ETV Bharat / international

ಇರಾನ್​ನ ವಿಜ್ಞಾನಿ ಹತ್ಯೆಯಲ್ಲಿ ನಮ್ಮ ಪಾತ್ರವಿಲ್ಲ: ಸೌದಿ ಅರೇಬಿಯಾ ವಿದೇಶಾಂಗ ಸಚಿವ ಸ್ಪಷ್ಟನೆ - ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಹತ್ಯೆ

ವಿಜ್ಞಾನಿ ಹತ್ಯೆ ಸೌದಿ ಅರೇಬಿಯಾ - ಯು.ಎಸ್-ಇಸ್ರೇಲ್ ಸಂಚು ಎಂದು ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಜರೀಫ್ ಆರೋಪಕ್ಕೆ ಅವರು ತಮ್ಮ ಟ್ವಿಟರ್​​​​​​ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Saudi Arabia denies role in assassination of Iranian nuke scientist
ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಹತ್ಯೆ
author img

By

Published : Dec 2, 2020, 2:38 PM IST

ರಿಯಾದ್: ಇರಾನಿನ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಹತ್ಯೆಯಲ್ಲಿ ತಮ್ಮ ದೇಶದ ಯಾವುದೇ ಪಾತ್ರವಿಲ್ಲ ಎಂದು ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಅಡೆಲ್ ಅಲ್ ಜುಬೀರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ವಿಜ್ಞಾನಿ ಹತ್ಯೆ ಸೌದಿ ಅರೇಬಿಯಾ - ಯು.ಎಸ್-ಇಸ್ರೇಲ್ ಸಂಚು ಎಂದು ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಜರೀಫ್ ಆರೋಪಕ್ಕೆ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಹತ್ಯೆಗಳಲ್ಲಿ ತೊಡಗುವುದು ಸೌದಿ ಅರೇಬಿಯಾದ ನೀತಿಯಲ್ಲ ಎಂದು ಅಲ್ ಜುಬೀರ್ ಹೇಳಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್ ಬಳಿ ಫಖ್ರಿಜಾದೆ ಅವರನ್ನು ಶುಕ್ರವಾರ "ಸಶಸ್ತ್ರ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ" ಎಂದು ಇರಾನಿನ ರಕ್ಷಣಾ ಸಚಿವಾಲಯ ತಿಳಿಸಿದೆ.

ಓದಿ:ನೆಟ್ಟಿಗರ ಮನಸೆಳೆದ ಆಕಾಶದಿಂದ ಧೂಮಕೇತು ಧುಮುಕುವ ದೃಶ್ಯ

2016 ರ ಆರಂಭದಲ್ಲಿ, ಸೌದಿ ಶಿಯಾ ಧರ್ಮಗುರು ನಮೀರ್ ಅಲ್ - ನಮೀರ್ ಸೇರಿದಂತೆ ಭಯೋತ್ಪಾದನೆ ಆರೋಪದ ಮೇಲೆ 47 ಜನರನ್ನು ಸೌದಿ ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಇರಾನಿನವರು ಸೌದಿ ರಾಜತಾಂತ್ರಿಕ ಕಾರ್ಯಾಚರಣೆಗಳ ಮೇಲೆ ದಾಳಿ ನಡೆಸಿದ ನಂತರ ಸೌದಿ ಅರೇಬಿಯಾ ಇರಾನ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.