ETV Bharat / international

'ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಿಸಿ': ಪಾಕ್‌ಗೆ ದ.ಏಷ್ಯಾ ಮಾನವ ಹಕ್ಕುಗಳ ಸಂಸ್ಥೆ ತಾಕೀತು - ಇಸ್ಲಮಾಬಾದ್​ನಲ್ಲಿ ವಾಸಿಸುವ ಅಲ್ಪಸಂಖ್ಯಾತರ ಜೀವನ

ಪ್ರಧಾನಿ ಇಮ್ರಾನ್ ಖಾನ್ ಶೋಷಿತ ವರ್ಗವನ್ನು ಹಲವಾರು ಸಂದರ್ಭಗಳಲ್ಲಿ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದರೂ, ಪಾಕಿಸ್ತಾನ ತನ್ನ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

pak
pak
author img

By

Published : Dec 24, 2020, 5:15 PM IST

ಇಸ್ಲಾಮಾಬಾದ್(ಪಾಕಿಸ್ತಾನ): ಕಳೆದ ವರ್ಷ ಪಾಕಿಸ್ತಾನದ ಥಾರ್‌ ಪಾರ್ಕರ್ ಜಿಲ್ಲೆಯಲ್ಲಿ 17 ವರ್ಷದ ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ. ಪಾಕ್​ನಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಿರುವುದರ ಬಗ್ಗೆ ದಕ್ಷಿಣ ಏಷ್ಯಾದ ಮಾನವ ಹಕ್ಕುಗಳ ಗುಂಪು ಇಸ್ಲಾಮಾಬಾದ್ ವಿರುದ್ಧ ವಾಗ್ದಾಳಿ ನಡೆಸಿದೆ.

ದೇಶದಲ್ಲಿ ವಾಸಿಸುವ ಹಿಂದೂ ಹೆಣ್ಣು ಮಕ್ಕಳ ಬಲವಂತದ ಮತಾಂತರ ಹಾಗೂ ಅಲ್ಲಿನ ಅಲ್ಪಸಂಖ್ಯಾತ ನಿವಾಸಿಗಳ ಜೀವನದ ಮೇಲೆ ನಡೆಸುತ್ತಿರುವ ಆಕ್ರಮಣ ದಾಳಿ ನಿಲ್ಲಿಸಬೇಕೆಂದು ಅದು ಒತ್ತಾಯಿಸಿದೆ.

ದಕ್ಷಿಣ ಏಷ್ಯಾ ಕಲೆಕ್ಟಿವ್ಸ್ (ಎಸ್‌ಎಸಿ)ಯ "ದಕ್ಷಿಣ ಏಷ್ಯಾ ರಾಜ್ಯ ಅಲ್ಪಸಂಖ್ಯಾತರ ವರದಿ, 2020" ಇತ್ತೀಚೆಗೆ ಬಿಡುಗಡೆಯಾಗಿದ್ದು, ಅದರ ಪ್ರಕಾರ, ಪಾಕಿಸ್ತಾನವು ನಾಗರಿಕ ಸ್ವಾತಂತ್ರ್ಯ ನಿರ್ಬಂಧಿಸುವ ಕಾನೂನುಗಳ ಮೂಲಕ ಸಾರ್ವಜನಿಕ ಜೀವನದ ಮೇಲೆ ಆಕ್ರಮಣಕಾರಿ ದಾಳಿ ನಿಲ್ಲಿಸಬೇಕು, ಎಂದು ಒತ್ತಾಯಿಸಿದೆ.

ಭದ್ರತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಪಾಕಿಸ್ತಾನದಲ್ಲಿ ದೊಡ್ಡ ಕಳವಳವಾಗಿದೆ. ನಾಗರಿಕ ಸಮಾಜದಲ್ಲಿ ಕುಗ್ಗುತ್ತಿರುವ ಮಾನವ ಹಕ್ಕುಗಳ ರಕ್ಷಣೆ ಮತ್ತು ಮುಕ್ತ ಚಿಂತಕರಿಗೆ ಹೆಚ್ಚುತ್ತಿರುವ ಬೆದರಿಕೆಗಳನ್ನು ಅದು ಸೂಚಿಸುತ್ತದೆ, ಎಂದು ಎಸ್ಎಸಿ ವರದಿಯಲ್ಲಿ ತಿಳಿಸಿದೆ.

ಇನ್ನು ಬಲವಂತವಾಗಿ ಮಹಿಳೆಯರನ್ನು ಬಂಧಿಸುವುದು, ಕೊಲೆ ಮಾಡುವುದು ಇವೇ ಮುಂತಾದ ಪ್ರಕ್ರಿಯೆಗಳು ಇಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಹೀಗಾಗಿ ಅವರು ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಅಲ್ಲದೇ ಅವರ ಕುಟುಂಬಗಳೊಂದಿಗೆ ಸಂಬಂಧ ಕಡಿದುಕೊಳ್ಳಲು ಒತ್ತಾಯಿಸಲ್ಪಡುತ್ತಾರೆ. ಈ ಹುಡುಗಿಯರಲ್ಲಿ ಹೆಚ್ಚಿನವರು ಕೃಷಿ ಭೂಮಿಯಲ್ಲಿ ಮಾಲೀಕರಿಗಾಗಿ ಕೆಲಸ ಮಾಡುವ ಬಂಧಿತ ಕಾರ್ಮಿಕರ ಕುಟುಂಬಗಳಿಗೆ ಸೇರಿದವರು, ಎಂದು ವರದಿ ಬಹಿರಂಗಪಡಿಸಿದೆ.

ಇದನ್ನೂ ಓದಿ: ಬ್ರಿಟನ್‌ನಲ್ಲಿ ಕೊರೊನಾ ಹೊಸ ಸ್ವರೂಪ: ಮೊದಲ ಬಾರಿಗೆ ಅತಿಹೆಚ್ಚು ಸಾವು

ದೇಶದ ಪ್ರಧಾನಿ ಇಮ್ರಾನ್ ಖಾನ್ ಅಂತಹ ಶೋಷಿತ ವರ್ಗವನ್ನು ಹಲವಾರು ಸಂದರ್ಭಗಳಲ್ಲಿ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ, ಪಾಕಿಸ್ತಾನ ತನ್ನ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಅಂತಾರಾಷ್ಟ್ರೀಯ ಸಮುದಾಯದಿಂದ ಪದೇ ಪದೆ ಆಪಾದನೆಗೆ ಒಳಗಾಗುತ್ತಿದೆ.

ಅಲ್ಪಸಂಖ್ಯಾತ ಕುಟುಂಬಗಳಿಗೆ ಉತ್ತಮ ಜೀವನ ಒದಗಿಸುವ ನೆಪದಲ್ಲಿ, ಭೂಮಾಲೀಕರು ಮರು ಪಾವತಿಸಲಾಗದಂತಹ ಹೆಚ್ಚಿನ ಮೊತ್ತದ ಸಾಲಗಳನ್ನು ಒದಗಿಸುವ ಮೂಲಕ ಅಲ್ಪಸಂಖ್ಯಾತರ ಕುಟುಂಬಗಳನ್ನು ಬಂಧನಕ್ಕೆ ಸಿಲುಕಿಸುತ್ತಾರೆ. ಹಾಗಾಗಿ ಹಿಂದೂ ಕುಟುಂಬಗಳು ನೀಡಿದ ಸಾಲ ತೀರಿಸಲು ಒತ್ತಾಯಿಸಲ್ಪಡುತ್ತಾರೆ. ಇಲ್ಲದೇ ಹೋದರೆ ಆ ಕುಟುಂಬದ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ಎಸ್‌ಎಸಿ ತನ್ನ ವರದಿಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.