ಕಾಬೂಲ್, ಅಫ್ಘಾನಿಸ್ತಾನ : ತಾಲಿಬಾನ್ ಸರ್ಕಾರ ದಿನದಿಂದ ದಿನಕ್ಕೆ ಅಂತಾರಾಷ್ಟ್ರೀಯ ರಾಜಕೀಯದೊಳಗೆ ಗುರುತಿಸಿಕೊಳ್ಳಲು ಹರಸಾಹಸ ನಡೆಸುತ್ತಿದೆ. ಮಂಗಳವಾರ ದೋಹಾ ಮೂಲದ ವಕ್ತಾರ ಸುಹೈಲ್ ಶಾಹೀನ್ ಅವರನ್ನು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿಯಾಗಿ ನೇಮಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಅಫ್ಘಾನಿಸ್ತಾನ ಮಾತನಾಡಬೇಕಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಗೆ ತನ್ನ ದೇಶದ ರಾಯಬಾರಿಯನ್ನು ನೇಮಕ ಮಾಡಲಾಗಿದೆ ಎಂದು ಗ್ರೇಟ್ ಬ್ರಿಟನ್ನ ಮಾಧ್ಯಮವೊಂದು ವರದಿ ಮಾಡಿದೆ.
ಈ ಮಧ್ಯೆ ಅಫ್ಘಾನಿಸ್ತಾನವನ್ನು ರಾಷ್ಟ್ರಗಳು ಬಹಿಷ್ಕರಿಸಬಾರದೆಂದು ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ವಿಶ್ವದ ನಾಯಕರನ್ನು ಒತ್ತಾಯಿಸಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ತಾಲಿಬಾನ್ನೊಂದಿಗೆ ಮಾತುಕತೆ ತೀರಾ ಅಗತ್ಯವಿದೆ. ಒಂದು ವೇಳೆ ಅಫ್ಘಾನಿಸ್ತಾನವನ್ನು ಬಹಿಷ್ಕರಿಸಿದೆ, ವಿಶ್ವ ಎರಡು ಭಾಗಗಳಾಗುವ ಸಾಧ್ಯತೆ ಇದೆ ಎಂದು ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನ್ಯೂಜಿಲ್ಯಾಂಡ್-ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ರದ್ದತಿಯಿಂದ ನಷ್ಟ: ಕಾನೂನು ಸಲಹೆ ಮೊರೆ ಹೋದ ಪಾಕ್