ರಷ್ಯಾ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೈಬೀರಿಯಾ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಸೈಬೀರಿಯಾದ ವಿದ್ಯುತ್ ಸ್ಥಾವರದಲ್ಲಿ ಶೇಖರಣೆ ಮಾಡಲಾಗಿದ್ದ ಸುಮಾರು 20,000 ಟನ್ ಡೀಸೆಲ್ ಇಲ್ಲಿನ ಅಂಬರ್ನಾಯಾ ನದಿಗೆ ಸೋರಿಕೆಯಾಗಿತ್ತು. ಇದು ಇಲ್ಲಿನ ಪ್ರಮುಖ ಜಲ ಮಾರ್ಗಗಳಲ್ಲಿ ಹರಡಿದ ಕಾರಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು.
ಮಾಸ್ಕೋದ ಈಶಾನ್ಯಕ್ಕೆ ಸುಮಾರು 3,000 ಕಿಲೋಮೀಟರ್ (1,860 ಮೈಲಿ) ದೂರದಲ್ಲಿರುವ ನೊರಿಲ್ಸ್ಕ್ ನಗರದ ಹೊರವಲಯದಲ್ಲಿ ಈ ಘಟನೆ ಶುಕ್ರವಾರ ಸಂಭವಿಸಿದೆ. ಇಲ್ಲಿನ ಅಂಬರ್ನಾಯಾ ನದಿಗೆ ಡಿಸೇಲ್ ಸೋರಿಕೆಯಾಗಿತ್ತು. ಇದು ಅಲ್ಲಿನ ಸರೋವರಗಳಿಗೆ ಹರಿದು ಮುಂದೆ ಬೇರೊಂದು ನದಿಗೆ ಸೇರಿ, ಅಲ್ಲಿಂದ ಆರ್ಕಟಿಕ್ ಸಾಗರಕ್ಕೆ ಸೇರುವ ಜಲಮಾರ್ಗ. ಹಾಗಾಗಿ ಘಟನೆ ನಡೆದ ತಕ್ಷಣವೇ ಇಲ್ಲಿ ಭೌತಿಕ ಅಡೆತಡೆಗಳನ್ನು ಹಾಕಲಾಯಿತು.