ದೋಹಾ (ಕತಾರ್) : ತಾಲಿಬಾನ್ ಮತ್ತು ಅಮೆರಿಕ ದೇಶದ ನಡುವೆ ಐತಿಹಾಸಿಕ ಕದನ ವಿರಾಮ ಒಪ್ಪಂದಕ್ಕೆ ಇಂದು ಕತಾರ್ನ ದೋಹಾದಲ್ಲಿ ಸಹಿ ಬೀಳಲಿದೆ. ಅಪಘಾನಿಸ್ತಾನದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಸಮರಕ್ಕೆ ಪೂರ್ಣ ವಿರಾಮ ಇಡಲಾಗುತ್ತಿದ್ದು, ಈ ಕ್ಷಣಕ್ಕೆ ಭಾರತ ಸೇರಿ 30 ರಾಷ್ಟ್ರಗಳ ರಾಯಭಾರಿಗಳು ಸಾಕ್ಷಿಯಾಗಲಿದೆ.
-
Sources: US-Taliban peace deal to be signed today evening in Doha (Qatar), Indian envoy among 30 countries also invited to witness the event. pic.twitter.com/8x6ShoKGYS
— ANI (@ANI) February 28, 2020 " class="align-text-top noRightClick twitterSection" data="
">Sources: US-Taliban peace deal to be signed today evening in Doha (Qatar), Indian envoy among 30 countries also invited to witness the event. pic.twitter.com/8x6ShoKGYS
— ANI (@ANI) February 28, 2020Sources: US-Taliban peace deal to be signed today evening in Doha (Qatar), Indian envoy among 30 countries also invited to witness the event. pic.twitter.com/8x6ShoKGYS
— ANI (@ANI) February 28, 2020
ಈ ಐತಿಹಾಸಿಕ ಒಪ್ಪಂದದ ಬಗ್ಗೆ 2001ರಿಂದಲೂ ಚರ್ಚೆ ನಡೆಯುತ್ತಿದ್ದರೂ ಇದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಕದನ ವಿರಾಮದ ಮುಖ್ಯ ಧ್ಯೇಯವೇ ಅಲ್ ಖೈದಾದಂತಹ ಭಯೋತ್ಪಾದಕ ಗುಂಪುಗಳನ್ನು ಆಶ್ರಯಿಸದಂತೆ ತಾಲಿಬಾನ್‌ನಿಂದ ಬದ್ಧತೆ ಪಡೆದುಕೊಳ್ಳುವುದಾಗಿದೆ.
ಒಪ್ಪಂದದ ಬಳಿಕ ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೇನಾಬಲವನ್ನು 13 ಸಾವಿರದಿಂದ 8,600ಕ್ಕೆ ತಗ್ಗಿಸಲಿದೆ. ಹಾಗೂ ಇನ್ನುಳಿದ ಸೈನಿಕರು ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಹಾಗೂ ಆಗು ಹೋಗುಗಳ ಬಗ್ಗೆ ನಿಗಾ ಇಡಲಿದ್ದಾರೆ.
ಒಪ್ಪಂದದ ಪ್ರಕಾರ ಅಲ್-ಖೈದಾ ಸಂಘಟನೆ ವಿರುದ್ದ ಅಪ್ಘಾನಿಸ್ತಾನದಲ್ಲಿ ಯುಎಸ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮುಂದುವರೆಸಲಿದೆ ಎಂದು ತಿಳಿದು ಬಂದಿದೆ. ಒಪ್ಪಂದ ಸಭೆಯಲ್ಲಿ ಭಾರತ ಸೇರಿ 30 ರಾಷ್ಟ್ರಗಳ ರಾಯಭಾರಿಗಳು ಭಾಗವಹಿಸಲಿದ್ದಾರೆ.