ETV Bharat / international

Sexual Assault Row : ಚೀನಾದ ಟೆನಿಸ್ ತಾರೆ ಪೆಂಗ್ ಶುವಾಯ್ ಪ್ರತ್ಯಕ್ಷ - ಕಾಣಿಸಿಕೊಂಡ ಚೀನಾದ ಟೆನ್ನಿಸ್ ತಾರೆ ಪೆಂಗ್ ಶೂಯಿ

ಚೀನಾದ ಕಮ್ಯುನಿಸ್ಟ್​​ ನಾಯಕ ಜಾಂಗ್​ ಗೌಲಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಟೆನಿಸ್ ಆಟಗಾರ್ತಿ ಪೆಂಗ್ ಶೂಯಿ ಯೂಥ್ ಟೂರ್ನಮೆಂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ..

Video of missing Chinese tennis star posted online
Sexaul Assault Row: ಚೀನಾದ ಟೆನ್ನಿಸ್ ತಾರೆ ಪೆಂಗ್ ಶೂಯಿ ಪ್ರತ್ಯಕ್ಷ
author img

By

Published : Nov 21, 2021, 6:56 PM IST

Updated : Nov 22, 2021, 2:45 PM IST

ಬೀಜಿಂಗ್,(ಚೀನಾ) : ಕಮ್ಯುನಿಸ್ಟ್​ ನಾಯಕನ ಮೇಲೆ ಲೈಂಗಿಕ ಕಿರುಕುಳದ (Sexual assault) ಆರೋಪ ಹೊರಸಿದ ನಂತರ ನಾಪತ್ತೆಯಾಗಿದ್ದ ಚೀನಾದ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ (Chinese tennis star Peng Shuai) ಮತ್ತೆ ಕಾಣಿಸಿದ್ದಾರೆ. ಇವರು ನಾಪತ್ತೆಯಾದ ನಂತರ ಚೀನಾ ಸರ್ಕಾರದ ವಿರುದ್ಧ ಜಗತ್ತಿನ ಹಲವೆಡೆಯಿಂದ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.

ಬೀಜಿಂಗ್​ನ ಯೂಥ್ ಟೂರ್ನಮೆಂಟ್​ನಲ್ಲಿ (Beijing Youth Tournament) ​ಪೆಂಗ್ ಶುವಾಯ್ ಕಾಣಿಸಿಕೊಂಡಿದ್ದು, ಟೂರ್ನಮೆಂಟ್ ಆಯೋಜಕರು ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಚೀನಾ ಸರ್ಕಾರದ ಮಾಧ್ಯಮವೊಂದು ವಿಡಿಯೋವನ್ನು ಟ್ವೀಟ್ ಮಾಡಿದೆ.

  • Peng Shuai showed up at the opening ceremony of a teenager tennis match final in Beijing on Sunday morning. Global Times photo reporter Cui Meng captured her at scene. pic.twitter.com/7wlBcTMgGy

    — Hu Xijin 胡锡进 (@HuXijin_GT) November 21, 2021 " class="align-text-top noRightClick twitterSection" data=" ">

ವಿಬಿಯೋ ಸೋಶಿಯಲ್ ಮೀಡಿಯಾ ಸರ್ವೀಸ್​ನಲ್ಲಿ ಚೀನಾ ಓಪನ್ ಈ ಭಾವಚಿತ್ರವನ್ನು ಪ್ರಕಟಿಸಿದ್ದು, ಈ ಫೋಟೋದಲ್ಲಿ ಕೋರ್ಟ್​ ಬಳಿ ಶೂಯಿ ನಿಂತುಕೊಂಡಿದ್ದಾರೆ. ಈ ಮೂಲಕ ಪೆಂಗ್ ಶೂಯಿ ಕಾಣೆಯಾಗಿದ್ದಾರೆ ಎಂಬ ವದಂತಿಗಳಿಗೆ ತೆರೆಬಿದ್ದಿದೆ.

ಚೀನಾದ ಕಮ್ಯುನಿಸ್ಟ್​​ ನಾಯಕ ಜಾಂಗ್​ ಗೌಲಿ (Communist leader Zhang Gaoli) ತಮ್ಮೊಂದಿಗೆ ಸೆಕ್ಸ್​ ನಡೆಸಲು ಆಹ್ವಾನ ನೀಡಿದ್ದರು ಎಂಬ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲೇ ಆಟಗಾರ್ತಿ ನಾಪತ್ತೆಯಾಗಿದ್ದಾರೆಂಬ ಮಾತು ಕೇಳಿ ಬಂದಿತ್ತು. ಬೀಜಿಂಗ್​ನಲ್ಲಿ ಮುಂದಿನ ಮೂರು ತಿಂಗಳಲ್ಲಿ ಚಳಿಗಾಲದ(Winter Games) ಕ್ರೀಡಾಕೂಟ ನಡೆಯಲಿರುವ ಬೆನ್ನಲ್ಲೇ ತೀವ್ರ ಚರ್ಚೆ ಏರ್ಪಟ್ಟಿತ್ತು.

ನವೆಂಬರ್ 2ರಂದು ಜಾಂಗ್ ಗೌಲಿ ಮೇಲೆ ಪೆಂಗ್ ಶುವಾಯ್ ಆರೋಪ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ಆದರೆ, ಚೀನಾ ಸರ್ಕಾರ ಇದನ್ನು ಸೆನ್ಸಾರ್ ಮಾಡಿದ್ದು, ಕೇವಲ 30 ನಿಮಿಷಗಳಲ್ಲಿ ಎಲ್ಲಾ ಪೋಸ್ಟ್​ಗಳನ್ನು ಅಳಿಸಿ ಹಾಕಿತ್ತು. ವೈಬೋ ಸಾಮಾಜಿಕ ಜಾಲತಾಣದಲ್ಲಿ ಪೆಂಗ್ ಶೂಯಿ ಪೋಸ್ಟ್ ಮಾಡಿದ್ದು, 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಅನ್ನು ಇವರು ಹೊಂದಿದ್ದಾರೆ.

ಇದನ್ನೂ ಓದಿ: ಮಾಜಿ ಉನ್ನತ ಅಧಿಕಾರಿ ವಿರುದ್ಧ ಮೇಲೆ ಸೆಕ್ಸ್​​ ಆರೋಪ.. ಚೀನಾ ಟೆನಿಸ್​​ ಆಟಗಾರ್ತಿ ನಾಪತ್ತೆ!

Last Updated : Nov 22, 2021, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.