ETV Bharat / international

ಪೂರ್ವ ಮೆಡಿಟರೇನಿಯನ್​ನಲ್ಲಿ ಕಾರ್ಯಾಚರಣೆ ಪುನಾರಂಭಿಸಿದ ಟರ್ಕಿಯ 'ಒರುಕ್ ರೀಸ್' - ಪೂರ್ವ ಮೆಡಿಟರೇನಿಯನ್​ನಲ್ಲಿ ಟರ್ಕಿ ಭೂಕಂಪನ ಸಮೀಕ್ಷೆ

ಮಾಸಿಕ ನಿರ್ವಹಣೆಯ ಸಲುವಾಗಿ ಕಳೆದ ತಿಂಗಳು ಒರುಕ್ ರೀಸ್‌ ಹಡಗು ತನ್ನ ಕಾರ್ಯಾಚರಣೆ ಪ್ರದೇಶದಿಂದ ಅಂಟಲ್ಯ ಪ್ರಾಂತ್ಯದ ಬಂದರಿಗೆ ಹಿಂದಿರುಗಿತ್ತು. ಈ ಹಡಗು ಇದುವರೆಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಒಟ್ಟು 3,525 ಕಿ.ಮೀ ಭೂಕಂಪನ ಡೇಟಾ ಸಂಗ್ರಹಿಸಿದೆ.

Turkey to resume seismic survey in Eastern Mediterranean
ಕಾರ್ಯಾಚರಣೆ ಪುನರಾರಂಭಿಸಿದ ಟರ್ಕಿಯ 'ಒರುಕ್ ರೀಸ್'
author img

By

Published : Oct 12, 2020, 7:33 PM IST

ಅಂಕಾರಾ : ಟರ್ಕಿಯ ಭೂಕಂಪನ ಸಮೀಕ್ಷಾ ಹಡಗು 'ಒರುಕ್ ರೀಸ್' ತನ್ನ ಕಾರ್ಯ ಚಟುವಟಿಕೆಗಳನ್ನು ಪುನಾರಂಭಿಸಲು ಪೂರ್ವ ಮೆಡಿಟರೇನಿಯನ್ ಸಮುದ್ರಕ್ಕೆ ಪ್ರಯಾಣಿಸಿದೆ ಎಂದು ಟರ್ಕಿ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವ ಫಾತಿಹ್ ಡೊನ್ಮೆಜ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾಸಿಕ ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ ಹಡಗು ಮತ್ತೆ ಸಮೀಕ್ಷಾ ಕಾರ್ಯಾಚರಣೆಗೆ ತೆರಳಿದೆ ಎಂದಿದ್ದಾರೆ.

ಮಾಸಿಕ ನಿರ್ವಹಣೆಯ ಸಲುವಾಗಿ ಕಳೆದ ತಿಂಗಳು ಒರುಕ್ ರೀಸ್‌ ಹಡಗು ತನ್ನ ಕಾರ್ಯಾಚರಣೆಯ ಪ್ರದೇಶದಿಂದ ಅಂಟಲ್ಯ ಪ್ರಾಂತ್ಯದ ಬಂದರಿಗೆ ಹಿಂದಿರುಗಿತ್ತು. ಈ ಹಡಗು ಇದುವರೆಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಒಟ್ಟು 3,525 ಕಿ.ಮೀ ಭೂಕಂಪನ ಡೇಟಾ ಸಂಗ್ರಹಿಸಿದೆ.

ಪೂರ್ವ ಮೆಡಿಟರೇನಿಯನ್‌ನಲ್ಲಿ ಇಂಧನ ಪರಿಶೋಧನೆಗೆ ಟರ್ಕಿ ಪ್ರಯತ್ನಿಸುತ್ತಿದೆ, ಇದಕ್ಕೆ ಗ್ರೀಸ್ ತಕರಾರು ತೆಗೆದಿದೆ. ಹೀಗಾಗಿ, ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ನಡುವೆ ಟರ್ಕಿಯ ಹಡಗು ಮತ್ತೆ ಕಾರ್ಯಾಚರಣೆಗೆ ತೆರಳಿದೆ ಎಂದು ಹುರಿಯೆತ್​ ಡೈಲಿ ನ್ಯೂಸ್ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.