ಸಿಯೋಲ್:ದಕ್ಷಿಣ ಕೊರಿಯಾ ಮೊದಲ ಬಾರಿಗೆ ದೇಶೀಯವಾಗಿ ತಯಾರಿಸಿದ 'ನೂರಿ' ಉಪಗ್ರಹವನ್ನು ಗುರುವಾರ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.
ಹವಾಮಾನ ಮತ್ತು ಇತರ ಪರಿಸ್ಥಿತಿಗಳು ಹೊಂದಾಣಿಕೆಯಾದರೆ ಮೂರು ಹಂತದ ನೂರಿ ರಾಕೆಟ್ ಅನ್ನು ಡಮ್ಮಿ ಪೇಲೋಡ್-1.5 ಟನ್ ಸ್ಟೇನ್ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಬ್ಲಾಕ್ ಅನ್ನು ಭೂಮಿಯಿಂದ 600ರಿಂದ 800 ಕಿಲೋಮೀಟರ್ (372 ರಿಂದ 497 ಮೈಲಿ) ಕಕ್ಷೆಗೆ ತಲುಪಿಸುವ ಗುರಿಯೊಂದಿಗೆ ಸಂಜೆ 5 ಗಂಟೆಗೆ ಉಡಾಯಿಸುವ ನಿರೀಕ್ಷೆಯಿದೆ.
ರಾಕೆಟ್ ಒಳಗೆ ಕೆಲವು ವಾಲ್ವ್‌ಗಳನ್ನು ಪರೀಕ್ಷಿಸಲು ಎಂಜಿನಿಯರ್‌ಗಳಿಗೆ ಹೆಚ್ಚಿನ ಸಮಯ ಬೇಕಾಗಿದ್ದರಿಂದ ರಾಕೆಟ್ ಉಡಾವಣೆ ಸಮಯ ನಿಗದಿ ವಿಳಂಬವಾಗಿದೆ ಎಂದು ದಕ್ಷಿಣ ಕೊರಿಯಾದ ಉಪ ವಿಜ್ಞಾನ ಸಚಿವ ಯೊಂಗ್ ಸುದ್ದಿಗಾರರಿಗೆ ತಿಳಿಸಿದರು. ಯಾವುದೇ ಸಮಸ್ಯೆಗಳು ತಕ್ಷಣವೇ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ನರೋ ಬಾಹ್ಯಾಕಾಶ ಕೇಂದ್ರದ ಉಡಾವಣೆ ಸಾಧ್ಯತೆ
ಇಂಜಿನಿಯರ್‌ಗಳು ಬುಧವಾರ ರಾತ್ರಿ 47 ಮೀಟರ್ (154 ಅಡಿ) ರಾಕೆಟ್ ಅನ್ನು ದಕ್ಷಿಣದ ಕರಾವಳಿಯ ಒಂದು ಸಣ್ಣ ದ್ವೀಪದಲ್ಲಿ ದೇಶದ ಏಕೈಕ ಬಾಹ್ಯಾಕಾಶ ನಿಲ್ದಾಣವಾದ ನರೋ ಬಾಹ್ಯಾಕಾಶ ಕೇಂದ್ರದ ಉಡಾವಣಾ ಪ್ಯಾಡ್‌ನಲ್ಲಿ ಇರಿಸಿದ್ದಾರೆ.
1990ರ ದಶಕದ ಆರಂಭದಿಂದಲೂ ತನ್ನ ಉಪಗ್ರಹಗಳನ್ನು ಉಡಾವಣೆ ಮಾಡಲು ಇತರ ದೇಶಗಳನ್ನು ಅವಲಂಬಿಸಿದ ದಕ್ಷಿಣ ಕೊರಿಯಾ, ಇದೀಗ ತನ್ನದೇ ತಂತ್ರಜ್ಞಾನದೊಂದಿಗೆ ನೂರಿ ರಾಕೆಟ್ ಮೂಲಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ 10ನೇ ರಾಷ್ಟ್ರವಾಗಲು ಪ್ರಯತ್ನಿಸುತ್ತಿದೆ. 'ನೂರಿ' ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾದ ದೇಶದ ಮೊದಲ ಬಾಹ್ಯಾಕಾಶ ಉಡಾವಣಾ ವಾಹನ.
ಮೇ 2022ಕ್ಕೆ ಮೊದಲು ಉಡಾವಣೆಗೆ ಸಿದ್ಧತೆ
ಕೊರಿಯಾ ಏರೋಸ್ಪೇಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ನೂರಿ ಉಪಗ್ರಹದೊಂದಿಗೆ ಮೇ 2022ರಲ್ಲಿ ಮೊದಲು ಡಮ್ಮಿ ಸಾಧನದೊಂದಿಗೆ ಮತ್ತೊಂದು ಉಡಾವಣೆಯನ್ನು ಒಳಗೊಂಡಂತೆ ನೂರಿಯನ್ನು ಮತ್ತಷ್ಟು ಪರೀಕ್ಷಿಸಲು ಯೋಜಿಸಿದ್ದಾರೆ.
ದಕ್ಷಿಣ ಕೊರಿಯಾ ಈ ಹಿಂದೆ 2013 ರಲ್ಲಿ ನರೋ ಅಂತರಿಕ್ಷ ಯಾನದಿಂದ ಬಾಹ್ಯಾಕಾಶ ಉಡಾವಣಾ ವಾಹನವನ್ನು ಉಡಾವಣೆ ಮಾಡಿತ್ತು. ಇದನ್ನು ಮುಖ್ಯವಾಗಿ ರಷ್ಯಾದ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ.
ಹಲವು ವರ್ಷಗಳ ವಿಳಂಬ ಮತ್ತು ಸತತ ವೈಫಲ್ಯಗಳ ನಂತರ 2009ರಲ್ಲಿ ತನ್ನ ಮೊದಲ ಪರೀಕ್ಷೆಯ ಸಮಯದಲ್ಲಿ ಅಪೇಕ್ಷಿತ ಎತ್ತರವನ್ನು ತಲುಪಿತು. ಆದರೆ, ಉಪಗ್ರಹವನ್ನು ಕಕ್ಷೆಗೆ ಹೊರಹಾಕಲು ವಿಫಲವಾಯಿತು. ನಂತರ 2010 ರಲ್ಲಿ ಎರಡನೇ ಪರೀಕ್ಷೆಯ ಸಮಯದಲ್ಲಿ ಉಡಾವಣೆಯಾದ ಸ್ವಲ್ಪ ಸಮಯದ ನಂತರ ಸ್ಫೋಟಗೊಂಡಿತು.
ಇದನ್ನೂ ಓದಿ:2024ರ ವೇಳೆಗೆ ಚಂದ್ರನಲ್ಲಿಗೆ ಮೊದಲ ಮಹಿಳೆ.. ಭರ್ಜರಿಯಾಗೇ ಸನ್ನದ್ಧವಾಗ್ತಿದೆ ನಾಸಾ
2024ರ ವೇಳೆಗೆ ದಕ್ಷಿಣ ಕೊರಿಯಾ ಘನ ಇಂಧನ ಬಾಹ್ಯಾಕಾಶ ಉಡಾವಣಾ ರಾಕೆಟ್ ಅನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ.ಇದನ್ನು ಶೀಘ್ರವಾಗಿ ಉಡಾವಣೆ ಮಾಡಲು ಹೆಚ್ಚು ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ.