ಮಾಸ್ಕೋ (ರಷ್ಯಾ): ಅಫ್ಘಾನಿಸ್ತಾನದಲ್ಲಿರುವ ರಷ್ಯಾದ ರಾಯಭಾರಿ ಡಿಮಿಟ್ರಿ ಜಿರ್ನೋವ್ ತಾಲಿಬಾನ್ ಆಡಳಿತದ ಬಗ್ಗೆ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. "ಅಫ್ಘಾನ್ ರಾಜಧಾನಿ ಕಾಬೂಲ್ನಲ್ಲಿ ಅಧ್ಯಕ್ಷ ಅಶ್ರಫ್ ಘನಿ ಅವರ ಆಡಳಿತಕ್ಕಿಂತಲೂ ತಾಲಿಬಾನ್ ನಿಯಂತ್ರಣದಲ್ಲಿದ್ದ ಮೊದಲ ದಿನ ಉತ್ತಮವಾಗಿದೆ" ಎಂದು ಹೇಳಿದ್ದಾರೆ.
"ಕಾಬೂಲ್ ತಾಲಿಬಾನ್ ಆಳ್ವಿಕೆಯಲ್ಲಿರುವ ಮೊದಲ ದಿನ ಉತ್ತಮವಾಗಿದೆ. ಅಶ್ರಫ್ ಘನಿಗಿಂತ ತಾಲಿಬಾನ್ ಆಡಳಿತ ಚೆನ್ನಾಗಿದೆ" ಎಂದು ರಾಯಭಾರಿ ಸೋಮವಾರ ಎಖೋ ಮಾಸ್ಕ್ವಿ ರೇಡಿಯೋ ಕೇಂದ್ರದ ನೇರ ಪ್ರಸಾರದಲ್ಲಿ ಹೇಳಿದ್ದಾರೆ.
ಆಗಸ್ಟ್ 15ರಂದು ತಾಲಿಬಾನ್ ಉಗ್ರರ ದಂಡು ರಾಜಧಾನಿ ಕಾಬೂಲ್ ಪ್ರವೇಶಿಸಿದೆ. ದೇಶದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಈಗಾಗಲೇ ದೇಶ ತೊರೆದು ತಜಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಧ್ಯಕ್ಷರ ಅರಮನೆಯನ್ನು ಉಗ್ರರು ವಶಕ್ಕೆ ಪಡೆದು ಅಟ್ಟಹಾಸ ಮೆರೆದಿದ್ದಾರೆ. ಆದರೆ ರಷ್ಯಾದ ರಾಯಭಾರಿಯ ಈ ಹೇಳಿಕೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.