ETV Bharat / international

ವುಹಾನ್​​ನಲ್ಲಿ ತಗ್ಗಿದ ಕೊರೊನಾ.. ಬಾಕಿ ಇರುವುದು 12 ಸಕ್ರಿಯ ಪ್ರಕರಣಗಳು ಮಾತ್ರ - ವುಹಾನ್​ನಲ್ಲಿ ಕೊರೊನಾ ಸೋಂಕು

ಕಳೆದ ಡಿಸೆಂಬರ್​ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದ ಚೀನಾದ ವುಹಾನ್​ನಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Wuhan registers only a dozen active COVID-19 cases
ವುಹಾನ್​​ನಲ್ಲಿ ತಗ್ಗಿದ ಕೋವಿಡ್-19
author img

By

Published : Apr 26, 2020, 1:20 PM IST

ವುಹಾನ್(ಚೀನಾ): ಕೊರೊನಾ ವೈರಸ್​ನ ಕೇಂದ್ರ ಬಿಂದು ಎಂದು ಕರೆಯಲ್ಪಡುವ ಚೀನಾದ ವುಹಾನ್​ನಲ್ಲಿ ಪ್ರಸ್ತುತ 12 ಮಂದಿ ಮಾತ್ರ ಸೋಂಕಿತರಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಚೀನಾದ ಹುಬೈ ಪ್ರಾಂತ್ಯ ವುಹಾನ್​ನಲ್ಲಿ ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾಣಿಸಿಕೊಂಡಿದ್ದ ಮಾರಣಾಂತಿಕ ಸೋಂಕು ಇಂದು ಇಡೀ ವಿಶ್ವವನ್ನೇ ಬಾಧಿಸುತ್ತಿದೆ. ಈ ಸಾಂಕ್ರಾಮಿಕವನ್ನು ತಡೆಯುವ ಉದ್ದೇಶದಿಂದ ಇಡೀ ಪ್ರಪಂಚವೇ ಲಾಕ್​​ಡೌನ್​ ಘೋಷಣೆ ಮಾಡಿದೆ. ಇಂಥ ವೈರಸ್ ಕಾಣಿಸಿಕೊಂಡಿದ್ದ ವುಹಾನ್ ಸದ್ಯ ಸೋಂಕಿನಿಂದ ಮುಕ್ತವಾಗುವತ್ತ ಸಾಗಿದೆ.

ಶನಿವಾರ 11 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಪ್ರಸ್ತುತ 12 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರದಿಂದ ಯಾವುದೇ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ. ಇಡೀ ಚೀನಾದಲ್ಲಿ 51 ಸೋಂಕಿತರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಕಳೆದ ಡಿಸೆಂಬರ್​ನಿಂದ ಇಲ್ಲಿಯವರೆಗೆ 82,827 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 4,632 ಜನ ಸಾವಿಗೀಡಾಗಿದ್ದಾರೆ. ಒಟ್ಟು 77,394 ಜನರು ಗುಣಮುಖರಾಗಿದ್ದು, ಪ್ರಸ್ತುತ 801 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.