ಬೀಜಿಂಗ್: ಗಡಿಭಾಗದಲ್ಲಿ ಭಾರತ ಅತಿಕ್ರಮ ಮತ್ತು ಪ್ರಚೋದನಾತ್ಮಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝೋ ಲಿಜಿಯಾನ್ ತಿಳಿಸಿದ್ದಾರೆ.
ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಲಿಜಿಯಾನ್, ರಾಜತಾಂತ್ರಿಕ ಮತ್ತು ಸೇನೆಯ ಹಿರಿಯ ಅಧಿಕಾರಿಗಳ ಮಟ್ಟದ ಮಾತುಕತೆ ಮೂಲಕ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಾವು ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆ ನಡೆಸುತ್ತಿದ್ದೇವೆ. ಗಡಿಯಲ್ಲಿ ಆಗಿರುವ ಘಟನೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನೋದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಈ ಘಟನೆ ಚೀನಾದ ಭೂಪ್ರದೇಶದಲ್ಲಿ ನಡೆದಿದೆ. ಹಾಗಾಗಿ, ಚೀನಾದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಆದರೆ, ಗಡಿಯಲ್ಲಿ ಮತ್ತಷ್ಟು ಗಲಾಟೆಗಳು ನಡೆಯುವುದನ್ನು ಚೀನಾ ಅಪೇಕ್ಷಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಲಡಾಕ್‌ನ ಗಾಲ್ವನ್‌ನಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳು ಒಲವು ತೋರಿಸಿದ್ದು, ಈಗಾಗಲೇ ಗಲಾಟೆ ನಡೆದ ಸ್ಥಳದಿಂದ ಎರಡೂ ದೇಶಗಳ ಸೇನೆಗಳು ಹಿಂದೆ ಸರಿದಿವೆ.