ETV Bharat / international

ಮಾತು ತಪ್ಪಿದ ತಾಲಿಬಾನ್- ತಿರುಗಿ ಬಿದ್ದ ಜನ​: ಆಫ್ಘನ್ನರಲ್ಲಿ ಭಯದ ವಾತಾವರಣ.. - ಅಫ್ಘಾನ್‌ ಅರಾಜಕತೆ

ತಮ್ಮನ್ನು ವಿರೋಧಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದ್ದ ತಾಲಿಬಾನ್​, ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡಿದೆ, ದೂರದರ್ಶನ ಮತ್ತು ಸಂಗೀತವನ್ನು ನಿಷೇಧಿಸಿದೆ. ತಾಲಿಬಾನರ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನತೆ ದೇಶದಿಂದ ಪಲಾಯನ ಮಾಡಲು ವಿಮಾನ ನಿಲ್ದಾಣ ಮತ್ತು ಗಡಿಗಳಿಗೆ ಓಡುತ್ತಿದ್ದಾರೆ. ಮತ್ತೊಂದೆಡೆ ತಾಲಿಬಾನಿಗರ ವಿರುದ್ಧ ತಿರುಗಿ ಬಿದ್ದು ಪ್ರತಿಭಟನೆಗೂ ಇಳಿದಿದ್ದಾರೆ.

minorities
ಅಫ್ಘನ್ನರಲ್ಲಿ ಭಯದ ವಾತಾವರಣ
author img

By

Published : Aug 18, 2021, 9:29 PM IST

ಕಾಬೂಲ್​: ಅಫ್ಘಾನಿಸ್ತಾನದಲ್ಲಿ ಏಕಾಏಕಿ ಅಧಿಕಾರಕ್ಕೇರಿದ ತಾಲಿಬಾನ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಭರವಸೆಯನ್ನೇನೋ ನೀಡಿದೆ. ಆದರೆ, ಅನೇಕ ಅಫ್ಘಾನಿಸ್ತಾನರು ಅವರನ್ನು ನಂಬುವುದಿಲ್ಲ. ಏಕೆಂದರೆ ತಾಲಿಬಾನ್ ನಾಯಕರು ತಾವು ಬದಲಾಗಿದ್ದೇವೆ ಮತ್ತು ಈ ಹಿಂದೆ ನಾವು ಅಫ್ಘಾನಿಸ್ತಾನವನ್ನು ಆಳಿದಾಗ ಮಾಡಿದ ಕಠಿಣ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಬಾಯಿಮಾತಿಗೆ ಹೇಳುತ್ತಿದ್ದಾರೆ. ಆದರೆ ಮಾಡುತ್ತಿರುವುದೆಲ್ಲಾ ಅವರ ಮಾತಿಗೆ ತದ್ವಿರುದ್ಧ.

ಮಾತಿಗೂ ಕೃತಿಗೂ ಅಜಗಜಾಂತರ

ಇದಕ್ಕೆ ಉದಾಹರಣೆ ತಾಲಿಬಾನ್ ಪಡೆಗಳು 1990ರಲ್ಲಿ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಮ್ಮ ವಿರುದ್ಧ ಹೋರಾಡಿದ ಶಿಯಾ ಸೈನ್ಯದ ನಾಯಕನ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು. ಈ ಘಟನೆ ಬಳಿಕ ತಾಲಿಬಾನ್​ ಸಂಘಟನೆ ತಾನು ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಭಯವನ್ನು ಅಫ್ಘನ್​ರಲ್ಲಿ ಸೃಷ್ಟಿಸಿದೆ.

ಇದನ್ನೂ ಓದಿ:ಅಫ್ಘಾನ್‌ನಲ್ಲಿ ತಾಲಿಬಾನ್‌ 2.0 ಅರಾಜಕತೆ ಶುರು ; ಹಜಾರಾ ನಾಯಕನ ಪ್ರತಿಮೆ ಧ್ವಂಸ

ತಿರುಗಿಬಿದ್ದ ಜನ.. ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ

ತಾಲಿಬಾನ್ ಅಧಿಕಾರಕ್ಕೆ ಬಂದರೆ ಎರಡು ದಶಕಗಳ ಹಿಂದಿನ ತಮ್ಮ ಅರಾಜಕತೆಯ ಆಡಳಿತವು ಹಿಂತಿರುಗುತ್ತದೆ ಎಂದು ಭಯಪಡುತ್ತಿದ್ದ ಅಲ್ಲಿನ ಜನರ ನಿರೀಕ್ಷೆಗಳು ನಿಜವಾಗುತ್ತಿವೆ. ತಮ್ಮ ಅಟ್ಟಹಾಸವನ್ನು ಮೆರೆಯುತ್ತಿರುವ ತಾಲಿಬಾನ್‌ಗಳು ಹಜಾರಾ ನಾಯಕ ಅಬ್ದುಲ್ ಅಲಿ ಮಜಾರಿ ಅವರ ಪ್ರತಿಮೆ ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ.

ಅಫ್ಘಾನಿಸ್ತಾನದ ಕಚೇರಿಗಳಲ್ಲಿ ತಾಲಿಬಾನ್ ಧ್ವಜದ ಬದಲು ಅಫ್ಘಾನಿಸ್ತಾನದ ಧ್ವಜವನ್ನು ಮರು ಸ್ಥಾಪಿಸುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ತಾಲಿಬಾನಿ ಹೋರಾಟಗಾರರು ಗುಂಡು ಹಾರಿಸಿ ಓರ್ವನನ್ನು ಕೊಂದಿದ್ದಾರೆ. ಇದು ಅಪಘಾನಿಸ್ತಾನದ ಜನರಲ್ಲಿ ತಾಲಿಬಾನ್​ ಮೇಲಿನ ಅಪನಂಬಿಕೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

ಇದನ್ನೂ ಓದಿ:'ತಾಲಿಬಾನಿ​ಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ

ತಮ್ಮನ್ನು ವಿರೋಧಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದ್ದ ತಾಲಿಬಾನ್​, ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡಿದೆ, ದೂರದರ್ಶನ ಮತ್ತು ಸಂಗೀತವನ್ನು ನಿಷೇಧಿಸಿದೆ. ತಾಲಿಬಾನರ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನತೆ ದೇಶದಿಂದ ಪಲಾಯನ ಮಾಡಲು ವಿಮಾನ ನಿಲ್ದಾಣ ಮತ್ತು ಗಡಿಗಳಿಗೆ ಓಡುತ್ತಿದ್ದಾರೆ.

ಯುಎಸ್​ ಅಧಿಕಾರಿಗಳಿಗೂ ಭಯ:

ಈ ಹಿಂದೆ 2001 ಕ್ಕೂ ಮೊದಲು ತಾಲಿಬಾನ್ ಅಧಿಕಾರದಲ್ಲಿದ್ದಾಗ ಒಸಾಮಾ ಬಿನ್ ಲಾಡೆನ್ ಮತ್ತು ಅಲ್ - ಕೈದಾ ಸದಸ್ಯರಿಗೆ ಆಶ್ರಯ ನೀಡಿತ್ತು. ಅವರು ಸೆಪ್ಟೆಂಬರ್ 11, 2001ರ ದಾಳಿಗೆ ಇವರು ಯೋಜಿಸಿದ್ದರು. ಇದೀಗ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಅಲ್-ಕೈದಾ ಮತ್ತು ಇತರ ಉಗ್ರ ಗುಂಪುಗಳು ಅಫ್ಘಾನಿಸ್ತಾನದಲ್ಲಿ ತಮ್ಮನ್ನು ತಾವು ಪುನರ್​ ರಚಿಸಿಕೊಳ್ಳಬಹುದೆಂಬ ಆತಂಕ ಯುಎಸ್ ಅಧಿಕಾರಿಗಳದ್ದು. ಅಲ್ಲದೇ ಯುಎಸ್ ರಾಯಭಾರ ಕಚೇರಿಯು ವಿಮಾನ ನಿಲ್ದಾಣದ ಮಿಲಿಟರಿ ಭಾಗಕ್ಕೆ ಸ್ಥಳಾಂತರಗೊಂಡಿದೆ, ಅಲ್ಲಿ ಅಮೆರಿಕನ್ನರೊಂದಿಗೆ ಕೆಲಸ ಮಾಡಿದ ರಾಜತಾಂತ್ರಿಕರು, ವಿದೇಶಿಯರು ಈಗ ಪ್ರತೀಕಾರ ತೀರಿಸಿಕೊಳ್ಳುವ ಭಯವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.