ETV Bharat / international

ಶಾಂತಿ ನಮ್ಮ ಬಲಹೀನತೆ ಅಂತ ಭಾರತ ಅಂದ್ಕೋಬಾರದು - ಪಾಕ್ ರಾಷ್ಟ್ರಪತಿ ಗುಟುರು - ಪಾಕ್​ ರಾಷ್ಟ್ರಾಧ್ಯಕ್ಷ ಅರೀಫ್​ ಅಲ್ವಿ

ಇಸ್ಲಾಮಾಬಾದ್​ನಲ್ಲಿ ನಡೆದ ಪಾಕಿಸ್ತಾನ್​ ಡೇ ಆಫ್​ ಪೆರೇಡ್​ನಲ್ಲಿ ಭಾರತದ ವಿರುದ್ಧ ಪಾಕ್​ ರಾಷ್ಟ್ರಾಧ್ಯಕ್ಷ ಅರೀಫ್​ ಅಲ್ವಿ ಮಾತನಾಡಿದ್ದಾರೆ

ಇಸ್ಲಾಮಾಬಾದ್​ನಲ್ಲಿ ನಡೆದ ಪಾಕಿಸ್ತಾನ್​ ಡೇ ಆಫ್​ ಪೆರೇಡ್​ನಲ್ಲಿ ಭಾರತವನ್ನು ಕುಟುಕಿದ ಪಾಕ್​ ರಾಷ್ಟ್ರಾಧ್ಯಕ್ಷ ಅರೀಫ್​ ಅಲ್ವಿ
author img

By

Published : Mar 23, 2019, 11:40 PM IST

ಇಸ್ಲಾಮಾಬಾದ್​: ಪಾಕಿಸ್ತಾನದ ಬಗ್ಗೆ ವಿಭಜನೆಗೂ ಮುನ್ನ ಇದ್ದ ದೃಷ್ಟಿಕೋನವನ್ನೇ ಭಾರತ ಈಗಲೂ ಇಟ್ಟುಕೊಂಡಿರುವುದು ಅದರದೇ ತಪ್ಪು. ಪಾಕ್​ ಶಾಂತಿಮಂತ್ರ ಜಪಿಸುವುದನ್ನ ಭಾರತ ಯಾವತ್ತೂ ಬಲಹೀನತೆ ಎಂದುಕೊಳ್ಳಬಾರದು ಎಂದು ರಾಷ್ಟ್ರಾಧ್ಯಕ್ಷ ಅರೀಫ್​ ಅಲ್ವಿ ಅವರು ಕುಟುಕಿದ್ದಾರೆ.

ಇಸ್ಲಾಮಾಬಾದ್​ನಲ್ಲಿ ನಡೆದ ಪಾಕಿಸ್ತಾನ್​ ಡೇ ಆಫ್​ ಪರೇಡ್​ನಲ್ಲಿ ಮಾತನಾಡಿದ ಅವರು, ಭಾರತದ ಆಕ್ರಮಣಶೀಲತೆ ನಡೆಗೆ ತಕ್ಕ ಉತ್ತರ ನೀಡುವುದು ಪಾಕ್​ನ ಜವಾಬ್ದಾರಿಯಾಗಿತ್ತು. ಉತ್ತಮ ಕಾರ್ಯತಂತ್ರದ ಮೂಲಕವೇ ಪ್ರತ್ಯುತ್ತರ ನೀಡಿದ್ದೇವೆ ಎಂದರು.

ಪಾಕ್ ಬಗ್ಗೆ ಭಾರತ ಇಟ್ಟುಕೊಂಡಿರುವ ದೃಷ್ಟಿಕೋನದಿಂದ ಸ್ಥಳೀಯ ಸುಸ್ಥಿರತೆಗೆ ಅಪಾಯ ಎದುರಾಗುತ್ತಿದೆ. ಪಾಕ್​ನ ನೈಜತೆಯನ್ನು ಭಾರತ ಒಪ್ಪಿಕೊಳ್ಳಬೇಕು. ಮಾತುಕತೆಯ ಒಂದೇ ಮಾರ್ಗದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದೂ ಹೇಳಿದರು.

ನಾವು ಶಾಂತಿ ಬಯಸುತ್ತೇವೆ. ಹಾಗೆಂದ ಮಾತ್ರಕ್ಕೆ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪಾಕ್​ನ ಮಿಲಿಟರಿ ಸಾಮರ್ಥ್ಯವೇನೆಂಬುದು ಇತ್ತೀಚೆಗೆ ತಾನೆ ಎಲ್ಲರಿಗೂ ಗೊತ್ತಾಗಿದೆ ಎಂದು ಪರೋಕ್ಷವಾಗಿ ಕಿಚಾಯಿಸಿದರು.

Intro:Body:

1 Pak President-.txt   

close

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.