ETV Bharat / international

ತಾಲಿಬಾನ್​ ಸರ್ಕಾರದಲ್ಲಿ 'ಸದ್ಗುಣ-ದುರ್ಗುಣ ಸಚಿವಾಲಯ': 20 ವರ್ಷಗಳ ನಂತರ ಕರಾಳ ಕಾನೂನು ಜಾರಿ

author img

By

Published : Sep 17, 2021, 7:51 PM IST

ಸದ್ಗುಣಗಳ ಪ್ರಸರಣ ಮತ್ತು ದುರ್ಗುಣ ತಡೆಗಟ್ಟುವಿಕೆ ಸಚಿವಾಲಯ (Ministry for the Propagation of Virtue and Prevention of Vice) ವನ್ನು ತಾಲಿಬಾನ್​ ತನ್ನ ಆಡಳಿತದಲ್ಲಿ ಮರಳಿ ಜಾರಿಗೆ ತಂದಿದೆ.

Ministry Of Virtue And Vice
ತಾಲಿಬಾನ್​ ಆಡಳಿತದಲ್ಲಿ ಸದ್ಗುಣ-ದುರ್ಗುಣ ಸಚಿವಾಲಯ

ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ಆಡಳಿತಗಾರರು ಮಹಿಳಾ ಉದ್ಯೋಗಿಗಳನ್ನು ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ. ಪುರುಷರಿಗೆ ಮಾತ್ರ ಕಟ್ಟಡದೊಳಗೆ ಬರಲು ಅವಕಾಶ ನೀಡಿದ್ದಾರೆ ಎಂದು ಸಚಿವಾಲಯದ ಉದ್ಯೋಗಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ 20 ವರ್ಷಗಳ ಹಿಂದಿನ ಇತಿಹಾಸವಿರುವ ಸದ್ಗುಣ-ದುರ್ಗುಣ ಸಚಿವಾಲಯ (Ministry of Virtue and Vice)ವನ್ನು ಇದೀಗ ಮತ್ತೆ ಅನುಷ್ಠಾನಕ್ಕೆ ತಂದಿದೆ.

ತಾಲಿಬಾನ್‌ ಸರ್ಕಾರದ ಈ ಸಚಿವಾಲಯವು ಯುಎಸ್ ಅಫ್ಘಾನಿಸ್ತಾನವನ್ನು ಆಕ್ರಮಿಸಿದ ಬಳಿಕ ರದ್ದುಗೊಂಡಿತ್ತು. ಆದರೀಗ, ಸುಮಾರು 20 ವರ್ಷಗಳ ನಂತರ ತಾಲಿಬಾನಿಗಳು ಈ ಸಚಿವಾಲಯವನ್ನು ಪುನಃಸ್ಥಾಪಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ತಾಲಿಬಾನ್ ಅಧಿಕಾರಿಯೊಬ್ಬರು "ಇಸ್ಲಾಂ ಸೇವೆ" ಮಾಡುವುದು ಅವರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಸದ್ಗುಣ-ದುರ್ಗುಣ ಸಚಿವಾಲಯ ಎಂದರೇನು?

ಈ ಸಚಿವಾಲಯವು 20 ವರ್ಷಗಳ ಹಿಂದೆ ತನ್ನ ಗಸ್ತು ವ್ಯಾನ್‌ಗಳಿಗೆ ಹೆಸರುವಾಸಿಯಾಗಿದೆ. ಇದು ಅಫ್ಘಾನಿಸ್ತಾನದ ಬೀದಿಗಳಲ್ಲಿ ಸಂಚರಿಸುವಾಗ ಶರಿಯಾ ಕಾನೂನಿನ ಕಠಿಣ ವ್ಯಾಖ್ಯಾನವನ್ನು ಜಾರಿಗೊಳಿಸುತ್ತಿತ್ತು. ಈ ನಿಯಮಾನುಸಾರ ಅಫ್ಘಾನಿಸ್ತಾನದಲ್ಲಿ ಸಂಗೀತ ನಿಷಿದ್ಧ. ತಪ್ಪೆಸಗಿದವರಿಗೆ ಸಾರ್ವಜನಿಕ ಮರಣದಂಡನೆ, ಮಹಿಳೆಯರಿಗೆ ಚಾಟಿ ಏಟು, ಸಾರ್ವಜನಿಕ ಅವಮಾನ ಮತ್ತು ಕಟ್ಟುನಿಟ್ಟಾದ ಉಡುಗೆ ಸಂಹಿತೆಯನ್ನು ಶರಿಯಾ ಪ್ರಕಾರ ಜನರ ಮೇಲೆ ಹೇರಲಾಗುತ್ತಿತ್ತು.

ಈ ಬಾರಿ ಕಠಿಣ ನಿಯಮಗಳ ಸಡಿಲಿಕೆ ಭರವಸೆ

ಆದರೆ ತಾಲಿಬಾನ್​ ಪ್ರಕಾರ, ಈ ಬಾರಿ ಸಚಿವಾಲಯದ ನಿಯಮಗಳಲ್ಲಿ ಕೆಲ ಸಡಿಲಿಕೆಗಳಿವೆ. ಈ ನಿಯಮ ಹಿಂದಿನಂತಿರುವುದಿಲ್ಲ. ಆದರೆ ಜನರು ನಿಯಮವನ್ನು ಪದೇ ಪದೇ ತಪ್ಪೆಸಗುವುದು ಕಂಡುಬಂದರೆ ಮಾತ್ರ ತನ್ನ ಬಲ ಬಳಸುತ್ತದೆ ಎಂದು ತಾಲಿಬಾನ್‌ ಎಚ್ಚರಿಸಿದೆ.

1998ರ ಯುಕೆ ಪತ್ರಿಕೆಯ ತನಿಖಾ ವರದಿಯ ಪ್ರಕಾರ, ಅಂದಿನ ತಾಲಿಬಾನ್‌ ಸರ್ಕಾರವು ಮನೆಯ ನೆಲ ಮಹಡಿಯಲ್ಲಿರುವ ಕಿಟಕಿಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತಂತೆ. ರಸ್ತೆಯಲ್ಲಿ ಹಾದುಹೋಗುವ ಪುರುಷರು ಈ ಕಿಟಕಿಯ ಮೂಲಕ ಮನೆಯೊಳಗಿರುವ ಮಹಿಳೆಯರನ್ನು ನೋಡಬಹುದು ಎಂಬ ಕಾರಣಕ್ಕೆ ಇಂತಹ ಕಠಿಣ ನಿಯಮ ಜಾರಿಗೆ ತರಲಾಗಿತ್ತಂತೆ. ಮನೆಯಲ್ಲಿ ಟಿವಿ ಕೂಡ ಇಡಕೂಡದು ಎಂದಿದ್ದ ಅಂದಿನ ತಾಲಿಬಾನ್​ ನೀತಿಯು ಘನಘೋರವಾಗಿತ್ತು.

ಅಲ್ಲದೇ, ಅಪರಾಧಗಳಿಗಾಗಿ ತಪ್ಪಿತಸ್ಥ ಮಹಿಳೆಯರಿಗೆ ಭಯಾನಕ ಶಿಕ್ಷೆಗಳನ್ನು ತಾಲಿಬಾನಿಗಳು ನೀಡುತ್ತಿದ್ದರಂತೆ. ಹೆಣ್ಣುಮಕ್ಕಳು ಶಿಕ್ಷಣ ಸಂಸ್ಥೆಗಳಿಂದ ಹೊರಗುಳಿಯುವುದನ್ನು ಅವರು ಖಾತ್ರಿಪಡಿಸಿದ್ದರು. ಆದರೆ ವ್ಯಭಿಚಾರದ ಆರೋಪ ಹೊರಿಸಿ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಗುತ್ತಿತ್ತು. ಇತರ ಸಂದರ್ಭಗಳಲ್ಲಿ, ಅವರ ಪಾದದ ಕೀಲು(Ankle) ಕಾಣುತ್ತಿದ್ದರೆ ಅಥವಾ ಪುರುಷ ಪೋಷಕರ ಜೊತೆಗಿಲ್ಲದಿದ್ದರೆ, ಅವರನ್ನು ಲಾಠಿಗಳಿಂದ ಹೊಡೆಯಲಾಗುತ್ತಿತ್ತು.

ಪುರುಷರಿಗೆ ತೆಳುವಾದ ಗಡ್ಡ ಬಿಡುವುದು ಕಡ್ಡಾಯವಾಗಿತ್ತು. ಗಾಳಿಪಟ ಹಾರಾಟ, ಇಸ್ಪಿಟ್​ ಆಡುವುದು ಪುರುಷರಿಗೆ ನಿಷಿದ್ಧ. ಸಲಿಂಗಕಾಮಕ್ಕೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತಿತ್ತು. ಸಚಿವಾಲಯವು ಕಟ್ಟುನಿಟ್ಟಾದ ಪ್ರಾರ್ಥನಾ ಸಮಯವನ್ನು ಜಾರಿಗೊಳಿಸಿತ್ತು. ಈ ಸಮಯದಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಪ್ರಾರ್ಥನೆ ಸಲ್ಲಿಸಬೇಕಿತ್ತು.

ಅಫ್ಘಾನಿಸ್ತಾನದ ಮೇಲೆ ಯುಎಸ್ ಆಕ್ರಮಣದ ನಂತರ, ಆಗಿನ ಅಧ್ಯಕ್ಷ ಹಮೀದ್ ಕರ್ಜೈ ಅವರು ಈ ಸಚಿವಾಲಯವನ್ನು ನಿಲ್ಲಿಸಿದ್ದರು. ಆದಾಗ್ಯೂ, ಕಡಿಮೆ ಶಕ್ತಿಯುತ ಇಲಾಖೆಯು ಹಜ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಇದು ಅಸ್ತಿತ್ವದಲ್ಲಿತ್ತು.

ಇದೀಗ ಪುನಃ ಈ ಸಚಿವಾಲಯ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ ಹಲವು ಮಹಿಳಾ ವಿರೋಧಿ ಕಠಿಣ ಕಾನೂನುಗಳನ್ನು ಜಾರಿಗೆ ತಂದಿರುವ ತಾಲಿಬಾನ್​ ಈ ಸಚಿವಾಲಯದ ಹೆಸರಿನಲ್ಲಿ ಇನ್ನೂ ಯಾವ ಯಾವ ವಿಚಿತ್ರ, ಅಮಾನವೀಯ ನಿಯಮಗಳನ್ನು ಹೇರಲಿದೆಯೋ ಎಂದು ಅಲ್ಲಿನ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ಇದನ್ನೂ ಓದಿ: ಮಹಿಳಾ ಸಚಿವಾಲಯಕ್ಕೆ ಮಹಿಳಾ ಉದ್ಯೋಗಿಗಳ ಪ್ರವೇಶವನ್ನೇ ನಿಷೇಧಿಸಿದ ತಾಲಿಬಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.