ಹನೋಯಿ: ಮಗನ ಕೋರಿಕೆಯಂತೆ ಇಲ್ಲೊಬ್ಬ ರೆಸ್ಟೋರೆಂಟ್ ಮಾಲೀಕ 'ಕೊರೊನಾ ಬರ್ಗರ್' ತಯಾರಿಸಿದ್ದಾರೆ.
ಗೋಮಾಂಸ ಅಥವಾ ಚಿಕನ್ನಿಂದ ತಯಾರಿಸಿದ ಈ ಬರ್ಗರ್ನ ಮೇಲ್ಭಾಗದಲ್ಲಿ ಕೋವಿಡ್-19 ವೈರಸ್ ಹೋಲಿಕೆಯಾಗುವಂತಹ ಆಕಾರದಲ್ಲಿ ಕಿರೀಟವಿದೆ. ಇದರ ಬೆಲೆ 65,000 VND (2.70 ಯುಎಸ್ ಡಾಲರ್) ಆಗಿದೆ.
ವಿಯೆಟ್ನಾಂನ ಹನೋಯಿ ಪಿಜ್ಜಾ ಹೋಮ್ ರೆಸ್ಟೋರೆಂಟ್ ಮಾಲೀಕ ಹೋಂಗ್ ಟುಂಗ್ ಅವರ 10 ವರ್ಷದ ಮಗನು ಕೊರೊನಾ ಕುರಿತ ಕೆಟ್ಟ ಸುದ್ದಿಗಳಿಂದ ಬೇಸತ್ತಿದ್ದು, ಈ ವೈರಸ್ ಕುರಿತು ತಮಾಷೆಯಾಗಿ ಏನಾದರೂ ಮಾಡುವಂತೆ ತಂದೆಯ ಬಳಿ ಕೇಳಿದ್ದಾನೆ. ಮಗನ ಕೋರಿಕೆಯಂತೆ ಟುಂಗ್, 'ಕೊರೊನಾ ಬರ್ಗರ್' ತಯಾರಿಸಿದ್ದಾರೆ.
ಮಂಗಳವಾರದಿಂದ ಮೆನುವಿನಲ್ಲಿ 'ಕೊರೊನಾ ಬರ್ಗರ್' ಆಯ್ಕೆ ಇಡಲಾಗಿದ್ದು, ಈವರೆಗೂ 100ಕ್ಕೂ ಹೆಚ್ಚು ಆರ್ಡರ್ಗಳು ಬಂದಿವೆ. ಇದನ್ನ ತಯಾರಿಸಲು ಹೆಚ್ಚು ಸಮಯ ಹಾಗೂ ಹೆಚ್ಚು ಪದಾರ್ಥಗಳು ಬೇಕು. ಆದರೂ ನಾವು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ಹೋಂಗ್ ಟುಂಗ್ ಹೇಳಿದ್ದಾರೆ.