ಸಿಯೋಲ್: ಕಳೆದ ವಾರ ಉತ್ತರ ಕೊರಿಯಾ ಭದ್ರತಾ ಪಡೆಗಳು ದಕ್ಷಿಣ ಕೊರಿಯಾ ನಾಗರಿಕನನ್ನು ಗುಂಡಿಕ್ಕಿ ಕೊಂದಿರುವುದಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಇದೇ ಮೊದಲ ಬಾರಿಗೆ ತಮ್ಮ ದೇಶದ ಜನತೆಯ ಕ್ಷಮೆಯಾಚಿಸಿದ್ದಾರೆ. ದೇಶದ ವ್ಯಕ್ತಿಯನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದು, ಇಂದು ನಡೆದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಮೃತ ವ್ಯಕ್ತಿಗೆ ಸಂತಾಪ ಸೂಚಿಸಿದ್ದಾರೆ.
ಕಳೆದ ಮಂಗಳವಾರ ಶೂಟ್ ಮಾಡಿ ನಾಗರಿಕನ ಹತ್ಯೆಗೆ ಯತ್ನಿಸಲಾಗಿತ್ತು. ಉತ್ತರ ಕೊರಿಯಾದ ಗಡಿ ಪ್ರದೇಶದಲ್ಲಿನ ನೀರಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ ವ್ಯಕ್ತಿಯನ್ನು ದಕ್ಷಿಣ ಕೊರಿಯಾ ಅಧಿಕಾರಿಗಳು ರಕ್ಷಣೆ ಮಾಡದೆ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿತ್ತು. ಇದು ಅಲ್ಲಿನ ಜನರ ಭಾರಿ ಆಕ್ರೋಶ ಕಾರಣವಾಗಿತ್ತು. ಜೊತೆಗೆ ಸರ್ಕಾರದ ವಿರುದ್ಧ ಸ್ಥಳೀಯರು ತಿರುಗಿಬಿದ್ದಿದ್ದರು.
ಉತ್ತರ ಕೊರಿಯಾದ ಸೇನೆ ಕೇಳಿದ ಪ್ರಶ್ನೆಗಳಿಗೆ ವ್ಯಕ್ತಿ ಸರಿಯಾದ ಉತ್ತರ ನೀಡಿಲ್ಲ. ಹೀಗಾಗಿ ಸೇನಾ ನಡೆಸಿದ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಆತ ನೀರಿನಲ್ಲಿ ಬಿದ್ದಿದ್ದಾನೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ. ಇದೇ ವಿಚಾರ ಸಂಬಂಧ ಎರಡೂ ದೇಶಗಳ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.