ETV Bharat / international

ಕೊರೊನಾ ವೈರಸ್​ ಮೂಲದ ತನಿಖೆಗೆ ಗುರುವಾರ ಚೀನಾಕ್ಕೆ ಬರಲಿದ್ದಾರೆ WHO ತಜ್ಞರು

author img

By

Published : Jan 11, 2021, 1:13 PM IST

ವಿಶ್ವ ಆರೋಗ್ಯ ಸಂಸ್ಥೆ ತಜ್ಞರ ಭೇಟಿಗೆ ನಮ್ಮ ದೇಶವು ಮುಕ್ತವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

WHO experts arriving on Thursday for virus origins probe
ಕೊರೊನಾ ವೈರಸ್​ ಮೂಲದ ತನಿಖೆಗೆ ಗುರುವಾರ ಚೀನಾಗೆ ಬರಲಿದ್ದಾರೆ WHO ತಜ್ಞರು

ಬೀಜಿಂಗ್: ಜಗತ್ತನ್ನೇ ಸಂಕಷ್ಟಕ್ಕೆ ನೂಕಿದ ಕೊರೊನಾ ವೈರಸ್​ನ ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ (WHO)ಯ ತಜ್ಞರ ತಂಡ ಗುರುವಾರ ಚೀನಾಕ್ಕೆ ಬರಲಿದೆ ಎಂದು ಚೀನಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವಾರ ತನಿಖೆ ನಡೆಸಲು ಡಬ್ಲ್ಯೂಹೆಚ್​ಒ ಎರಡು ತಂಡವನ್ನು ಚೀನಾಗೆ ಕಳಿಸಲು ಮುಂದಾಗಿತ್ತು. ಆದರೆ ಇದಕ್ಕೆ ಚೀನಾ ನಿರಾಕರಿಸಿತ್ತು. ಚೀನಾ ನಿರ್ಬಂಧಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರಿಯೇಸಸ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಚರಿತ್ರೆಯಲ್ಲೇ ಆತ ಕೆಟ್ಟ ಅಧ್ಯಕ್ಷನಾಗಿ ಉಳಿಯಲಿದ್ದಾರೆ: ಟ್ರಂಪ್​ ಮೇಲೆ ಬುಲೆಟ್​ನಂತೆ ವಾಗ್ದಾಳಿ ನಡೆಸಿದ ಅರ್ನಾಲ್ಡ್

ಟೆಡ್ರೋಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ , ಕಳೆದ ಎರಡು ವಾರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಚೀನಾದ ಆರೋಗ್ಯ ತಜ್ಞರು ಕಾರ್ಯನಿರತರಾಗಿದ್ದಾರೆ. ಇದೀಗ ನಮ್ಮ ದೇಶವು ಭೇಟಿಗೆ ಮುಕ್ತವಾಗಿದೆ. ಸಾಂಕ್ರಾಮಿಕ ರೋಗನ್ನು ನಿಯಂತ್ರಿಸುವ ಯುದ್ಧದಲ್ಲಿ ನಮ್ಮ ತಜ್ಞರು ಸೇವೆ ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.

2019ರ ಡಿಸೆಂಬರ್​ನಲ್ಲಿ ಚೀನಾದ ವುಹಾನ್​​ ಪ್ರಾಂತ್ಯದಲ್ಲಿ ಮೊಟ್ಟ ಮೊದಲ ಕೋವಿಡ್​ ಪ್ರಕರಣ ಪತ್ತೆಯಾಗಿತ್ತು. ಮೊದಲ ದಿನ ಅಂದರೆ ಗುರುವಾರವೇ ತಜ್ಞರ ತಂಡ ಕೊರೊನಾ ಕೇಂದ್ರ ಬಿಂದು ವುಹಾನ್​ಗೆ ಭೇಟಿ ನೀಡಲಿದೆಯಾ ಎಂಬುದರ ಬಗ್ಗೆ ಸ್ಪಷ್ಟನೆಯಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.