ETV Bharat / international

ಬಾಂಗ್ಲಾದೇಶದ ಇಬ್ಬರು ಮಹಿಳಾ ಕ್ರಿಕೆಟರ್ಸ್​​​​ಗೆ ಒಮಿಕ್ರಾನ್​​

ಬಾಂಗ್ಲಾದೇಶ ಇಬ್ಬರು ಮಹಿಳಾ ಕ್ರಿಕೆಟರ್ಸ್​​​ಗೆ ಒಮಿಕ್ರಾನ್ ಅಂಟಿದ್ದು, ದೇಶದಲ್ಲಿ ವರದಿಯಾದ ಮೊದಲ ಹೊಸ ರೂಪಾಂತರಿ ಕೇಸ್​ ಇದಾಗಿದೆ.

author img

By

Published : Dec 11, 2021, 8:05 PM IST

Omicron
ಒಮಿಕ್ರಾನ್​​

ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಮೊದಲ ಒಮಿಕ್ರಾನ್​​ ಪ್ರಕರಣಗಳು ಪತ್ತೆಯಾಗಿದ್ದು, ಮಹಿಳಾ ಕ್ರಿಕೆಟ್ ತಂಡದ ಇಬ್ಬರು ಸದಸ್ಯರಿಗೆ ಹೊಸ ರೂಪಾಂತರಿ ಅಂಟಿರುವುದು ದೃಢಪಟ್ಟಿದೆ.

ಇವರಿಬ್ಬರು ಅಧಿಕೃತ ಪ್ರವಾಸಕ್ಕೆ ತೆರಳಿ ಡಿಸೆಂಬರ್​ 6 ರಂದು ಜಿಂಬಾಬ್ವೆಯಿಂದ ಹಿಂದಿರುಗಿದ್ದರು. ಇಬ್ಬರೂ ಜ್ವರದಿಂದ ಬಳಲುತ್ತಿದ್ದಾರೆ. ನಾವು ಅವರನ್ನು ಸಾಂಸ್ಥಿಕ ಕ್ವಾರಂಟೈನ್​​ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಸಂಪೂರ್ಣ ಚೇತರಿಸಿಕೊಂಡ ನಂತರ ಬಿಡುಗಡೆ ಮಾಡುತ್ತೇವೆ ಎಂದು ಬಾಂಗ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಾಹಿದ್ ಮಾಲೆಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಹಳೇ ವೈರಸ್​​ಗಿಂತಲೂ ಮೂರು ಪಟ್ಟು ವೇಗವಾಗಿ ಹರಡಲಿದೆ Omicron.. ಡಾ. ವಿಶಾಲ್ ರಾವ್

ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್​ ಬಂದಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಮೊದಲು ದಕ್ಷಿಣಾ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ಕೊರೊನಾ ವೈರಸ್​ನ ಹೊಸ ರೂಪಾಂತರಿ ಒಮಿಕ್ರಾನ್​ ಇದೀಗ ಜಗತ್ತಿನ 57 ರಾಷ್ಟ್ರಗಳಿಗೆ ಹರಡಿದೆ. ಇಬ್ಬರು ಮಹಿಳಾ ಕ್ರಿಕೆಟರ್​ಗೆ ಒಮಿಕ್ರಾನ್​​ ಅಂಟಿರುವುದು ಬಾಂಗ್ಲಾದೇಶದ ಮೊದಲ ಹೊಸ ರೂಪಾಂತರಿ ಕೇಸ್​ಗಳಾಗಿವೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.