ಕಠ್ಮಂಡು(ನೇಪಾಳ) : ಜನವಸತಿ ಪ್ರದೇಶದಲ್ಲಿ ಹಿಮಕುಸಿತ (avalanche) ಉಂಟಾಗಿ ಏಳು ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಗಾಯಗೊಂಡಿರುವ ಘಟನೆ ನೇಪಾಳದ ಮುಸ್ತಾಂಗ್‌ನಲ್ಲಿ ( Nepal's Mustang) ನಡೆದಿದೆ.
ಮುಸ್ತಾಂಗ್‌ನ ವಸತಿ ಪ್ರದೇಶವನ್ನು ಆವರಿಸಿದ್ದ ತುಕುಚೆ ಪರ್ವತದಿಂದ (Tukuche Mountain) ಹಿಮಪಾತವಾಗಿದೆ. ಸಮೀಪವಿದ್ದ ಅಮರಸಿಂಗ್ ಪ್ರೌಢಶಾಲೆಯ (Amarsingh High School) ಮಕ್ಕಳು ಹಾಗೂ ಸ್ಥಳೀಯರು ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
30 ನಿಮಿಷಗಳ ಕಾಲ ಹಿಮ ಕುಸಿತವಾಗಿದೆ. ಈ ವೇಳೆ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದವು. ಹಿಮ ಬೀಳಲು ಪ್ರಾರಂಭಿಸಿದ ತಕ್ಷಣವೇ ವಿದ್ಯಾರ್ಥಿಗಳು ಶಾಲೆಯಿಂದ ಓಡಿ ಹೋದರು.
ಎಲ್ಲಾ ವಿದ್ಯಾರ್ಥಿಗಳನ್ನು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹಿಮ ಕುಸಿತವಾದ ಪ್ರದೇಶವು ಹೆಚ್ಚು ಹುಲ್ಲುಗಾವಲು ಇದ್ದ ಪ್ರದೇಶವಾಗಿದ್ದು, ಜಾನುವಾರುಗಳ ಮೇಲೆ ಪರಿಣಾಮ ಬೀರಿದೆ.