದಿಂದ ಬಳಲಿ ಮತ್ತೆ ಚೇತರಿಸಿಕೊಂಡಿತ್ತು ಎಂದು ವರದಿಯಲ್ಲಿತ್ತು. ಅಸಾಮಾನ್ಯವಾಗಿ ಮಾರಣಾಂತಿಕ ಸ್ಪ್ಯಾನಿಷ್ ಫ್ಯೂ ಎಂಬ ಸಾಂಕ್ರಾಮಿಕ ರೋಗ 36 ತಿಂಗಳು ವಿಶ್ವದ 500 ಮಿಲಿಯನ್ ಜನರಿಗೆ ಸೋಂಕು ತಗುಲಿತ್ತು.
ಈಗ 102 ವರ್ಷಗಳ ನಂತರ ಅದೇ ಮಗು ಈಗ ಅಜ್ಜಿ, ಕೊರೊನಾ ವೈರಸ್ ರೋಗವನ್ನು ಗೆದ್ದು ರೋಂಡಾದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾಳೆ.
ವ್ಯಾಲೆ ಅಲ್ಕಾಲಾ ಡೆಲ್ ವ್ಯಾಲೆಯ ನರ್ಸಿಂಗ್ ಹೋಮ್ನಲ್ಲಿ ವಾಸಿಸುತ್ತಿದ್ದಳು. ಅಲ್ಲಿ 60 ಇತರ ನಿವಾಸಿಗಳೊಂದಿಗೆ ವೈರಸ್ಗೆ ತುತ್ತಾಗಿದ್ದಳು. ಸೋಂಕು ತಗುಲಿದ ಬಳಿಕ ಆಕೆಯನ್ನು ಲಾ ಲಿನಿಯಾದ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವು ದಿನಗಳ ಹಿಂದೆ ಆಕೆ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ಬಳಿಕ ಬಿಡುಗಡೆ ಮಾಡಲಾಯಿತು ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಅಕ್ಟೋಬರ್ 1913ರಲ್ಲಿ ಜನಿಸಿದ್ದ ಅನಾ, ಇನ್ನು ಆರು ತಿಂಗಳಲ್ಲಿ ಅವರು 107ನೇ ವರ್ಷಕ್ಕೆ ಕಾಲಿಡುತ್ತಾರೆ. ಇದು ಸ್ಪೇನ್‌ನಲ್ಲಿ ಸಾಂಕ್ರಾಮಿಕ ರೋಗದಿಂದ ಬದುಕುಳಿದ ಅತ್ಯಂತ ಹಿರಿಯ ವೃದ್ಧೆಯಾಗಿದ್ದಾರೆ.