ETV Bharat / international

ಚೀನಾದಲ್ಲಿ ನಿಗೂಢ ವೈರಸ್‌ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆಗೆ ಮಂಡೆಬಿಸಿ - WHO calls for emergency meeting on new virus,

ಚೀನಾ ಸುತ್ತಮುತ್ತಲ ದೇಶಗಳಲ್ಲಿ ಕಾಣಿಸಿಕೊಂಡಿರುವ ‘ಸಾರ್ಸ್‌’ ಮಾದರಿಯ ನಿಗೂಢ ವೈರಸ್‌ ಬಗ್ಗೆ ಇಡೀ ವಿಶ್ವವೇ ತಲೆ ಕೆಡಿಸಿಕೊಂಡಿದ್ದು, ಮುಂದಿನ ವಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ತುರ್ತು ಸಭೆ ನಡೆಸಲಿದೆ.

WHO calls for emergency meeting, WHO calls for emergency meeting on new virus, WHO calls for emergency meeting on new virus in China, ಚೀನಾದಲ್ಲಿ ನಿಗೂಢ ವೈರಸ್‌ ಪತ್ತೆ, ಚೀನಾದಲ್ಲಿ ನಿಗೂಢ ವೈರಸ್‌ ಪತ್ತೆ ಸುದ್ದಿ, ಚೀನಾದಲ್ಲಿ ನಿಗೂಢ ವೈರಸ್‌ ಪತ್ತೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಭೆ, ವಿಶ್ವ ಆರೋಗ್ಯ ಸಂಸ್ಥೆ ಸುದ್ದಿ,
ಚೀನಾದಲ್ಲಿ ನಿಗೂಢ ವೈರಸ್‌ ಪತ್ತೆ
author img

By

Published : Jan 21, 2020, 12:03 PM IST

ಅಮೆರಿಕ/ನವದೆಹಲಿ: ಚೀನಾ ಸುತ್ತಮುತ್ತಲ ದೇಶಗಳಲ್ಲಿ ‘ಸಾರ್ಸ್‌’ ಮಾದರಿಯ ನಿಗೂಢ ವೈರಸ್‌ ಪತ್ತೆಯಾಗಿದೆ. ಸೋಮವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಇದರೊಂದಿಗೆ ಈ ರೋಗಾಣು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ಈ ಮಧ್ಯೆ ಈ ಮಾರಣಾಂತಿಕ ರೋಗಾಣು ಜಪಾನ್‌, ಥಾಯ್ಲೆಂಡ್‌ ಮತ್ತು ದಕ್ಷಿಣ ಕೊರಿಯಾದಲ್ಲೂ ಕಾಣಿಸಿಕೊಂಡಿದ್ದು, ಏಷ್ಯಾದ ದೇಶಗಳಲ್ಲಿ ತೀವ್ರ ಕಳವಳ ಮೂಡಿಸಿದೆ. ಜನವರಿ 25ರಂದು ಚೀನಾದಲ್ಲಿ ನಡೆಯುವ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುವ ಹಿನ್ನೆಲೆಯಲ್ಲಿ ಈ ಸೋಂಕು ಮತ್ತಷ್ಟು ಮಂದಿಗೆ ಹಬ್ಬುವ ಆತಂಕವಿದೆ.

ಶೆನ್‌ಜೆನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಶಿಕ್ಷಕಿಯೊಬ್ಬರಿಗೆ ‘ಸಾರ್ಸ್’ ಸೋಂಕು ತಗುಲಿದ್ದು, ಅವರ ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಂಡಿವೆ. ‘ಕೊರೊನಾ ವೈರಸ್‌’ ಕುಟುಂಬಕ್ಕೆ ಸೇರಿದ ರೋಗಾಣುವಿನಿಂದ ಉಂಟಾದ ಸೋಂಕು ಇದಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಈ ನಿಗೂಢ ವೈರಸ್​ ಬಗ್ಗೆ ಚರ್ಚಿಸಲು ಈ ವಾರ ಪ್ರಮುಖ ತುರ್ತು ಸಮಿತಿ ಸಭೆ ನಡೆಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಸಭೆಯಲ್ಲಿ ಈ ವೈರಸ್​ ನಿಯಂತ್ರಣಕ್ಕೆ ಮಾರ್ಗ ಕಂಡುಕೊಳ್ಳಲು ಯತ್ನಿಸಲಾಗುತ್ತೆ ಎನ್ನಲಾಗ್ತಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.