ಟೋಕಿಯೊ: ಜಪಾನಿನ ಉಡಾವಣಾ ಸ್ಥಳದಲ್ಲಿ ಕೆಟ್ಟ ಹವಾಮಾನದಿಂದಾಗಿ ಈಗಾಗಲೇ ಎರಡು ದಿನ ವಿಳಂಬವಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಮಾರ್ಸ್ ಆರ್ಬಿಟರ್ ಉಡಾವಣೆಯನ್ನ ಮತ್ತಷ್ಟು ದಿನಗಳ ಕಾಲ ಮುಂದೂಡಲಾಗಿದೆ.
ಅಮಾಲ್ ಅಥವಾ ಹೋಪ್ ಎಂಬ ಕಕ್ಷೆಯು ಅರಬ್ನ ಮೊದಲ ಅಂತರಗ್ರಹ ಮಿಷನ್ ಆಗಿದೆ. ಆರಂಭದಲ್ಲಿ ದಕ್ಷಿಣ ಜಪಾನ್‌ನ ತನೆಗಶಿಮಾ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ನಿಗದಿಯಾಗಿದ್ದ ಉಡಾವಣೆಯನ್ನು ಈಗಾಗಲೇ ಶುಕ್ರವಾರದವರೆಗೆ ಮುಂದೂಡಲಾಗಿತ್ತು.
ಇದೀಗ ಜುಲೈ ತಿಂಗಳ ಬಳಿಕ ಉಡಾವಣೆ ಮಾಡಲಾಗುತ್ತದೆ ಎಂದು ಯುಎಇ ಮಿಷನ್ ತಂಡ ಟ್ವಿಟರ್ನಲ್ಲಿ ತಿಳಿಸಿದೆ. ನಿಗದಿತ ದಿನಾಂಕಕ್ಕಿಂತ ಕನಿಷ್ಠ ಎರಡು ದಿನಗಳ ಮೊದಲು ಉಡಾವಣೆ ಪ್ರಕಟಿಸುವುದಾಗಿ ತಿಳಿಸಲಾಗಿದೆ.
ಮುಂದಿನ ಕೆಲವು ದಿನಗಳಲ್ಲಿ ಮಿಂಚು ಮತ್ತು ಮಳೆಯ ಮುನ್ಸೂಚನೆ ಇರುವುದರಿಂದ ಉಡಾವಣೆ ಮುಂದೂಡಲಾಗಿದೆ ಎಂದು ಉಡಾವಣಾ ಅಧಿಕಾರಿ ಕೀಜಿ ಸುಜುಕಿ ಹೇಳಿದ್ದಾರೆ.