ಬೀಜಿಂಗ್: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಬೆನ್ನಲ್ಲೇ ಈಗ ಅಮೆರಿಕ ಹಾಗೂ ಚೀನಾ ನಡುವೆ ವಾಕ್ ಸಮರ ಕಾರಣವಾಗಿದ್ದು, ಅಮೆರಿಕಾ ಸೇನೆಯಿಂದಲೇ ವುಹಾನ್‌ನಲ್ಲಿ ಕೊರೊನಾ ವೈರಸ್ ಹಬ್ಬಿದೆ ಎಂದು ಚೀನಾ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲರಿಗೂ ತಿಳಿದಿರುವ ಹಾಗೆ ಕೊರೊನಾ ವೈರಸ್ ಮೊದಲು ಚೀನಾದ ವ್ಯೂಹಾನ್ನಲ್ಲಿ ಪತ್ತೆಯಾಗಿತ್ತು. ಆದರೆ ವುಹಾನ್‌ನಲ್ಲಿ ಅಮೆರಿಕ ಸೇನೆಯಿಂದಲೇ ಮೊದಲ ಬಾರಿಗೆ ವೈರಸ್ ಹಬ್ಬಿದೆ ಎಂದು ಆರೋಪಿಸಲಾಗಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೆಂದ್ರದ (CDC) ನಿರ್ದೇಶಕ ರಾಬರ್ಟ್ ರೆಡ್‌ಫೀಲ್ಡ್ ಅವರೇ ಅಲ್ಲಿ ಕೆಲ ಜ್ವರ ಹೊಂದಿರುವ ರೋಗಿಗಳು ಕಂಡುಬಂದಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಚೀನಾ ಆರೋಪಿಸಿದೆ.
ಅಮೆರಿಕದಾದ್ಯಂತ ವೈರಸ್ ಹರಡುತ್ತಿದ್ದರೂ, ಆ ಬಗ್ಗೆ ಮಾಹಿತಿ ಮರೆಮಾಚುವ ಪ್ರಯತ್ನಗಳು ಅಮೆರಿಕದಿಂದ ನಡೆಯುತ್ತಿವೆ. ಅಲ್ಲದೆ ಇತರ ದೇಶಗಳ ಮೇಲೇ ಆಪಾದನೆ ಹೊರೆಸುವ ಕಾರ್ಯ ನಡೆಯುತ್ತಿದೆ ಎಂದು ಚೀನಾ ಆರೋಪ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಜಾಹೋ ಲಿಜಾನ್, ಅಮೆರಿಕವು ವೈರಸ್ ಹಬ್ಬಿಸಿ ನಮ್ಮ ಆರ್ಥಿಕತೆಗೆ ಪೆಟ್ಟು ನೀಡಲು ಹವಣಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.'ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೆಂದ್ರ ನೇರವಾಗಿ ಸಿಕ್ಕಿಬಿದ್ದಿದೆ. ಯುಎಸ್ಲ್ಲಿ ರೋಗಿಗಳಿಲ್ಲ ಎಂಬುದು ಯಾವಾಗ ಆರಂಭವಾಯಿತು? ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ? ಆಸ್ಪತ್ರೆಗಳ ಹೆಸರುಗಳು ಯಾವವು? ವುಹಾನ್ಗೆ ಯುಎಸ್ ಸೈನ್ಯವು ಯಾವಾಗ ವೈರಸ್ ತಂದಿರಬಹುದು. ಪಾರದರ್ಶಕವಾಗಿರಿ! ನಿಮ್ಮ ಡೇಟಾವನ್ನು ಬಹಿರಂಗಗೊಳಿಸಿ. ಅಮೆರಿಕ ನಮಗೆ ವಿವರಣೆ ನೀಡಬೇಕಿದೆ' ಎಂದು ಟ್ವೀಟ್ ಮೂಲಕ ಲಿಜಾನ್ ಆಗ್ರಹಿಸಿದ್ದಾರೆ.
-
Some #influenza deaths were actually infected with #COVID-19, Robert Redfield from US #CDC admitted at the House of Representatives. US reported 34 million cases of influenza and 20,000 deaths. Please tell us how many are related to COVID-19? @CDCDirector pic.twitter.com/vYNZRFPWo3
— Lijian Zhao 赵立坚 (@zlj517) March 12, 2020 " class="align-text-top noRightClick twitterSection" data="
">Some #influenza deaths were actually infected with #COVID-19, Robert Redfield from US #CDC admitted at the House of Representatives. US reported 34 million cases of influenza and 20,000 deaths. Please tell us how many are related to COVID-19? @CDCDirector pic.twitter.com/vYNZRFPWo3
— Lijian Zhao 赵立坚 (@zlj517) March 12, 2020Some #influenza deaths were actually infected with #COVID-19, Robert Redfield from US #CDC admitted at the House of Representatives. US reported 34 million cases of influenza and 20,000 deaths. Please tell us how many are related to COVID-19? @CDCDirector pic.twitter.com/vYNZRFPWo3
— Lijian Zhao 赵立坚 (@zlj517) March 12, 2020
'ವೈರಸ್ ಎಲ್ಲಿ ಹುಟ್ಟಿತು ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಅದರ ಮೂಲ ಎಲ್ಲಿಯೇ ಇರಲಿ, ಚೀನಾ ಮತ್ತು ಇತರ ಎಲ್ಲ ಪೀಡಿತ ದೇಶಗಳು ಅದರ ಹರಡುವಿಕೆಯನ್ನು ಒಳಗೊಂಡಿರುವ ಸವಾಲನ್ನು ಎದುರಿಸುತ್ತಿವೆ' ಎಂದು ಜಾಹೋ ಕಿಡಿಕಾಡಿದ್ದಾರೆ.
ಇನ್ನು ಮಾಧ್ಯಮಗೋಷ್ಠಿಯೊಂದರಲ್ಲಿ ಕೊರೊನಾ ವೈರಸ್ ಚೀನಾದಲ್ಲಿ ಹುಟ್ಟಿಕೊಂಡಿಲ್ಲ ಎಂಬುದಕ್ಕೆ ಚೀನಾ ಬಳಿ ಪುರಾವೆ ಇದೆಯೇ ಮತ್ತು ಹಾಗಿದ್ದಲ್ಲಿ ಅದು ಎಲ್ಲಿಂದ ಹುಟ್ಟಿಕೊಂಡಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್, 'ವೈರಸ್‌ನ ಮೂಲವನ್ನು ವಿಜ್ಞಾನದಿಂದ ಮಾತ್ರ ನಿರ್ಧರಿಸಬಹುದು. ಇತರ ದೇಶಗಳ ಮೇಲೆ ಆರೋಪ ಹೊರಿಸಬಾರದು' ಎಂದಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗವಾಗಿ ಬೆಳೆಯುತ್ತಿರುವಾಗ, ಪರಸ್ಪರರ ವಿರುದ್ಧದ ಆರೋಪಗಳು ಮತ್ತು ದಾಳಿಯನ್ನು ಮಟ್ಟ ಹಾಕುವ ಬದಲು ಅದರ ವಿರುದ್ಧ ಹೋರಾಡಲು ಜಗತ್ತು ಒಗ್ಗೂಡಬೇಕು ಎಂದು ಜೆಂಗ್ ಶುವಾಂಗ್ ಹೇಳಿದ್ದಾರೆ.
ಕೊರೊನಾ ವೈರಸ್ ಚೀನಾದಲ್ಲಿ ಹುಟ್ಟಿಕೊಂಡು ಇತರ ದೇಶಗಳಿಗೆ ಹರಡಿದೆ ಎಂಬ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೆಂಗ್, ಸಾಂಕ್ರಾಮಿಕ ರೋಗ ಹರಡಿದಾಗಿನಿಂದ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೀನಾ ಮುಕ್ತ, ಪಾರದರ್ಶಕ ಮತ್ತು ಹೆಚ್ಚು ಜವಾಬ್ದಾರಿಯುತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜೆಂಗ್ ಹೇಳಿದ್ದಾರೆ.
ಒಟ್ಟಾರೆ ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳ ನಡುವೆ ಮೊದಲಿನಿಂದಲೂ ಜಾಗತಿಕವಾಗಿ ಹಲವು ವೈಮನಸ್ಸುಗಳಿದ್ದು, ಕೊರೊನಾ ವೈರಸ್ ಹರಡುವಿಕೆಯಿಂದ ಮತ್ತೆ ಆರೋಪ ಪ್ರತ್ಯಾರೋಪ ಮುಂದುವರೆದಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಮೊದಲು ಹುಟ್ಟಿದ ಮಾರಣಾಂತಿಕ ವೈರಸ್ ಇದುವರೆಗೆ 4,600 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 118 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 124,330ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕೇವಲ ಚೀನಾದಲ್ಲೇ 80ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 3100 ಜನರು ಮೃತಪಟ್ಟಿದ್ದಾರೆ.