ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅಮರುಲ್ಲಾ ಸಲೇಹ್ ಹೇಳಿದ್ದಾರೆ.
ಯೂರೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪಂಜ್‌ಶೀರ್ ಕಣಿವೆಯಿಂದ ಮಾತನಾಡಿದ ಅವರು, ತಾಲಿಬಾನಿಗಳ ಇಸ್ಲಾಮಿಕ್ ಎಮಿರೇಟ್ ಅಫ್ಘಾನಿಸ್ತಾನದ ಜನರಿಗೆ ಸ್ವೀಕಾರಾರ್ಹವಲ್ಲ. ಅವರ ನಾಯಕನ ಆಯ್ಕೆಯೂ ಸ್ವೀಕಾರಾರ್ಹವಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯು ದೀರ್ಘ ಕಾಲ ಉಳಿಯಲಾರದು ಎಂದಿದ್ದಾರೆ.
ತಾಲಿಬಾನಿಗಳು ಬಾಹ್ಯ ಅಥವಾ ಆಂತರಿಕ ನ್ಯಾಯಸಮ್ಮತತೆಯನ್ನು ಹೊಂದಿಲ್ಲ. ಅವರು ಶೀಘ್ರದಲ್ಲೇ ಆಳವಾದ ಮಿಲಿಟರಿ ಬಿಕ್ಕಟ್ಟು ಎದುರಿಸುತ್ತಾರೆ ಎಂದು ಸಲೇಹ್ ಹೇಳುತ್ತಾರೆ.
ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರವೂ ಅಫ್ಘಾನಿಸ್ತಾನವನ್ನು ಏಕೆ ಬಿಡಲಿಲ್ಲ ಎಂದು ಯೂರೋನ್ಯೂಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಹ್ಮದ್ ಶಾ ಮಸೂದ್‌ನ ಸೈನಿಕನಾಗಿದ್ದೇನೆ. ಅವರ ನಿಘಂಟಿನಲ್ಲಿ ದೇಶದಿಂದ ಪಲಾಯನ, ದೇಶಭ್ರಷ್ಟದಂತಹ ವಿಚಾರಗಳಿಲ್ಲ. ಒಂದು ವೇಳೆ ತಪ್ಪಿಸಿಕೊಂಡಿದ್ದರೆ, ನಾನು ದೈಹಿಕವಾಗಿ ಜೀವಂತವಾಗಿರಬಹುದಿತ್ತು. ಆದರೆ ನಾನು ಜಗತ್ತಿನ ಯಾವುದೇ ಮೂಲೆಯನ್ನು ತಲುಪಿದ ತಕ್ಷಣ ಸಾಯುತ್ತಿದ್ದೆ ಎಂದಿದ್ದಾರೆ.
ಇದನ್ನೂ ಓದಿ: ಕಾಬೂಲ್‌ನಲ್ಲಿ 20 ವರ್ಷಗಳ ಯುಕೆ ಕಾರ್ಯಾಚರಣೆ ಅಂತ್ಯ: ತವರಿಗೆ ಮರಳಿದ ಕೊನೆಯ ವಿಮಾನ