ETV Bharat / international

ಜಾಗತಿಕ ಒತ್ತಡಕ್ಕೆ ಮಣಿದ ಪಾಕ್​: ಮುಂಬೈ ದಾಳಿಕೋರನ ವಿರುದ್ಧ 23 ಕೇಸ್​!

author img

By

Published : Jul 4, 2019, 10:39 AM IST

Updated : Jul 4, 2019, 11:07 AM IST

26/11 ಮುಂಬೈ ದಾಳಿಯ ಮಾಸ್ಟರ್​ಮೈಂಡ್​ ಹಫೀಸ್​ ಸೇರಿ ಆತನ 12 ಸಹಚರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದೆ. ಜಮಾತ್ ಉದ್​ ದವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಐದು ಟ್ರಸ್ಟ್​ಗಳ ಮೂಲಕ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ್ದಾಗಿ ಪಾಕಿಸ್ತಾನದ ಕೌಂಟರ್​ ಟೆರರಿಸಂ ಡಿಪಾರ್ಟ್​ಮೆಂಟ್ ಹೇಳಿದೆ.

ಹಫೀಸ್​​ ಸೈಯದ್

ಲಾಹೋರ್​: ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂಬ ಜಾಗತಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಉಗ್ರ ಹಫೀಸ್​​ ಸೈಯದ್ ವಿರುದ್ಧ ಭಯೋತ್ಪಾದನೆಗೆ ಆರ್ಥಿಕ ಸಹಾಯ ಸಂಬಂಧ 23 ಪ್ರಕರಣಗಳನ್ನು ದಾಖಲಿಸಿದೆ.

26/11 ಮುಂಬೈ ದಾಳಿಯ ಮಾಸ್ಟರ್​ಮೈಂಡ್​​ ಹಫೀಸ್​ ಸೇರಿ ಆತನ 12 ಸಹಚರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದೆ. ಜಮಾತ್ ಉದ್​ ದವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಐದು ಟ್ರಸ್ಟ್​ಗಳ ಮೂಲಕ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ್ದಾಗಿ ಪಾಕಿಸ್ತಾನದ ಕೌಂಟರ್​ ಟೆರರಿಸಂ ಡಿಪಾರ್ಟ್​ಮೆಂಟ್ ಹೇಳಿದೆ.

​ಲಾಹೋರ್​, ಗುಜ್ರಂವಾಲಾ ಹಾಗೂ ಮುಲ್ತಾನಗಳಲ್ಲಿ ಹಫೀಸ್​ ವಿರುದ್ಧ ದೂರು ದಾಖಲಾಗಿದೆ. ಅಲ್ ಅನ್ಫಾಲ, ದವಾತ್​ ಉಲ್ ಇರ್ಷಾದ್​ ಹಾಗೂ ಮೌಜ್​ ಬಿನ್ ಜಬಲ್​ ಟ್ರಸ್ಟ್​ಗಳ ಮೂಲಕ ಭಯೋತ್ಪಾದನೆಗೆ ಹಣ ಒದಗಿಸಿದ್ದಾಗಿ ಆರೋಪಿಸಲಾಗಿದೆ.

ಜೆಯುಡಿ, ಎಲ್​ಇಟಿ ಹಾಗೂ ಎಫ್​ಐಎಫ್​ ಸಂಘಟನೆಗಳ ವಿರುದ್ಧ ತನಿಖೆ ನಡೆಸಲಾಗ್ತಿದೆ. ಟ್ರಸ್ಟ್​ ಹೆಸರಿನಲ್ಲಿ ಆಸ್ತಿಗಳನ್ನು ಮಾಡಿ, ಆ ಮೂಲಕ ಉಗ್ರವಾದಕ್ಕೆ ಹಣ ನೀಡಿರುವ ಪ್ರಕರಣದಲ್ಲಿ ಇವರೆಲ್ಲ ಆ್ಯಂಟಿ ಟೆರರಿಸಂ ಕೋರ್ಟ್​ವಿಚಾರಣೆ ಎದುರಿಸಬೇಕು ಎಂದು ಹೇಳಿದೆ.

Intro:Body:Conclusion:
Last Updated : Jul 4, 2019, 11:07 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.