ETV Bharat / international

ಹೀಗೂ ಆಗತ್ತೆ! ರನ್‌ವೇನಿಂದ ವಿಮಾನ ತಳ್ಳಿದ ಪ್ರಯಾಣಿಕರು.. ವಿಡಿಯೋ ವೈರಲ್​ - ನೇಪಾಳದ ಬಾಜುರಾ ವಿಮಾನ ನಿಲ್ದಾಣ

ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತ ವಿಮಾನವನ್ನ ಪ್ರಯಾಣಿಕರು ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ..

Passengers push airplane
ವಿಮಾನ ತಳ್ಳಿದ ಪ್ರಯಾಣಿಕರು
author img

By

Published : Dec 3, 2021, 1:57 PM IST

ಕಠ್ಮಂಡು (ನೇಪಾಳ): ಬೈಕ್​, ಕಾರು, ಬಸ್​ ಕೆಟ್ಟಾಗ ನಾವು ಅದನ್ನು ತಳ್ಳಿ ಬಳಿಕ ಚಲಾಯಿಸುವುದನ್ನು ನೋಡಿರುತ್ತೇವೆ. ಆದರೆ ಕೆಟ್ಟು ನಿಂತ ವಿಮಾನವನ್ನ ಪ್ರಯಾಣಿಕರು ತಳ್ಳಿರುವ ಅಪರೂಪದಲ್ಲಿ ಅಪರೂಪದ ಘಟನೆ ನೇಪಾಳದಲ್ಲಿ ನಡೆದಿದೆ.

ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆದ ತಾರಾ ಏರ್‌ಲೈನ್ಸ್‌ಗೆ ಸೇರಿದ ವಿಮಾನದ ಟೈರ್​ ಸ್ಫೋಟಗೊಂಡಿದೆ. ಹೀಗಾಗಿ, ವಿಮಾನಕ್ಕೆ ರನ್‌ವೇನಿಂದ ಮುಂದಕ್ಕೆ ಸಾಗಲು ಆಗಲಿಲ್ಲ. ಈ ವೇಳೆ ಪ್ರಯಾಣಿಕರೇ ಕೆಳಗಿಳಿದು ವಿಮಾನವನ್ನು ಮುಂದಕ್ಕೆ ತಳ್ಳಿದ್ದಾರೆ. ಇವರಿಗೆ ಭದ್ರತಾ ಸಿಬ್ಬಂದಿ ಕೂಡ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ: 'ಐ ಡೋಂಟ್ ಕೇರ್, ಐ ಡೋಂಟ್ ಲೈಕ್..': ಚಾಮರಾಜನಗರದಲ್ಲಿ ಇಂಗ್ಲೀಷ್​ನಲ್ಲೇ ಲಸಿಕೆ ಬೇಡೆಂದ ವೃದ್ಧ

ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ನೆಟ್ಟಿಗರು ನಗೆ ಚಟಾಕಿ ಹಾರಿಸುತ್ತಿದ್ದಾರೆ. 'ಬಹುಶಃ ಇದು ನಮ್ಮ ನೇಪಾಳದಲ್ಲಿ ಮಾತ್ರ' ಎಂದು ಒಬ್ಬರು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.