ETV Bharat / international

ಕೊರೊನಾ ಮಹಾಮಾರಿಗೆ ಆಸ್ಪತ್ರೆ ನಿರ್ದೇಶಕನೇ ಸಾವು!

ಚೀನಾದ ವುಹಾನ್‌ನ ವುಚಾಂಗ್ ಆಸ್ಪತ್ರೆ ನಿರ್ದೇಶಕ ಲಿಯು ಝಿಮಿಂಗ್ ಇಂದು ಮುಂಜಾನೆ ಎಲ್ಲ ರೀತಿಯ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ನಡುವೆಯೂ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್‌ನಿಂದ ಮೃತಪಟ್ಟ ಆಸ್ಪತ್ರೆಯೊಂದರ ಮೊದಲ ನಿರ್ದೇಶಕ ಇವರು..

corona virus
ಕೊರೊನಾ ವೈರಸ್​
author img

By

Published : Feb 18, 2020, 2:37 PM IST

ಬೀಜಿಂಗ್​: ಕೊರೊನಾ ವೈರಸ್​ಗೆ ಚೀನಾದಲ್ಲಿ ದಿನೇದಿನೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆಘಾತಕಾರಿ ಎಂಬಂತೆ ವುಹಾನ್​ನಲ್ಲಿ ಆಸ್ಪತ್ರೆಯ ನಿರ್ದೇಶಕರೊಬ್ಬರೂ ಸಾವನ್ನಪ್ಪಿದ್ದಾರೆ.

ಕಳೆದ ವರ್ಷದ ಕೊನೆಯಲ್ಲಿ ವುಹಾನ್‌ನಲ್ಲಿ ಹುಟ್ಟಿಕೊಂಡ COVID-19 ವೈರಸ್, 72,000ಕ್ಕೂ ಹೆಚ್ಚು ಜನರಿಗೆ ಹರಡಿದೆ. ಈವರೆಗೆ ಚೀನಾದಲ್ಲಿ 1,900ಕ್ಕೂ ಹೆಚ್ಚು ಜನ ಈ ವೈರಸ್​ನಿಂದಾಗಿ ಸತ್ತಿದ್ದಾರೆ.

ವುಹಾನ್‌ನ ವುಚಾಂಗ್ ಆಸ್ಪತ್ರೆಯ ನಿರ್ದೇಶಕ ಲಿಯು ಝಿಮಿಂಗ್, ಇಂದು ಮುಂಜಾನೆ ಎಲ್ಲ ರೀತಿಯ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ನಡುವೆಯೂ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್‌ನಿಂದ ಮೃತಪಟ್ಟ ಆಸ್ಪತ್ರೆಯೊಂದರ ಮೊದಲ ನಿರ್ದೇಶಕ ಇವರು.

ಸದ್ಯ ಲಭ್ಯವಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕನಿಷ್ಠ ಆರು ಇತರ ವೈದ್ಯಕೀಯ ಸಿಬ್ಬಂದಿ ಈ ವೈರಸ್‌ನಿಂದ ಸಾವನ್ನಪ್ಪಿದ್ದರೆ, 1,716 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.