ETV Bharat / international

ವಿಶ್ವದ ಅರ್ಧಕ್ಕೂ ಹೆಚ್ಚು ಜನರಿಗೆ ನೈರ್ಮಲ್ಯ ಇನ್ನೂ ಮರೀಚಿಕೆ ..!

ಜಗತ್ತಿನಲ್ಲಿ ಸುಮಾರು 673 ಮಿಲಿಯನ್ ಜನತೆ ಈಗಲೂ ಶೌಚಾಲಯ ಸೌಲಭ್ಯವನ್ನು ಹೊಂದಿಲ್ಲ. ಇವರೆಲ್ಲರೂ ಬಯಲು ಶೌಚವನ್ನೇ ಅವಲಂಬಿಸಿದ್ದಾರೆ. ಇನ್ನು ವಿಶ್ವದ ಸುಮಾರು 698 ಮಿಲಿಯನ್ ಮಕ್ಕಳು ತಾವು ಕಲಿಯುವ ಶಾಲೆಗಳಲ್ಲಿ ನೈರ್ಮಲ್ಯದ ಮೂಲಭೂತ ಸೌಕರ್ಯಗಳೇ ಇಲ್ಲ. ಇದರಿಂದಾಗಿ ಸಮುದಾಯ ಹಾಗೂ ಸಾಮಾಜಿಕ ಆರೋಗ್ಯಕ್ಕೆ ತೀವ್ರತರವಾದ ಅಪಾಯ ಎದುರಾಗುತ್ತಿದೆ.

UNICEF Report: State of the worlds sanitation

author img

By

Published : Nov 20, 2020, 6:11 PM IST

ಶುಚಿತ್ವ, ನೈರ್ಮಲ್ಯಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾಗಿವೆ. ಇತ್ತೀಚಿನ ವರ್ಷಗಳಲ್ಲಿ ನೈರ್ಮಲ್ಯದ ಮಹತ್ವದ ಬಗ್ಗೆ ಜಗತ್ತಿನಾದ್ಯಂತ ಜಾಗೃತಿ ಮೂಡುತ್ತಿದ್ದರೂ ಈ ವಿಷಯದಲ್ಲಿ ಹೇಳಿಕೊಳ್ಳುವಂಥ ಗಮನಾರ್ಹ ಸಾಧನೆ ಆಗಿಲ್ಲ. 2030 ರ ವೇಳೆಗೆ ಜಗತ್ತಿನ ಎಲ್ಲರಿಗೂ ನೈರ್ಮಲ್ಯ ವಾತಾವರಣ ಕಲ್ಪಿಸುವುದು ಬಹುತೇಕ ಸಾಧ್ಯವಾಗಲಾರದು ಎಂಬ ಸ್ಥಿತಿ ಇದೆ ಎಂದು ಯುನಿಸೆಫ್​ ವರದಿ ತಿಳಿಸಿದೆ.

ಜಗತ್ತಿನ ಅರ್ಧಕ್ಕೂ ಹೆಚ್ಚು ಜನಸಂಖ್ಯೆ ಅಂದರೆ ಸುಮಾರು 4.2 ಬಿಲಿಯನ್ ಜನತೆ ಈಗಲೂ ಅನೈರ್ಮಲ್ಯ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಈ ಕುರಿತು ಬೆಳಕು ಚೆಲ್ಲಿರುವ ಯುನಿಸೆಫ್ ವರದಿಯು ಜಗತ್ತಿನ ಕಣ್ಣು ತೆರೆಸಬೇಕಿದೆ. ನೈರ್ಮಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಜಗತ್ತಿನ ರಾಷ್ಟ್ರಗಳ ಗಮನ ಸೆಳೆಯುವುದು ಹಾಗೂ ಈ ಕುರಿತು ಜಾಗೃತಿ ಮೂಡಿಸುವುದು ಯುನಿಸೆಫ್ ವರದಿಯ ಉದ್ದೇಶವಾಗಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ತುರ್ತಾಗಿ ತಮ್ಮ ಪ್ರಜೆಗಳಿಗೆ ನೈರ್ಮಲ್ಯದ ವಾತಾವರಣ ಕಲ್ಪಿಸುವಂತೆ ಯುನಿಸೆಫ್ ಕರೆ ನೀಡಿದೆ.

ಜಗತ್ತಿನಲ್ಲಿ ಸುಮಾರು 673 ಮಿಲಿಯನ್ ಜನತೆ ಈಗಲೂ ಶೌಚಾಲಯ ಸೌಲಭ್ಯವನ್ನು ಹೊಂದಿಲ್ಲ. ಇವರೆಲ್ಲರೂ ಬಯಲು ಶೌಚವನ್ನೇ ಅವಲಂಬಿಸಿದ್ದಾರೆ. ಇನ್ನು ವಿಶ್ವದ ಸುಮಾರು 698 ಮಿಲಿಯನ್ ಮಕ್ಕಳು ತಾವು ಕಲಿಯುವ ಶಾಲೆಗಳಲ್ಲಿ ನೈರ್ಮಲ್ಯದ ಮೂಲಭೂತ ಸೌಕರ್ಯಗಳೇ ಇಲ್ಲ. ಇದರಿಂದಾಗಿ ಸಮುದಾಯ ಹಾಗೂ ಸಾಮಾಜಿಕ ಆರೋಗ್ಯಕ್ಕೆ ತೀವ್ರತರವಾದ ಅಪಾಯ ಎದುರಾಗುತ್ತಿದೆ.

ವಿಶ್ವದ ಅರ್ಧಕ್ಕೂ ಹೆಚ್ಚು ಜನರಿಗೆ ನೈರ್ಮಲ್ಯ ಇನ್ನೂ ಮರೀಚಿಕೆ ..!
ವಿಶ್ವದ ಅರ್ಧಕ್ಕೂ ಹೆಚ್ಚು ಜನರಿಗೆ ನೈರ್ಮಲ್ಯ ಇನ್ನೂ ಮರೀಚಿಕೆ ..!

2030 ರ ವೇಳೆಗೆ ಎಲ್ಲರಿಗೂ ಶುಚಿತ್ವ ಹಾಗೂ ನೈರ್ಮಲ್ಯ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. ಆದರೆ ಇದನ್ನು ಸಾಧಿಸಲು ಕೇವಲ 10 ವರ್ಷಗಳು ಮಾತ್ರ ಬಾಕಿ ಇದ್ದು, ಆಗಬೇಕಾದ ಕೆಲಸ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬುದು ಆತಂಕದ ವಿಷಯವಾಗಿದೆ. ಈಗಿನ ವೇಗದಲ್ಲಿಯೇ ನೈರ್ಮಲ್ಯ ವ್ಯವಸ್ಥೆ ಸುಧಾರಿಸುತ್ತ ಹೋದಲ್ಲಿ ಬಹುಶಃ ಈ ಶತಮಾನದ ಅಂಚಿಗೆ ಎಲ್ಲರಿಗೂ ನೈರ್ಮಲ್ಯ ವ್ಯವಸ್ಥೆ ಮಾಡಬಹುದು !

ಒಂದು ದೇಶದ ಮಾನವ ಸಂಪತ್ತು ಆರೋಗ್ಯಕರವಾಗಿರಬೇಕಾದರೆ ನೈರ್ಮಲ್ಯ ವ್ಯವಸ್ಥೆಯ ಪಾತ್ರ ಅದರಲ್ಲಿ ಬಹಳ ದೊಡ್ಡದು. ವಿಶ್ವದ ಹಲವಾರು ರಾಷ್ಟ್ರಗಳು ಈ ವಿಷಯದಲ್ಲಿ ಸಾಕಷ್ಟು ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿವೆ. ಆದರೆ ಇನ್ನು ಕೆಲ ರಾಷ್ಟ್ರಗಳು ಈ ವಿಷಯದಲ್ಲಿ ಹಿಂದೆ ಬಿದ್ದಿವೆ. ದೇಶದ ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸಬೇಕಾದರೆ ಆ ದೇಶದ ನಾಯಕರ ರಾಜಕೀಯ ಇಚ್ಛಾಶಕ್ತಿ ಬಹಳೇ ಮುಖ್ಯವಾಗುತ್ತದೆ ಎಂಬುದನ್ನು ಯುನಿಸೆಫ್ ವರದಿಯು ಒತ್ತಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.