ETV Bharat / international

ಸೇನೆ ಸಂಪೂರ್ಣವಾಗಿ ಹಿಂತೆಗೆದುಕೊಂಡ ಅಮೆರಿಕ: ಕಾಬೂಲ್​ನಲ್ಲಿ Taliban​ ವಿಜಯೋತ್ಸವ

author img

By

Published : Aug 31, 2021, 7:24 PM IST

ಕಾಬೂಲ್​ನಲ್ಲಿದ್ದ ತನ್ನ ಸೇನೆಯನ್ನು ಅಮೆರಿಕ ಸಂಪೂರ್ಣವಾಗಿ ಹಿಂಪಡೆದುಕೊಂಡಿದ್ದು, ತಾಲಿಬಾನ್​ ವಿಜಯೋತ್ಸವ ಆಚರಿಸಿದೆ.

Taliban
Taliban

ಕಾಬೂಲ್(ಅಫ್ಘಾನಿಸ್ತಾನ): ದೇಶದಿಂದ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣ ಹಿಂತೆಗೆದುಕೊಂಡ ಬಳಿಕ, ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ತಾಲಿಬಾನ್​, ವಿಜಯೋತ್ಸವದ ಮೆರವಣಿಗೆ ಜರುಗಿತು.

ಫೋಟೋಸ್​ಗೆ ಪೋಸ್ ನೀಡಿದ ಉಗ್ರರು

ಈ ವೇಳೆ ಟಾರ್ಮ್ಯಾಕ್​ ಮೇಲೆ ನಿಂತ ತಾಲಿಬಾನ್​ ನಾಯಕರು, ದೇಶವನ್ನು ಸುರಕ್ಷಿತವಾಗಿಡುತ್ತೇವೆ. ಏರ್​ಪೋರ್ಟ್​​ಅನ್ನು ಶೀಘ್ರವಾಗಿ ತೆರೆಯಲು ಕ್ರಮ ಕೈಗೊಳ್ಳುತ್ತೇವೆ ಎಂದರು. ಮಾರಕಾಸ್ತ್ರಗಳಿಂದ ಇಡೀ ನಗರ ಸುತ್ತುವರಿದ ನಾಯಕರು ಸಖತ್ ಖುಷಿಯಿಂದ ಫೋಟೋಗಳಿಗೆ ಪೋಸ್ ನೀಡಿದ್ರು. ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏಕೈಕ ರನ್​ವೇ ಉದ್ದಕ್ಕೂ ತಾಲಿಬಾನ್​ನ ವಾಹನಗಳು ಹಿಂದಕ್ಕೆ ಮತ್ತು ಮುಂದಕ್ಕೆ ಸಂಚರಿಸಿದವು.

ತಾಲಿಬಾನ್​ಗೆ ದೊಡ್ಡ ಸವಾಲು

ಎರಡು ದಶಕಗಳಿಂದ ಅಮೆರಿಕ ಸೇನೆ ನೆರವಿನಿಂದ ಜೀವನ ನಡೆಸುತ್ತಿದ್ದ 38 ದಶಲಕ್ಷ ಜನರು ಇದೀಗ ತಾಲಿಬಾನ್​ ಕಪಿಮುಷ್ಠಿಗೆ ಸಿಲುಕಿ ನರಳಾಡುತ್ತಿದ್ದಾರೆ. ಸದ್ಯ ದೇಶದಲ್ಲಿ ಮತ್ತೆ ಸರ್ಕಾರ ರಚಿಸಿ, ಸುಗಮ ಆಡಳಿತ ನಡೆಸುವುದು ತಾಲಿಬಾನ್​​ ಮುಂದಿರುವ ಸವಾಲು.

ಮಿಲಿಟರಿ, ದೇಶ ನಮ್ಮ ನಿಯಂತ್ರಣದಲ್ಲಿದೆ..

ವಿಜಯೋತ್ಸವದ ಬಳಿಕ ಮಾತನಾಡಿದ ತಾಲಿಬಾನ್‌ನ ಉನ್ನತ ಅಧಿಕಾರಿ ಹೆಕ್ಮತ್​ ಉಲ್ಲಾ ವಾಸಿಕ್, ಮಿಲಿಟರಿ ಹಾಗೂ ನಾಗರಿಕರು ನಮ್ಮ ನಿಯಂತ್ರಣದಲ್ಲಿದೆ. ಶೀಘ್ರದಲ್ಲೇ ನಾವು ಹೊಸ ಸಚಿವ ಸಂಪುಟವನ್ನು ರಚಿಸಲಿದ್ದೇವೆ ಎಂದಿದ್ದಾರೆ. ನಿಧಾನವಾಗಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಜನರಿಗೆ ತಾಳ್ಮೆಯಿರಬೇಕು, ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ತೆರಳಿ ಎಂದು ಆಫ್ಘನ್ ನಿವಾಸಿಗಳಿಗೆ ಕರೆ ನೀಡಿದರು.

‘ಜಾಗರೂಕರಾಗಿರಿ’

ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಬದ್ರಿ ತಮ್ಮ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರದೊಂದಿಗೆ ವ್ಯವಹರಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ನಮ್ಮ ರಾಷ್ಟ್ರವು ಯುದ್ಧ ಮತ್ತು ಆಕ್ರಮಣವನ್ನು ಅನುಭವಿಸಿದೆ. ನಮ್ಮ ಜನರಿಗೆ ಹೆಚ್ಚಿನ ಸಹಿಷ್ಣುತೆ ಇಲ್ಲ ಎಂದರು. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಪುನಾರಂಭಿಸುವ ಆಲೋಚನೆಯಲ್ಲಿದ್ದೇವೆ. ಇದು ದೇಶವನ್ನು ತೊರೆಯಲು ಬಯಸುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ನಾವು ದೇಶದ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಬೇರೆ ಯಾರ ಸಹಾಯವೂ ಬೇಕಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ, ಕತಾರ್, ಟರ್ಕಿ ಸಹಾಯ ಕೇಳುತ್ತೇವೆ ಅಷ್ಟೇ ಎಂದು ಆತ್ಮೀಯರಾದ ಚೀನಾ, ಪಾಕಿಸ್ತಾನವನ್ನು ಅವರು ಕಡೆಗಣಿಸಿದರು.

‘ಅಮೆರಿಕವನ್ನು ಮಣಿಸಿದ್ದೇವೆ’

ನಾವು 20 ವರ್ಷಗಳ ಬಳಿಕ ಅಮೆರಿಕರನ್ನು ಸೋಲಿಸಿದ್ದೇವೆ ಎಂದು ತಾಲಿಬಾನ್​ ಸದಸ್ಯ ಮೊಹಮ್ಮದ್ ಇಸ್ಲಾಂ ಹೇಳಿದ್ದಾನೆ. ನಮಗೀಗ ಏನು ಬೇಕೆಂದು ಸ್ಪಷ್ಟವಾಗಿ ತಿಳಿದಿದೆ. ನಾವು ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.

ಆಫ್ಘನ್ನರಿಗೆ ಹೊಸ ಅವಕಾಶ..

ತಮ್ಮ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಟ್ವೀಟ್ ಮಾಡಿರುವ ಅಮೆರಿಕದ ವಿಶೇಷ ಪ್ರತಿನಿಧಿ ಅಲ್ಮಯ್ ಖಲೀಲ್​ಜಾದ್, ಆಫ್ಘನ್ನರಿಗೆ ಈಗ ಹೊಸ ಅವಕಾಶಗಳು ಸಿಕ್ಕಿವೆ. ಅವರ ದೇಶದ ಭವಿಷ್ಯ ಅವರ ಕೈಯಲ್ಲೇ ಇದೆ. ಯುದ್ಧವನ್ನು ಅಂತ್ಯಗೊಳಿಸಲು ಇದೊಂದು ಸುವರ್ಣಾವಕಾಶ ಎಂದು ಬರೆದಿದ್ದಾರೆ.

ತಾಲಿಬಾನ್ ಮುಂದೆ ಸರಣಿ ಸಮಸ್ಯೆ..

ತಾಲಿಬಾನ್​​ ಸರ್ಕಾರವನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡರೆ ಅವರಿಗೆ ಸರಣಿ ಸಮಸ್ಯೆಗಳು ಎದುರಾಗಲಿವೆ. ಅಫ್ಘಾನಿಸ್ತಾನವು ವಿದೇಶಿ ಮೀಸಲುಗಳಲ್ಲಿ ಹೊಂದಿರುವ ಶತಕೋಟಿ ಡಾಲರ್‌ಗಳ ಬಹುಪಾಲು ಈಗ ಅಮೆರಿಕದಲ್ಲಿವೆ. ಆಫ್ಘನ್​ ಕರೆನ್ಸಿ ಮೌಲ್ಯ ಕುಸಿಯುತ್ತಿದ್ದು, ದೇಶದಲ್ಲಿ ಅನಿಶ್ಚತತೆ ಉಂಟಾಗಿದೆ. ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೂ ವೇತನ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಲಭೂತ ಸೌಕರ್ಯಗಳ ಕೊರತೆ..

ವೈದ್ಯಕೀಯ ಸಲಕರಣೆಗಳ ಕೊರತೆ ಉಂಟಾಗಿದೆ. ಆಹಾರ ಸಮಸ್ಯೆಯಿಂದಾಗಿ ಜನರು ಹಸಿವಿನಿಂದ ನರಳುತ್ತಿದ್ದಾರೆ. ತಾಲಿಬಾನ್‌ನ ಹಿಂದಿನ ಆಡಳಿತದಲ್ಲಿ ದಬ್ಬಾಳಿಕೆಯನ್ನು ಎದುರಿಸಿದ ಮಹಿಳೆಯರ ಹಕ್ಕುಗಳು ಕೂಡ ಪ್ರಶ್ನೆಯಲ್ಲಿದೆ.

ಮಂಗಳವಾರದಿಂದ ಶಾಲೆಗಳು ಪುನರಾಂಭಗೊಂಡಿದ್ದು, ಇಂದು ಬೆಳಗ್ಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಿಮಾನ ನಿಲ್ದಾಣದ ಸಮೀಪದ ನೆರೆಹೊರೆಯ ಶಾಲೆಗಳಿಗೆ ತೆರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.