ಟೆಹ್ರಾನ್(ಇರಾನ್): ಒಮಾನ್ ಸಮುದ್ರ ಮತ್ತು ಕೊಲ್ಲಿಯಲ್ಲಿ ಟೆಹ್ರಾನ್ ದಕ್ಷಿಣದ ಜಲಮಾರ್ಗದಲ್ಲಿ ಹಾದು ಹೋಗುವಾಗ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳ ಹಡಗುಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸಬೇಕು ಎಂದು ಇರಾನಿನ ಸಶಸ್ತ್ರ ಪಡೆ ಹೇಳಿದೆ.
ಹಡಗುಗಳು ಈ ಪ್ರದೇಶದಲ್ಲಿ ಹಾದು ಹೋಗುವಾಗ ಯಾವುದೇ ಉದ್ವಿಗ್ನತೆ ಅಥವಾ ಸಂಘರ್ಷವನ್ನು ಸೃಷ್ಟಿಸಬಾರದು ಎಂದು ಹೇಳಿದೆ.
ಯಾವುದೇ ಕಾನೂನುಬಾಹಿರ ಮತ್ತು ಪ್ರಚೋದನಕಾರಿ ಕ್ರಮ ಅನುಸರಿಸುವುದು ಕಂಡು ಬಂದರೆ ಇರಾನಿನ ಸಶಸ್ತ್ರ ಪಡೆಗಳ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕಳೆದ ವಾರ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ಗಲ್ಫ್‌ನಲ್ಲಿ ಎರಡೂ ಕಡೆ ನೌಕಾ ವಿವಾದಗಳು ಭುಗಿಲೆದ್ದ ನಂತರ ಪಶ್ಚಿಮ ಏಷ್ಯಾದಿಂದ ಅಮೆರಿಕದ ಎಲ್ಲ ಪಡೆಗಳನ್ನು ಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಕರೆ ನೀಡಿತ್ತು.